ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೃತಸರ ದುರಂತಕ್ಕೆ ಪರಿಹಾರ ನೀಡಲ್ಲ: ರೈಲ್ವೇ ಇಲಾಖೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 20: ಪಂಜಾಬಿನ ಅಮೃತಸರದಲ್ಲಿ ಸಂಭವಿಸಿದ ರೈಲ್ವೇ ದುರಂತದಲ್ಲಿ ಮೃತರಾದವರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ರೈಲ್ವೇ ಇಲಾಖೆ ಯಾವುದೇ ಕಾರಣಕ್ಕೂ ಪರಿಹಾರ ನೀಡುವುದಿಲ್ಲ ಎಂದು ಹೇಳಿದೆ.

ರಾವಣನ ಪ್ರತಿಕೃತಿ ಸುಡುವುದನ್ನು ನೋಡಲು ಹೋಗಿ ತಾವೇ ಬಲಿಯಾದರುರಾವಣನ ಪ್ರತಿಕೃತಿ ಸುಡುವುದನ್ನು ನೋಡಲು ಹೋಗಿ ತಾವೇ ಬಲಿಯಾದರು

ರೈಲ್ವೇ ಅಪಘಾತದಿಂದ ಸಂಭವಿಸಿದ ದುರಂತ ಇದಲ್ಲ. ಇದರಲ್ಲಿ ರೈಲ್ವೇ ಇಲಾಖೆಯ ಪಾತ್ರವೇನೂ ಇಲ್ಲ ಎಂದು ಅದು ಸ್ಪಷ್ಟನೆ ನೀಡಿದೆ. ಘಟನೆ ಕುರಿತು ರೈಲ್ವೇ ಇಲಾಖೆಯ ವಿರುದ್ಧ ತನಿಖೆ ನಡೆಸುವ ಅಗತ್ಯವಿಲ್ಲ. ತಿರುವಿನಲ್ಲಿ ರೈಲನ್ನು ನಿಧಾನ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಆದ್ದರಿಂದ ತನಿಖೆ ಮಾಡುವ ಅಗತ್ಯವೇನಿದೆ ಎಂದು ಕೇಂದ್ರ ರೈಲ್ವೇ ಇಲಾಖೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.

ನಾನು ಪಲಾಯನ ಮಾಡಿಲ್ಲ: ಸಿಧು ಪತ್ನಿಯಿಂದ ಸಮಜಾಯಿಷಿನಾನು ಪಲಾಯನ ಮಾಡಿಲ್ಲ: ಸಿಧು ಪತ್ನಿಯಿಂದ ಸಮಜಾಯಿಷಿ

ರೈಲ್ವೇ ನಿಲ್ದಾಣದ ಬಳಿ ಇಂಥ ಕಾರ್ಯಕ್ರಮಗಳು ನಡೆಯದಂತೆ ಆಯಾ ಸ್ಥಳದ ಮೇಲ್ವಿಚಾರಕರು ಗಮನ ಹರಿಸಬೇಕು. ಇದರಲ್ಲಿ ರೈಲ್ವೇ ಇಲಾಖೆಯ ತಪ್ಪಿಲ್ಲ ಎಂದು ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.

ಘೋರ ರೈಲು ದುರಂತಕ್ಕೆ ಕಂಬನಿ ಮಿಡಿದ ಎಚ್ ಡಿ ಕುಮಾರಸ್ವಾಮಿಘೋರ ರೈಲು ದುರಂತಕ್ಕೆ ಕಂಬನಿ ಮಿಡಿದ ಎಚ್ ಡಿ ಕುಮಾರಸ್ವಾಮಿ

Amritsar tragedy is not an accident: railways will not give componsation

ಶುಕ್ರವಾರ ರಾತ್ರಿ ವಿಜಯದಶಮಿ ಉತ್ಸವದಂದು ರಾವಣನ ಪ್ರತಿಕೃತಿಯನ್ನು ದಹಿಸುತ್ತ, ದಸರಾ ಆಚರಿಸುತ್ತಿದ್ದ ಜನರ ಮೇಲೆ ರೈಲು ಹರಿದ ಪರಿಣಾಮ ಸಂಭವಿಸಿದ ದುರಂತದಲ್ಲಿ 61 ಜನ ಮೃತಪಟ್ಟಿದ್ದರು. ಇತ್ತೀಚೆಗೆ ನಡೆದ ಘೋರ ದುರಂತ ಇದು ಎನ್ನಲಾಗಿದೆ.

English summary
The Indian Railways will not be giving any compensation to victims of the Amritsar mishap as they are not including it in the list of train accidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X