ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಗುಣಗಾನ, ಶೀಲಾ ದೀಕ್ಷಿತ್ ಗೆ ಕೃತಜ್ಞತೆ ಅರ್ಪಿಸಿದ ಅಮಿತ್ ಶಾ

|
Google Oneindia Kannada News

ನವದೆಹಲಿ, ಮಾರ್ಚ್ 15: ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವಿಷಯಕ್ಕೆ ಬಂದಾಗ ಮನಮೋಹನ್ ಸಿಂಗ್ ಅವರಿಗಿಂತ ನರೇಂದ್ರ ಮೋದಿ ಅವರೇ ಬಲಶಾಲಿ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಹೇಳಿದ ಮಾತಿಗೆ ಅಮಿತ್ ಶಾ ಧನ್ಯವಾದ ಅರ್ಪಿಸಿದ್ದಾರೆ.

"ಇಡೀ ದೇಶಕ್ಕೂ ಗೊತ್ತಿರುವ ಸತ್ಯವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಒಪ್ಪಿಕೊಳ್ಳದಿದ್ದರೂ, ಅದನ್ನು ಪುನರುಚ್ಚರಿಸಿದ ಶೀಲಾ ದೀಕ್ಷಿತ್ ಅವರಿಗೆ ನನ್ನ ಧನ್ಯವಾದಗಳು" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಅಚ್ಚರಿ ಮೂಡಿಸಿದ ಶೀಲಾ ಹೇಳಿಕೆ: ಉಗ್ರರ ವಿಚಾರದಲ್ಲಿ ಸಿಂಗ್‌ಗಿಂತ ಮೋದಿ ಬಲಅಚ್ಚರಿ ಮೂಡಿಸಿದ ಶೀಲಾ ಹೇಳಿಕೆ: ಉಗ್ರರ ವಿಚಾರದಲ್ಲಿ ಸಿಂಗ್‌ಗಿಂತ ಮೋದಿ ಬಲ

ಚಾನೆಲ್ ವೊಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ಮಾತನಾಡುತ್ತಿದ್ದ ಶೀಲಾ ದೀಕ್ಷಿತ್, ''ಮುಂಬೈ ಭಯೋತ್ಪಾದಕ ದಾಳಿಯ ನಂತರವೂ ಭಯೋತ್ಪಾದಕರ ವಿರುದ್ಧ ಹೋರಾಡುವ ಅಥವಾ ಅವರನ್ನು ನಾಶಮಾಡುವ ಕೆಲಸಕ್ಕೆ ಆಗಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಮುಂದಾಗಲಿಲ್ಲ. ಭಯೋತ್ಪಾದನೆಯ ನಿಗ್ರಹದ ವಿಷಯದಲ್ಲಿ ಮೋದಿಯವರಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಮನಮೋಹನ್ ಸಿಂಗ್ ಅವರಿಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು" ಎಂದಿದ್ದರು.

Amit Shah thanks sheila dikshit for her remark on PM Modi

ಕಾಂಗ್ರೆಸ್ ಆಫರ್‌ಗೆ ಒಲವು ತೋರದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಕಾಂಗ್ರೆಸ್ ಆಫರ್‌ಗೆ ಒಲವು ತೋರದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಆದರೆ ಮೋದಿಯವರೂ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಅವರ ರಾಜಕೀಯ ಹಿತಾಸಕ್ತಿ ಇರುವುದನ್ನು ಅಲ್ಲಗಳೆಯುವಂತಿಲ್ಲ ಎಂದೂ ಶೀಲಾ ದೀಕ್ಷಿತ್ ಹೇಳಿದ್ದರು.

English summary
BJP president Amit Shah has thanked former Delhi Chief Minister Sheila Dikshit for her remarks that former Prime Minister Manmohan Singh was not tough on terrorism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X