ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಶವದೆದುರು ಮಗನ ಆರ್ತನಾದ: ಕರುಳು ಕಿವುಚಿದ ಆ ಚಿತ್ರ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದ ತಂದೆ ಒಂದೆಡೆ ಶವವಾಗಿ ಮಲಗಿದ್ದಾರೆ. ಅವರ ತಲೆಯ ಕೈ ಇಟ್ಟು ಪುಟ್ಟ ಮಗ ಪಕ್ಕದಲ್ಲೇ ಬಿಕ್ಕುತ್ತಿದ್ದಾನೆ... ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾತ್ರವಲ್ಲ, ಈ ಚಿತ್ರದ ಮೂಲಕವೇ ಆ ಸಂತ್ರಸ್ತ ಕುಟುಂಬಕ್ಕೆ ದೇಣಿಗೆ ಎತ್ತುವ ಕಾರ್ಯ ನಡೆಯುತ್ತಿದ್ದು, ಸಾಮಾಜಿಕ ಮಾಧ್ಯಮಗಳ ಅಭಿಯಾನದ ಮೂಲಕವೇ ಇದುವರೆಗೆ 50 ಲಕ್ಷ ರೂ. ಸಂಗ್ರಹವಾಗಿದೆ!

ಮ್ಯಾನ್ ಹೋಲ್‌ ಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವುಮ್ಯಾನ್ ಹೋಲ್‌ ಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಈ ಚಿತ್ರದ ಬಗ್ಗೆ ಮಾತನಾಡಿ, ತಮ್ಮ ಅನುಕಂಪ ವ್ಯಕ್ತಪಡಿಸಿದ್ದಾರೆ. 'ಈ ಚಿತ್ರ ಅಂತಾರಾಷ್ಟ್ರೀಯ ಪತ್ರಿಕೆಗಳ ಹೆಡ್ ಲೈನ್ ಆಗಿದೆ. ಆದರೂ ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರ ಬದುಕು ಬದಲಾಗಿಲ್ಲ. ನಮ್ಮ ಪ್ರಧಾನಿಯವರ 'ಸ್ವಚ್ಛ ಭಾರತ' ಕೇವಲ ಘೋಷಣೆಯಾಗಿಯೇ ಉಳಿದಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಘಟನೆಯ ವಿವರ

ಕಳೆದ ಶುಕ್ರವಾರ ಅಂದರೆ ಸೆಪ್ಟೆಂಬರ್ 14 ರಂದು ರಾಜಧಾನಿ ದೆಹಲಿಯ ದ್ವಾರಕಾದ ದಾಬ್ರಿ ಎಕ್ಸ್ ಟೆನ್ಷನ್ ಬಳಿ ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದ ಅನಿಲ್ ಎಂಬ ಕಾರ್ಮಿಕ ಚರಂಡಿಯಲ್ಲಿ ಬಿದ್ದು, ವಿಷಪೂರಿತ, ಕೊಳಕು ಗಾಳಿ ದೇಹ ಸೇರಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದರು.

ಅವರ ಕುಟುಂಬ ಅದೆಷ್ಟು ಬಡತನದಲ್ಲಿದೆ ಎಂದರೆ ಮೃತ ಅನಿಲ್ ಅವರ ಶವಸಂಸ್ಕಾರಕ್ಕೂ ಕುಟುಂಬದ ಬಳಿ ಹಣವಿರಲಿಲ್ಲ. ಅನಿಲ್ ಅವರ ಪತ್ನಿ ಮತ್ತು ಮೂವರು ಮಕ್ಕಳ ಭವಿಷ್ಯ ಪೂರ್ತಿ ಕತ್ತಲಾಗಿದೆ.

Array

ಕರುಳು ಕಿವುಚುವ ಚಿತ್ರ

ಪೋಸ್ಟ್ ಮಾರ್ಟಮ್ ನಂತರ ಶವಸಸ್ಕಾರಕ್ಕೆಂದು ಮನೆಯ ವರಾಂಡದಲ್ಲಿ ತಂದಿಟ್ಟ ತಂದೆಯ ಶವದ ಮೇಲೆ ತನ್ನ ಕೈ ಇಟ್ಟು, ಮುಗ್ಧ ಮಗ ಬಿಕ್ಕುತ್ತಿರುವ ಕರುಳು ಕಿವುಚುವಂಥ ದೃಶ್ಯವನ್ನುಹಿಂದುಸ್ಥಾನ್ ಟೈಮ್ಸ್ ನ ಪತ್ರಕರ್ತರೊಬ್ಬರು ಕ್ಲಿಕ್ಕಿಸಿದ್ದರು. ಈ ಚಿತ್ರವನ್ನೇ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ ಆ ಕುಟುಂಬಕ್ಕೆ ಹಣ ದೇಣಿಗೆ ನೀಡುವಂತೆ ಕೋರಿದ್ದರು. ಮಾನವೀಯತೆ ಇನ್ನೂ ಸತ್ತಿಲ್ಲ ಎಂಬುದು ಸಾಬೀತಾಯ್ತು. ಆ ಚಿತ್ರವನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 50 ಲಕ್ಷ ರೂ.ನಷ್ಟು ಹಣ ಸಂಗ್ರಹವಾಗಿದೆ.

37 ವರ್ಷ ವಯಸ್ಸಿನ ಅನಿಲ್ ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ 20 ಅಡಿ ಆಳಕ್ಕೆ ಬಿದ್ದಿದ್ದರು, ಅವರನ್ನು ಮೇಲಕ್ಕೆತ್ತಿ ತಕ್ಷಣವೇ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಅವರು ಆಗಲೇ ಮೃತರಾಗಿದ್ದಾರೆಂದು ಘೋಷಿಸಲಾಗಿತ್ತು.

ಆಂಧ್ರ: ಡೈನಮೈಟ್‌ ಸ್ಟೋಟ 9 ಕಲ್ಲು ಕ್ವಾರಿ ಕಾರ್ಮಿಕರ ದುರ್ಮರಣಆಂಧ್ರ: ಡೈನಮೈಟ್‌ ಸ್ಟೋಟ 9 ಕಲ್ಲು ಕ್ವಾರಿ ಕಾರ್ಮಿಕರ ದುರ್ಮರಣ

ಅಪ್ಪಾ... ಎಂದು ಬಿಕ್ಕಿದ ಮಗು!

ಆ ಹುಡುಗ ತನ್ನ ತಂದೆಯ ಶವದೆದುರು ತೆರಳಿ, ಶವದ ಮುಖಕ್ಕೆ ಮುಚ್ಚಿದ್ದ ಬಟ್ಟೆಯನ್ನು ತೆರೆದು, ಅದರ ಮೇಲೆ ಕೈಯಿಟ್ಟು.. 'ಅಪ್ಪಾ...' ಎನ್ನುತ್ತ ಬಿಕ್ಕುತ್ತಿದ್ದಾನೆ. ದೆಹಲಿಯಲ್ಲಿ ಶುಕ್ರವಾರ ಮೃತನಾದ ಬಡ ಕಾರ್ಮಿಕನ ಕತೆ ಇದು. ಆತನ ಶವಸಂಸ್ಕಾರಕ್ಕೂ ಕುಟುಂಬದ ಬಳಿ ಹಣವಿರಲಿಲ್ಲ ಎಂದಿದ್ದಾರೆ ಶಿವ್ ಸನ್ನಿ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಇದು ಅನಿಲ್ ಒಬ್ಬರ ಕತೆಯಲ್ಲ, ಒಳಚರಂಡಿ ಸ್ವಚ್ಛಗೊಳಿಸುವ ಸಾವಿರಾರು ಕಾರ್ಮಿಕರ ಅಭದ್ರ ಬದುಕಿನ ಕತೆ. ಇಂಥ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ರಕ್ಷಣಾ ಸಾಮಗ್ರಿಗಳನ್ನು ನೀಡುತ್ತಿಲ್ಲ. ಅಕಸ್ಮಾತ್ ಅವರು ಮೃತರಾದರೆ ಅವರ ಕುಟುಂಬದ ಕತೆ ಏನು? ಇಂಥ ಹತ್ಯೆಗಳನ್ನು ತಪ್ಪಿಸುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಸೂಕ್ತ ನಿರ್ಧಾರಗಳಿಲ್ಲ ಎಮದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕನಕಪುರ: ಬಾಯ್ಲರ್ ನಲ್ಲಿ ಉಸಿರುಗಟ್ಟಿ ಮೂವರು ಕಾರ್ಮಿಕರ ಸಾವುಕನಕಪುರ: ಬಾಯ್ಲರ್ ನಲ್ಲಿ ಉಸಿರುಗಟ್ಟಿ ಮೂವರು ಕಾರ್ಮಿಕರ ಸಾವು

English summary
A photograph of a sewage worker who died after allegedly inhaling toxic gases, in Dwarka’s Dabri Extension in the national capital on Sep 14 becomes viral on social media. This Photograph helped to raise nearly 50 lakh rupees for his family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X