ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಶಸ್ತ್ರ ಪಡೆಯಲ್ಲಿ ಹೆಚ್ಚಿದ ಕೊರೊನಾ: ಅಮಿತ್ ಶಾ ಕಳವಳ

|
Google Oneindia Kannada News

ನವದೆಹಲಿ, ಮೇ 9: ಬಿಎಸ್ಎಫ್ ಮತ್ತು ಸಿಆರ್ ಪಿಎಫ್ ನಂತಹ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಗೃಹ ಸಚಿವ ಅಮಿತ್ ಶಾ ಆತಂಕ ವ್ಯಕ್ತಪಡಿಸಿದ್ದಾರೆ.

ಇದುವರೆಗೆ ಬಿಎಸ್ಎಫ್ 221 ಸಿಬ್ಬಂದಿಗೆ, ಸಿಆರ್ ಪಿಎಫ್ ನ 161 ಸಿಬ್ಬಂದಿ ಮತ್ತು ಸಿಐಎಸ್ಎಫ್ 35 ಸಿಬ್ಬಂದಿ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 530 ಸಿಬ್ಬಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಮಹಾಮಾರಿ ಸಶಸ್ತ್ರ ಪಡೆಗಳಿಗೆ ಹರಡುತ್ತಿರುವ ಕುರಿತು ಕೇಂದ್ರ ಗೃಹ ಸಚಿವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಭದ್ರತಾ ಪಡೆಗಳ ಸುರಕ್ಷತೆ ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

Amit shah

ಸಭೆಯಲ್ಲಿ ಬಿಎಸ್ಎಫ್, ಸಿಆರ್ ಪಿಎಫ್, ಸಿಐಎಸ್ಎಫ್, ಐಟಿಬಿಪಿ, ಎಸ್ಎಸ್ ಬಿ ಮತ್ತು ಎನ್ ಎಸ್ ಜಿ ಗಳ ಮಹಾ ನಿರ್ದೇಶಕರು ಭಾಗವಹಿಸಿದ್ದರು.

ಹೊಸ 30 ಪ್ರಕರಣಗಳ ಪೈಕಿ 24 ಕೇಸ್‌ಗಳು ತ್ರಿಪುರದಲ್ಲಿ ಪತ್ತೆಯಾಗಿದೆ. ಉಳಿದ ಆರು ಸೋಂಕಿತರು ದೆಹಲಿಯಲ್ಲಿ ವರದಿಯಾಗಿದ್ದಾರೆ. ದೆಹಲಿಯ ಆರು ಜನರ ಪೈಕಿ ಇಬ್ಬರು ಬಿಎಸ್ಎಫ್ ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಎಂದು ತಿಳಿದು ಬಂದಿದೆ.

ಮತ್ತೆ 30 ಬಿಎಸ್ಎಫ್ ಯೋಧರಿಗೆ ಕೊರೊನಾ ಸೋಂಕು ಪತ್ತೆಮತ್ತೆ 30 ಬಿಎಸ್ಎಫ್ ಯೋಧರಿಗೆ ಕೊರೊನಾ ಸೋಂಕು ಪತ್ತೆ

ಈ ಮೂಲಕ ದೆಹಲಿಯ ಮುಖ್ಯ ಕಚೇರಿಯಲ್ಲಿ ಮತ್ತೊಂದು ಅಂತಸ್ತಿನ ಮಹಡಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಹಿಂದೆ ಹೆಚ್ಚುವರಿ ಮಹಾನಿರ್ದೇಶಕ ಶ್ರೇಣಿಯ ಅಧಿಕಾರಿ ಹಾಗೂ ಮುಖ್ಯ ಪೇದೆಯೊಬ್ಬರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಎರಡು ಅಂತಸ್ತುಗಳನ್ನು ಸೀಲ್‌ಡೌನ್ ಮಾಡಲಾಗಿತ್ತು.

English summary
Union Home Minister Amit Shah on Friday (May 8) expressed concern over increasing COVID-19 cases in Central Armed Police Forces like the BSF and the CRPF and discussed with officials ways to check the spread of the deadly disease, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X