ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಕಾರ್ಯಕಾರಿ ಸಮಿತಿಯಿಂದ ಬಿಎಸ್ವೈ ಔಟ್

By Mahesh
|
Google Oneindia Kannada News

ಬೆಂಗಳೂರು, ಮಾ.12: ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಹೊರ ಹಾಕಲಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು 111 ಜನರಿರುವ ಹೊಸ ಸಮಿತಿಯನ್ನು ಗುರುವಾರ ಪ್ರಕಟಿಸಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರಲ್ಲದೆ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ, ಅಲ್ಪಸಂಖ್ಯಾತ ವ್ಯವಹಾರ ಖಾತೆ ಸಚಿವೆ ನಜ್ಮಾ ಹೆಫ್ತುಲ್ಲಾ, ಮಥುರಾ ಸಂಸದೆ ಹೇಮಮಾಲಿನಿ, ಹಿರಿಯ ವಕ್ತಾರ ಸೈಯದ್ ಶಹನವಾಜ್ ಹುಸೇನ್, ರಾಜನಾಥ್ ಸಿಂಗ್ ಅವರ ಆಪ್ತ ಸುಧಾಂಶು ತ್ರಿವೇದಿ ಮುಂತಾದ ಪ್ರಮುಖರನ್ನು ಸಮಿತಿಗೆ ಸೇರಿಸಿಲ್ಲ.

ಏ.3 ಹಾಗೂ 4 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಲ್ಲಾ ಸದಸ್ಯರು, ಆಹ್ವಾನಿತ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

Yeddyurappa dropped from bjp executive

ಅಮಿತ್ ಶಾ ಅವರು ಹೆಸರಿಸಿರುವ 111 ಸದಸ್ಯರ ಪೈಕಿ ಬಿಜೆಪಿ ಆಡಳಿತವಿರುವ 8 ಮುಖ್ಯಮಂತ್ರಿಗಳು, ಇಬ್ಬರು ಉಪ ಮುಖ್ಯಮಂತ್ರಿಗಳು, 24 ಮಾಜಿ ಮುಖ್ಯಮಂತ್ರಿಗಳು, 3 ಮಾಜಿ ಉಪ ಮುಖ್ಯಮಂತ್ರಿಗಳು ಇದ್ದಾರೆ. 40 ಜನ ಹಿರಿಯ ನಾಯಕರು ವಿಶೇಷ ಆಹ್ವಾನಿತರಾಗಿದ್ದಾರೆ. [ಏ.2ರಿಂದ ಬೆಂಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ]

ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಆರಂಭವಾಗುವ ಪಟ್ಟಿ 111ನೇ ಸದಸ್ಯರಾಗಿ ಡಾ. ಸಿ.ಪಿ ರಾಧಾಕೃಷ್ಣ ಅವರ ಹೆಸರಿನೊಂದಿಗೆ ಕೊನೆಗೊಳ್ಳಲಿದೆ.

ಕರ್ನಾಟಕದಿಂದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ, ಆರ್ ಅಶೋಕ್ ಇದ್ದಾರೆ. ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಸಿಟಿ ರವಿ, ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ ಕಾಣಿಸಿಕೊಂಡಿದ್ದಾರೆ. ಪೂರ್ಣ ಪಟ್ಟಿ ನೋಡಲು ಇಲ್ಲಿ ಕ್ಲಿಕ್ಕಿಸಿ. (ಪಿಟಿಐ)

English summary
The first meeting of Bharatiya Janata Party’s (BJP) new national executive finalised today by party president Amit Shah is expected in the first week of April in Bangalore. Former CM of Karnataka Yeddyurappa, HRD minister Smriti Irani are among the prominent faces whom BJP chief Amit Shah dropped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X