ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಆಪ್ತ ವಕೀಲ ಸಿಜೆಯಾಗಿ ನೇಮಕ?

By Mahesh
|
Google Oneindia Kannada News

ನವದೆಹಲಿ, ಜು.11: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಪ್ತ ಅಮಿತ್ ಷಾ ಅವರ ಎರಡು ಕ್ರಿಮಿನಲ್ ಗಳ ವಕೀಲರಾಗಿದ್ದ ಉದಯ್ ಯು ಲಲಿತ್ ಅವರು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಸಾಧ್ಯತೆ ಕಂಡುಬಂದಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದತ್ತು ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿ ಉದಯ್ ಯು.ಲಲಿತ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ತೀರ್ಮಾನಿಸಿದೆ. ಈ ಹಿಂದೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಮಾಜಿ ಅಡ್ವಕೇಟ್ ಜನರಲ್ ಗೋಪಾಲ್ ಸುಬ್ರಮಣಿಯಮ್ ಹೆಸರು ಕೇಳಿಬಂದಿತ್ತು. ಆದರೆ, ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ನೇಮಕ ಮಾಡಿದ್ದ ಕೊಲೀಜಿಯಮ್ ಸಮಿತಿ ಇವರ ಹೆಸರನ್ನು ಕೈ ಬಿಟ್ಟಿತ್ತು.

ಅಂತಿಮವಾಗಿ ಗೋಪಾಲನ್ ಸುಬ್ರಮಣಿಯಮ್ ತಾವು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಲು ನಿರಾಕರಿಸಿರುವುದಾಗಿ ಘೋಷಣೆ ಮಾಡಿದ್ದರು. ಈ ಬಗ್ಗೆ ವಿಪಕ್ಷಗಳಿಂದ ಭಾರಿ ವಿರೋಧ ಕೇಳಿ ಬಂದಿತ್ತು.

Amit Shah's lawyer Uday U Lalit elevated as Supreme Court judge after Gopal Subramanium's rejection

ಇದೀಗ ಕೇಂದ್ರ ಸರ್ಕಾರವು ಉದಯ್ ಯು.ಲಲಿತ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಬಹುತೇಕ ಸಮ್ಮತಿಸಿದೆ. ಮೂರು ದಿನಗಳ ಹಿಂದೆಯಷ್ಟೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಅಮಿತ್ ಷಾ ಅವರ ಹಲವಾರು ಪ್ರಕರಣಗಳನ್ನು ಇವರು ನಿರ್ವಹಣೆ ಮಾಡಿದ್ದರು.

ಸೊಹ್ರಾಬುದ್ದೀನ್ ಶೇಕ್, ತುಳಸಿರಾಮ್ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಷಾ ಪ್ರಮುಖ ಆರೋಪಿಯಾಗಿದ್ದು, ಈ ಎರಡೂ ಪ್ರಕರಣಗಳಲ್ಲಿ ಕೊಲೆ ಮತ್ತು ಪಿತೂರಿ ನಡೆಸಿದ ಆರೋಪವನ್ನು ಅಲ್ಲಗೆಳೆದು ಲಲಿತ್ ಅವರು ವಾದಿಸಿದ್ದಾರೆ. ಅನೇಕ ಪ್ರಕರಣಗಳ ಬಗ್ಗೆ ಉದಯ್ ಯು.ಲಲಿತ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

2005ರಲ್ಲಿ ಅಮಿತ್ ಶಾ ಅವರು ಗುಜರಾತಿನ ಗೃಹ ಸಚಿವರಾಗಿದ್ದ ಕಾಲದಲ್ಲಿ ನಕಲಿ ಎನ್ ಕೌಂಟರ್ ನಲ್ಲಿ ಪೊಲೀಸರು ಉಗ್ರಗ್ರಾಮಿ ಎಂದು ಹೇಳಿ ಸೊಹ್ರಾಬುದ್ದೀನ್ ಅವರನ್ನು ಹತ್ಯೆ ಮಾಡಿದ್ದರು. ಈ ಪ್ರಕರಣದ ಸಾಕ್ಷಿಯಾಗಿದ್ದ ತುಳಸಿ ಪ್ರಜಾಪತಿ ಅವರು ಮರುವರ್ಷ ಹತ್ಯೆ ಮಾಡಲಾಗಿತ್ತು.

2ಜಿ ತರಂಗಗುಚ್ಛ ಹಂಚಿಕೆ ಹಗರಣದ ವಿಶೇಷ ಪ್ರಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಲಲಿತ್ ಅವರು ಸುಪ್ರೀಂಕೋರ್ಟಿನ ಉನ್ನತ ಸ್ಥಾನಕ್ಕೆ ನೇರವಾಗಿ ಆಯ್ಕೆಯಾಗುತ್ತಿರುವ ಆರನೇ ವಕೀಲರೆನಿಸಿದ್ದಾರೆ.

English summary
Senior lawyer Uday U Lalit, who represented Prime Minister Narendra Modi's close aide Amit Shah in two high profile criminal cases, is likely to be elevated as a Supreme Court judge after the government controversially rejected Gopal Subramanium last month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X