ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ-ಅಮಿತ್ ಶಾ ಸಭೆ: ಲಾಕ್‌ಡೌನ್‌ ಕುರಿತು ಕೇಂದ್ರದ ಮುಂದಿರುವ ಅಂಶಗಳು

|
Google Oneindia Kannada News

ದೆಹಲಿ, ಮೇ 29: ಈ ವಾರಾಂತ್ಯಕ್ಕೆ ದೇಶದಲ್ಲಿ ಲಾಕ್‌ಡೌನ್‌ 4.0 ಅಂತ್ಯವಾಗಲಿದೆ. ಸೋಮವಾರದಿಂದ ಲಾಕ್‌ಡೌನ್‌ 5.0 ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೀಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದು, ಹಲವು ಪ್ರಮುಖ ಅಂಶಗಳನ್ನು ಚರ್ಚಿಸಲಿದ್ದಾರೆ.

Recommended Video

ಕಳ್ಳ ಮಾರ್ಗದಲ್ಲಿ ಬರುವವರ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ | Oneindia Kannada

ಗುರವಾರವಷ್ಟೇ ಗೋವಾ ಮುಖ್ಯಮಂತ್ರಿ ಸೇರಿದಂತೆ ಕೆಲವು ರಾಜ್ಯಗಳ ಸಿಎಂಗಳನ್ನು ಅಮಿತ್ ಶಾ ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಇದಾದ ಒಂದು ದಿನ ಬಳಿಕ ಮೋದಿ ಅವರ ಜೊತೆ ಸಭೆ ನಡೆಸಲಿದ್ದಾರೆ.

Fact Check: 'ಮನ್ ಕೀ ಬಾತ್'ನಲ್ಲಿ ಲಾಕ್‌ಡೌನ್‌ 5.0 ಘೋಷಣೆ ನಿಜಾನ?Fact Check: 'ಮನ್ ಕೀ ಬಾತ್'ನಲ್ಲಿ ಲಾಕ್‌ಡೌನ್‌ 5.0 ಘೋಷಣೆ ನಿಜಾನ?

ರಾಜ್ಯದ ಸಿಎಂಗಳು ಅಮಿತ್ ಶಾ ಅವರೊಂದಿಗೆ ಹೇಳಿರುವ ಅಂಶಗಳನ್ನು, ಪ್ರಧಾನಿ ಬಳಿ ವರದಿ ನೀಡಲಿದ್ದು, ಜೂನ್ 1ರ ನಂತರ ಏನು ಎಂಬುದನ್ನು ನಿರ್ಧರಿಸಲಿದ್ದಾರೆ. ಮುಂದೆ ಓದಿ..

15 ದಿನ ಲಾಕ್‌ಡೌನ್‌ ಸಾಧ್ಯತೆ

15 ದಿನ ಲಾಕ್‌ಡೌನ್‌ ಸಾಧ್ಯತೆ

ಜೂನ್ 1ರ ನಂತರ ಇನ್ನೂ ಹದಿನೈದು ದಿನಗಳ ಕಾಲ ದೇಶದಲ್ಲಿ ಲಾಕ್‌ಡೌನ್‌ ಜಾರಿಯಾಗಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದರು. ಅಮಿತ್ ಶಾ ಭೇಟಿ ವೇಳೆಯೂ ಇದೇ ಅಂಶವನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ಸೋಂಕಿನ ಸಂಖ್ಯೆ ನಿಯಂತ್ರಣಕ್ಕೆ ಬಾರದೆ ಹಿನ್ನೆಲೆ, ಲಾಕ್‌ಡೌನ್‌ ಮುಂದುವರಿಸುವುದು ಅಗತ್ಯ ಎಂಬ ಅಭಿಪ್ರಾಯವೂ ಮೂಡಿದೆ. ಗೋವಾ ರಾಜ್ಯ ಮಾತ್ರವಲ್ಲ, ಹಲವು ರಾಜ್ಯಗಳು ಲಾಕ್‌ಡೌನ್‌ ಮುಂದುವರಿಸುವ ಇಂಗಿತ ಹೊಂದಿದೆ.

ಕಂಟೈನ್‌ಮೆಂಟ್‌ ಜೋನ್‌ಗಳಲ್ಲಿ ನಿರ್ಬಂಧ ಮುಂದುವರಿಕೆ

ಕಂಟೈನ್‌ಮೆಂಟ್‌ ಜೋನ್‌ಗಳಲ್ಲಿ ನಿರ್ಬಂಧ ಮುಂದುವರಿಕೆ

ದೇಶದಲ್ಲಿ ಪ್ರತಿದಿನವೂ 6 ರಿಂದ 7 ಸಾವಿರಕ್ಕಿಂತ ಹೆಚ್ಚು ಕೇಸ್‌ಗಳು ವರದಿಯಾಗುತ್ತಿದೆ. ದೆಹಲಿ, ಮುಂಬೈ, ಬೆಂಗಳೂರು, ಪುಣೆ, ಥಾಣೆ, ಇಂದೋರ್, ಚೆನ್ನೈ, ಅಹಮದಾಬಾದ್, ಜೈಪುರ, ಸೂರತ್ ಮತ್ತು ಕೋಲ್ಕತ್ತಾ ನಗರಗಳಲ್ಲಿ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ದೇಶದ ಒಟ್ಟು ಕೊರೊನಾ ವೈರಸ್ ಕೇಸ್‌ಗಳ ಪೈಕಿ ಶೇಕಡಾ 71 ರಷ್ಟು ಪ್ರಕರಣಗಳು ಈ ನಗರಗಳಲ್ಲಿ ದಾಖಲಾಗಿದೆ. ಹಾಗಾಗಿ, ಈ ನಗರಗಳಲ್ಲಿ ಲಾಕ್‌ಡೌನ್‌ ನಿರ್ಬಂಧ ಮುಂದುವರಿಸುವ ಲೆಕ್ಕಾಚಾರ ಕೇಂದ್ರದ ಮುಂದಿದೆ.

ಜಿಮ್, ರೆಸ್ಟೋರೆಂಟ್ ತೆರೆಯಲು ಒತ್ತಾಯ

ಜಿಮ್, ರೆಸ್ಟೋರೆಂಟ್ ತೆರೆಯಲು ಒತ್ತಾಯ

ಜೂನ್‌ 1ರ ನಂತರ ರಾಜ್ಯಗಳಲ್ಲಿ ಜಿಮ್ ಮತ್ತು ರೆಸ್ಟೋರೆಂಟ್ ತೆರಯಲು ಅನುಮತಿ ಕೊಡಿ ಎಂಬ ಒತ್ತಾಯ ಬರುತ್ತಿದೆ. ದೇವಸ್ಥಾನಗಳು ತೆರೆಯಲು ಮನವಿ ಬರುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಶೇಕಡಾ 50ರಷ್ಟು ಸಿಬ್ಬಂದಿ ಕೆಲಸ ಮಾಡುವಂತೆ ಅವಕಾಶ ಕಲ್ಪಿಸಲು ಒತ್ತಾಯ ಇದೆ. ಸಿನಿಮಾ ಶೂಟಿಂಗ್ ಆರಂಭಿಸಲು ಅನುಮತಿ ನೀಡಲು ಮನವಿ ಬಂದಿದೆ. ಈ ಬಗ್ಗೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಕೇಂದ್ರದ ಮಾರ್ಗಸೂಚಿಯಲ್ಲಿ ಇದಕ್ಕೆ ಉತ್ತರ ಸಿಗಬಹುದು.

ಭಾನುವಾರದೊಳಗೆ ಕೇಂದ್ರದ ಮಾರ್ಗಸೂಚಿ!

ಭಾನುವಾರದೊಳಗೆ ಕೇಂದ್ರದ ಮಾರ್ಗಸೂಚಿ!

ಮೇ 31ರೊಳಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆ ಇದೆ. ಪ್ರಸ್ತುತ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು ಹಾಗೂ ಗುಜರಾತ್ ಜನರಿಗೆ ಕರ್ನಾಟಕ ಸರ್ಕಾರ ನಿರ್ಬಂಧ ಹೇರಿದೆ. ಕೇಂದ್ರದ ಮಾರ್ಗಸೂಚಿ ನಂತರ ನಿರ್ಧಾರ ಮಾಡಲಾಗುವುದು ತೆಲಂಗಾಣ ಸಿಎಂ ಕೆಸಿ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಚತ್ತೀಸ್‌ಗಢದಲ್ಲಿ, ಜುಲೈ 1 ರಿಂದ ಮಾತ್ರ ಶಾಲೆಗಳು ತೆರೆಯುವ ನಿರ್ಧಾರ ಮಾಡಲಾಗಿದೆ. ಕರ್ನಾಟಕ ಹಾಗೂ ತೆಲಂಗಾಣ ಸರ್ಕಾರವೂ ಶಾಲೆಗಳನ್ನು ಪುನಃ ತೆರೆಯುವ ಕುರಿತು ಕೇಂದ್ರವು ಮಾರ್ಗಸೂಚಿಗಳಿಗೆ ಕಾಯಲಾಗುತ್ತಿದೆ.

English summary
Home minister Amit Shah will meet prime minister Narendra Modi and discuss about lockdown 5.0 strategy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X