ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ- ನೆಹರು ಹೆಸರಿನಲ್ಲಿ 441 ಯೋಜನೆಗಳಿವೆ, ಮುಂದೇನು?

By Srinath
|
Google Oneindia Kannada News

ನವದೆಹಲಿ, ಮೇ 30- ದೇಶದಲ್ಲಿ ಹಳೆಯ ಕಾಂಗ್ರೆಸ್ ಸರಕಾರ ಅಧಿಕಾರ ಕಳೆದುಕೊಂಡ ಪರಿಣಾಮ ಬಿಜೆಪಿ ನೇತೃತ್ವದ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಚಿಂತನೆಗಳೊಂದಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿ ಸರ್ಕಾರ ಈ ಸಂದರ್ಭದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರಗಳು ಗಾಂಧಿ, ನೆಹರು ಹೆಸರಿನಲ್ಲಿ ಜಾರಿಗೆ ತಂದಿರುವ ಅನೇಕ ಯೋಜನೆಗಳ ಬಗ್ಗೆ ಪುನರ್ ವಿಮರ್ಶೆ ನಡೆಸುತ್ತಿದೆ.

ಕುತೂಹಲದ ಸಂಗತಿಯೆಂದರೆ ಗಾಂಧಿ ಹೆಸರಿನಲ್ಲಿ ಚಾಲ್ತಿಯಲ್ಲಿರುವ ನೆಹರೂ ಕುಟುಂಬವು ಇದುವರೆಗೂ ಕೇವಲ ಒಂದೇ ಒಂದು ಯೋಜನೆಗೆ ಮಹಾತ್ಮ ಗಾಂಧಿ ಹೆಸರಿನಲ್ಲಿ ನಾಮಕರಣ ಮಾಡಿದೆಯಷ್ಟೆ! ಇನ್ನು ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಟ್ ಅವರಂತಹ ಮಹಾಮಹಿಮರ ಹೆಸರಿನಲ್ಲಿ ಒಂದೇ ಒಂದು ಯೋಜನೆಯೂ ದೇಶದಲ್ಲಿ ಚಾಲ್ತಿಯಲ್ಲಿಲ್ಲ!!

ಈ ತಾರತಮ್ಯ, ಸ್ವಜನಪ್ರೇಮದ ವಿರುದ್ಧ ಎ ಸೂರ್ಯಪ್ರಕಾಶ್ ಅವರು 2009ರಲ್ಲಿ ಚುನಾವಣಾ ಆಯೋಗಕ್ಕೆ ಮೊರೆಹೋಗಿದ್ದರು. ಇದೀಗ ಮೋದಿ ನೇತೃತ್ವದ ನೂತನ ಸರ್ಕಾರ ಏನು ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಲು ನಿರ್ಧರಿಸಿದ್ದಾರೆ. ಗಾಂಧಿ, ನೆಹರುಗಳ ಬಗ್ಗೆ ನಮಗೇನೂ ದ್ವೇಷವಿಲ್ಲ. ಆದರೆ ಆ ಮೂರೂ ಹೆಸರುಗಳ ಸುತ್ತ ಮಾತ್ರವೇ ಈ ಯೋಜನೆಗಳು ಗಿರಕಿ ಹೊಡೆಯುತ್ತವೆ. ದೇಶಕ್ಕಾಗಿ ಪ್ರಾಣತೆತ್ತ ಬೇರೆ ನಾಯಕರು ಯಾರೂ ಇಲ್ಲವಾ? ಅವರು ಯಾರೂ ಇವರ ಕಣ್ಣೀಗೆ ಬೀಳಿಲ್ಲವಾ ಎಂದು ಸೂರ್ಯಪ್ರಕಾಶ್ ತುಸು ಖಾರವಾಗಿಯೇ ಪ್ರಶ್ನಿಸುತ್ತಾರೆ.

ಯೋಜನೆಗಳ ರದ್ದು ಅಥವಾ ಮರುನಾಮಕರಣ?:

among-441-many-projects-may-to-lose-gandhi-nehru-tags
ಮೋದಿ ಸರ್ಕಾರ ಇಂತಹ ಯೋಜನೆಗಳನ್ನು ಹಾಗೆಯೇ ಉಳಿಸಿಕೊಂಡು ಅವುಗಳ ಹೆಸರುಗಳನ್ನು ಬದಲಾಯಿಸಲು ಆಲೋಚಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಎಲ್ಲಾ ಯೋಜನೆಗಳಿಗೆ ಶೈಕ್ಷಣಿಕ ತಜ್ಞರು, ಸ್ವತಂತ್ರ ಹೋರಾಟಗಾರರು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರು ಸೇರಿದಂತೆ ಅನೇಕ ಗಣ್ಯರ ಹೆಸರುಗಳೊಂದಿಗೆ ಪುನರ್‌ನಾಮಕರಣ ಮಾಡಲು ಕೇಂದ್ರದ ಎನ್‌ಡಿಎ ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ.

ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ನಿನ್ನೆ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಹೆಸರಿನಲ್ಲಿದ್ದ ರಾಷ್ಟ್ರೀಯ ನಗರ ಪುನರ್ ನವೀಕರಣ ಯೋಜನೆಯನ್ನು ಕೈಬಿಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಮಧ್ಯೆ, ನಾಗರಿಕ ವಿಮಾನಯಾನ ಖಾತೆ ಸಚಿವ ಅಶೋಕ್ ಗಜಪತಿ ರಾಜು ಅವರು ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಆಂಧ್ರದ ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಹೆಸರಿನಲ್ಲಿ ಮರುನಾಂಕರಣ ಮಾಡಬೇಕೆಂದು ಬಯಸಿದ್ದಾರೆ.

ಹಾಗಾದರೆ ಬನ್ನಿ, ಗಾಂಧಿ ಮತ್ತು ನೆಹರು ಹೆಸರಿನಲ್ಲಿ ಎಷ್ಟೆಲ್ಲಾ ಯೋಜನೆಗಳಿವೆ ತಿಳಿಯೋಣ. ಮಾಜಿ ಪ್ರಧಾನಿಗಳಾದ ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಹಾಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಒಟ್ಟು 441 ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ಉಸ್ತುವಾರಿಯಲ್ಲಿ ಚಾಲ್ತಿಯಲ್ಲಿವೆ.

ಕೇಂದ್ರದ ಉಸ್ತುವಾರಿಯಲ್ಲಿರುವ 58 ಯೋಜನೆಗಳ ಪೈಕಿ 2 ಲಕ್ಷ ಕೋಟಿ ರೂ. ಮೌಲ್ಯದ 17 ಯೋಜನೆಗಳು ನೆಹರು, ಗಾಂಧಿ ಕುಟುಂಬದವರ ಹೆಸರಿನಲ್ಲಿವೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿ 10ಕ್ಕೂ ಹೆಚ್ಚು ಯೋಜನೆಗಳಿವೆ.

ಕೇಂದ್ರದ ಯೋಜನೆಗಳಾದ ರಾಜೀವ್‌ ಗಾಂಧಿ ಗ್ರಾಮೀಣ ವಿದ್ಯಾ ಕಿರಣ್ ಯೋಜನೆ, ಜವಾಹರ ಲಾಲ್ ರೋಜ್‌ಗಾರ್ ಯೋಜನೆ, ಇಂದಿರಾ ವಿಕಾಸ್ ಪತ್ರ , ಇಂದಿರಾ ಆವಾಜ್ ಯೋಜನೆ ಮುಂತಾದ ಯೋಜನೆಗಳಿವೆ. ರಾಜ್ಯ ಯೋಜನೆಗಳಾದ ರಾಜೀವ್ ರತ್ನ ಆವಾಜ್ ಯೋಜನೆ, ಇಂದಿರಾ ಗಾಂಧಿ ಮಹಿಳಾ ಸಂರಕ್ಷಣಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಇವೆ.

ಇದೇ ರೀತಿ ಗಾಂಧಿ ಕುಟುಂಬದ ಹೆಸರಿನಲ್ಲಿ ದೇಶದ ವಿವಿಧ ಭಾಗದಲ್ಲಿ ಶೈಕ್ಷಣಿಕ ಕೇಂದ್ರಗಳನ್ನು ತೆರೆಯಲಾಗಿದೆ. ಇದರಲ್ಲಿ ಪ್ರಮುಖವಾಗಿ ಇಂದಿರಾಗಾಂಧಿ ರಾಷ್ಟ್ರೀಯ ಅರ್ಬನ್ ಅಕಾಡೆಮಿ, ಪುರುಸ್ತಾ ಗಂಗ್ ರಾಷ್ಟ್ರೀಯ ಅಕಾಡೆಮಿ, ರಾಜೀವ್‌ ಗಾಂಧಿ ನಾಗರಿಕ ವಿಮಾನಯಾನ ಅಕಾಡೆಮಿ, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಇವೆ.

ಇನ್ನು, ವಿದ್ಯುತ್ ಕ್ಷೇತ್ರದಲ್ಲಿ ರಾಜೀವ್‌ ಗಾಂಧಿ ಸೂಪರ್ ಥರ್ಮಲ್, ಇಂದಿರಾ ಗಾಂಧಿ ಸೂಪರ್ ಥರ್ಮಲ್ ಯೋಜನೆಗಳಿ ಚಾಲ್ತಿಯಲ್ಲಿವೆ. ಹಾಗೆಯೇ, ಶೈಕ್ಷಣಿಕ ಸಂಸ್ಥೆಗಳಾದ ಇಂದಿರಾ ಗಾಂಧಿ ಸೆಂಟರ್ ಫಾರ್ ಇಂಡಿಯನ್ ಕಲ್ಚರ್, ಜವಾಹರ ಲಾಲ್ ನೆಹರು ಕೇಂದ್ರ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಲಂಡನ್ನಿನಲ್ಲಿರುವ ನೆಹರು ಮೆಮೋರಿಯಲ್ ಗ್ಯಾಲರಿ ಮುಂತಾದವು.

ಇದೇ ರೀತಿ ಗಾಂಧಿ ಕುಟುಂಬದ ಹೆಸರಿನಲ್ಲಿ 17 ಕೇಂದ್ರ ಸರ್ಕಾರದ ಯೋಜನೆಗಳು, 49 ರಾಜ್ಯ ಯೋಜನೆಗಳು, 9 ವಿಮಾನ ನಿಲ್ದಾಣ, 9 ಕ್ರೀಡಾ ಅಕಾಡೆಮಿ, 26 ಕ್ರೀಡಾ ತರಬೇತಿ ಕೇಂದ್ರಗಳು, 26 ಕ್ರೀಡಾ ಪ್ರಶಸ್ತಿಗಳು, 99 ವಿಶ್ವವಿದ್ಯಾನಿಲಯ, 17 ವಿದ್ಯಾರ್ಥಿ ವೇತನ, 17 ಫೆಲೋಶಿಪ್, 17 ವಸ್ತು ಸಂಗ್ರಹಾಲಯ, 17 ಶೌಚಾಲಯ, 17 ರಾಷ್ಟ್ರೀಯ ಉದ್ಯಾನವನ, 4 ಭೌಗೋಳಿಕ ಅಧ್ಯಯನ ಕೇಂದ್ರ, 17 ಬ್ಯಾಂಕ್‌, 4 ವಿದ್ಯುತ್ ಘಟಕ, 41 ಪ್ರಶಸ್ತಿ , 37 ಆಸ್ಪತ್ರೆ, 34 ಸಂಸ್ಥೆ , 70 ಕಟ್ಟಡಗಳು ಸೇರಿದಂತೆ ಒಟ್ಟು 441 ಯೋಜನೆಗಳು ಅವರ ಹೆಸರಿನಲ್ಲಿವೆ.

English summary
Lok Sabha election results 2014 effect: From Kashmir to Kerala there are as many as 441 projects in the names with Gandhi, Nehru tags. Many such projects may lose their gandhi, nehru tags in the NDA's new regime.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X