• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮಿತ್ ಶಾಗೆ ಕೊರೊನಾ, ಮೋದಿ ಸೇರಿ ಕೇಂದ್ರ ನಾಯಕರಿಗೆ ಆತಂಕ!

|

ದೆಹಲಿ, ಆಗಸ್ಟ್ 03: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ವೈರಸ್ ತಗುಲಿತ್ತು. ಭಾನುವಾರ ಈ ವಿಷಯವನ್ನು ಖುದ್ದು ಅಮಿತ್ ಶಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದರು.

ಕಳೆದ ಕೆಲವು ದಿನಗಳ ಹಿಂದೆ ತಮ್ಮ ಜೊತೆ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳು ದಯವಿಟ್ಟು ಕೊರೊನಾ ಪರೀಕ್ಷೆಗೆ ಒಳಪಡಿ ಹಾಗು ಕ್ವಾರಂಟೈನ್ ಆಗಿ ಎಂದು 55 ವರ್ಷದ ಅಮಿತ್ ಶಾ ಮನವಿ ಮಾಡಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾವೈರಸ್ ಪಾಸಿಟಿವ್!

ಆದ್ರೆ, ಅಮಿತ್ ಶಾ ಕೊರೊನಾ ಪರೀಕ್ಷೆ ಒಳಪಡುವುದಕ್ಕೂ ಒಂದು ದಿನ ಮುಂಚೆ ಪ್ರಧಾನಿ ಕಚೇರಿಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ನೂತನ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಚರ್ಚಿಸಲು ಅಮಿತ್ ಶಾ ಪಿಎಂ ಕಚೇರಿಗೆ ತೆರಳಿದ್ದರು ಎಂಬ ವಿಷಯ ಬಹಿರಂಗವಾಗಿದೆ.

ಆದರೆ ಈ ಸಭೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಅನುಸರಿಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿದ್ದರು ಎಂದು ತಿಳಿದು ಬಂದಿದೆ. ತಾಪಮಾನ ತಪಾಸಣೆ, ಆರೋಗ್ಯಾ ಸೇತು ತಪಾಸಣೆ, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಸೇರಿದಂತೆ ಕಳೆದ ಕೆಲವು ತಿಂಗಳಿಂದ ಪಿಎಂ ಕಚೇರಿ ಸುತ್ತಮುತ್ತ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿದೆ.

ನೇರವಾಗಿ ಸಭೆ ಸೇರದ ಹೆಚ್ಚು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಭೆ ಹಾಗೂ ಚರ್ಚೆಗಳು ನಡೆಯುತ್ತಿದೆ ಎಂದು ಪಿಎಂ ಕಚೇರಿ ಮೂಲಗಳು ತಿಳಿಸಿವೆ. ಅಮಿತ್ ಶಾ ಸಹ ಹೆಚ್ಚು ವಿಡಿಯೋ ಕಾನ್ಫರೆನ್ಸ್ ಸಭೆಗಳನ್ನು ನಡೆಸಿದ್ದಾರೆ.

ಕ್ಯಾಬಿನೆಟ್ ಸಭೆ ಹಾಗೂ ಇನ್ನಿತರ ಕೂಟಗಳಲ್ಲಿ ಅಮಿತ್ ಶಾ ಭಾಗಿಯಾಗಿದ್ದರು. ಗೃಹ ಸಚಿವರಿಗೆ ಕೊರೊನಾ ತಗುಲಿರುವ ಹಿನ್ನೆಲೆ, ಕ್ಯಾಬಿನೆಟ್ ಸಹೋದ್ಯೋಗಿಗಳು ಹಾಗೂ ಇತರೆ ನಾಯಕರು ಕೊರೊನಾ ಪರೀಕ್ಷೆಗೆ ಒಳಪಡುತ್ತಾರಾ ಗೊತ್ತಿಲ್ಲ.

English summary
Central home minister amit shah attended cabinet meeting at PM residence days before testing COVID 19 positive says source.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X