ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಣಾಳಿಕೆ ಬಿಡುಗಡೆಗೂ ಮುನ್ನ ಅಡ್ವಾಣಿ, ಜೋಷಿ ಮನವೊಲಿಕೆಗೆ ನಿಂತ ಶಾ!?

|
Google Oneindia Kannada News

ನವದೆಹಲಿ, ಏಪ್ರಿಲ್ 08: ಲೋಕಸಭಾ ಚುನಾವಣೆಗೆ ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ಅದಕ್ಕೂ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಟಿಕೆಟ್ ವಂಚಿತರಾದ, ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳೀ ಮನೋಹರ್ ಜೋಷಿ ಅವರನ್ನು ಭೇಟಿಯಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಹಲವು ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದ ಅಡ್ವಾಣಿ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿರಲಿಲ್ಲ. ಬದಲಾಗಿ ಈ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಳಿದಿದ್ದರು. ಈ ಕುರಿತು ಎಲ್ ಕೆ ಅಡ್ವಾಣಿ ಅವರಲ್ಲಿ ಸಾಕಷ್ಟು ಬೇಸರವಿದೆ ಎನ್ನಲಾಗುತ್ತಿದೆ. ತನ್ನಿಮಿತ್ತ ಅವರು ಇಂದು ಅಡ್ವಾಣಿ ಆವರನ್ನು ಭೇಟಿಯಾಗಲಿದ್ದಾರೆ.

ಬಿಜೆಪಿ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಮುರಳಿ ಮನೋಹರ್ ಜೋಷಿ ಪತ್ರ ಬಿಜೆಪಿ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಮುರಳಿ ಮನೋಹರ್ ಜೋಷಿ ಪತ್ರ

ಜೊತೆಗೆ ಉತ್ತರ ಪ್ರದೇಶದ ಕಾನ್ಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಮುರಳೀ ಮನೋಹರ್ ಜೋಷಿ ಅವರಿಗೂ ಟಿಕೆಟ್ ನೀಡಲಾಗಿಲ್ಲ.

Amit Shah might be met LK Advani and MM Joshi before manifesto launch

2014 ಕ್ಕೂ ಮುನ್ನ ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸುತ್ತಿದ್ದ ಜೋಷಿ ಅವರಿಗೆ 2014 ರಲ್ಲಿ ಕಾನ್ಪುರದಿಂದ ಟಿಕೆಟ್ ನೀಡಲಾಗಿತ್ತು. ವಾರಣಾಸಿಯಲ್ಲಿ ಪ್ರಧಾನಿ ಮೋದಿ ಸ್ಪರ್ಧಿಸಿದ್ದರು.

2014 ಲೋಕಸಭೆ ಚುನಾವಣೆ : ಒಂದು ವಿಶ್ಲೇಷಣೆ

ಚುನಾವಣೆಯ ಹೊತ್ತಲ್ಲಿ ಇಬ್ಬರೂ ಹಿರಿಯ ನಾಯಕರು ಹೀಗೆ ಮುನಿಸಿಕೊಂಡಿರುವುದು ಪಕ್ಷದ ಭವಿಷ್ಯದ ದೃಷ್ಟಿಯಿಂದಲೂ, ಚುನಾವಣೆಯ ದೃಷ್ಟಿಯಿಂದಲೂ ಒಳ್ಳೆಯ ಬೆಳವಣಿಗೆಯಲ್ಲ ಎಂಬುದನ್ನು ಅರಿತುಕೊಂಡ ಅಮಿತ್ ಶಾ ಇಂದು ಉಭಯ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಲೋಕಸಭೆ ಚುನಾವಣೆ: ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆಲೋಕಸಭೆ ಚುನಾವಣೆ: ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಇಂದು ಬೆಳಿಗ್ಗೆ 11 ಗಂಟೆ ಪ್ರಣಾಳಿಕೆ ಬಿಡುಗಡೆಯಾಗಲಿದ್ದು, ರಾಷ್ಟ್ರೀಯ ಭದ್ರತೆ ಮತ್ತು ಅಭಿವೃದ್ಧಿಯೇ ಬಿಜೆಪಿಯ ಪ್ರಣಾಳಿಕೆಯ ಮೊದಲ ಆದ್ಯತೆಯಾಗಿರಲಿದೆ.

English summary
Lok Sabha elections 2019: BJP president Amit Shah is expected to meet upset party seniors LK Advani and Murli Manohar Joshi before the party's manifesto launch today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X