ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ರನ್ನು ಮೊಹಮ್ಮದ್ ಅಲಿ ಜಿನ್ನಾಗೆ ಹೋಲಿಸಿದ ಇತಿಹಾಸಜ್ಞ ಗುಹಾ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ಪಾಕಿಸ್ತಾನ ರಾಷ್ಟ್ರ ನಾಯಕ ಮೊಹಮ್ಮದ್ ಅಲಿ ಜಿನ್ನಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೂ ಹೋಲಿಕೆ ಇದೆ ಎಂದು ಕ್ಯಾತ ಇತಿಹಾಸಜ್ಞ ರಾಮಚಂದ್ರ ಗುಹಾ ಹೇಳಿದ್ದಾರೆ.

ತಮ್ಮ ಹೊಸ ಪುಸ್ತಕ 'ಗಾಂಧಿ: ದಿ ಇಯರ್ಸ್‌ ದಟ್ ಚೇಂಜ್ಡ್‌ ದಿ ವರ್ಲ್ಡ್‌, 9914-1948' ಪುಸ್ತಕದ ಬಗ್ಗೆ ಮಾತನಾಡುತ್ತಾ ಅವರು ಈ ಮಾತುಗಳನ್ನು ಹೇಳಿದ್ದಾರೆ.

'ಅಜೇಯ ಬಿಜೆಪಿ' ಸಾರಥ್ಯ ಅಮಿತ್ ಶಾಗೆ; ಬಿಜೆಪಿ ಕಾರ್ಯಕಾರಿಣಿ ಮುಖ್ಯಾಂಶ'ಅಜೇಯ ಬಿಜೆಪಿ' ಸಾರಥ್ಯ ಅಮಿತ್ ಶಾಗೆ; ಬಿಜೆಪಿ ಕಾರ್ಯಕಾರಿಣಿ ಮುಖ್ಯಾಂಶ

ಮೊಹಮ್ಮದ್ ಅಲಿ ಜಿನ್ನಾ ಭಾರತ ಪಾಕಿಸ್ತಾನ ವಿಭಜನೆಯ ಕಾರಣಕರ್ತ ಎಂದೇ ಹೇಳಲಾಗುತ್ತದೆ. ಧರ್ಮ ಬಿರು ಎಂದೂ ಗುರುತಿಸಲಾಗುತ್ತದೆ. ಇದೀಗ ರಾಮಚಂದ್ರ ಗುಹಾ ಅವರು ಅಮಿತ್ ಶಾ ಅವರನ್ನು ಮೊಹಮ್ಮದ್ ಅಲಿ ಜಿನ್ನಾ ಅವರಿಗೆ ಹೋಲಿಸಿರುವುದು ವಿವಾದದ ಸ್ವರೂಪ ಪಡೆಯುವ ಸಾಧ್ಯತೆ ಇದೆ.

Amit Shah and Mohmedd Ali Jinna both were same: Ramachandra Guha

ಮೊಹಮ್ಮದ್ ಅಲಿ ಜಿನ್ನಾ 'ಏನಾದರೂ ಆಗಲಿ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕು' ಎಂದು ಹೇಳಿದ್ದರು. ಅಮಿತ್ ಶಾ ಸಹ ಅದೇ ರೀತಿಯ ಮಾತುಗಳನ್ನಾಡುತ್ತಿದ್ದು, 'ಏನಾದರೂ ಆಗಲಿ ಚುನಾವಣೆ ಗೆಲ್ಲಬೇಕು' ಎನ್ನುತ್ತಿದ್ದಾರೆ. ಇಬ್ಬರೂ ತಮ್ಮ ಗುರಿ ಸಾಧನೆಗೆ ಯಾವ ಬೆಲೆಯನ್ನಾದರೂ ತೆರಬಲ್ಲವರು ಎಂದು ಅವರು ಹೇಳಿದ್ದಾರೆ.

ಗಾಂಧೀಜಿಗೆ ಸರಳಾ ದೇವಿಯೊಂದಿಗಿತ್ತು ಪ್ರೇಮ ಸಂಬಂಧ!ಗಾಂಧೀಜಿಗೆ ಸರಳಾ ದೇವಿಯೊಂದಿಗಿತ್ತು ಪ್ರೇಮ ಸಂಬಂಧ!

ಮೊಹಮ್ಮದ್ ಅಲಿ ಜಿನ್ನಾಗೆ ಇದ್ದದ್ದು ಒಂದೇ ಗುರಿ 'ಧರ್ಮದ ಆಧಾರದಲ್ಲಿ ಹೊಸ ರಾಷ್ಟ್ರ ಕಟ್ಟಬೇಕು ಆ ರಾಷ್ಟ್ರಕ್ಕೆ ನಾನು ನಾಯಕನಾಗಬೇಕು' ಎಂಬುದು. ಅಮಿತ್ ಶಾ ಗೆ ಸಹ ಅದೇ ರೀತಿಯ ಒನ್ ಪಾಯಿಂಟ್ ಅಜೆಂಡಾ ಇದೆ ಎಂದು ಗುಹಾ ಹೇಳಿದ್ದಾರೆ.

Amit Shah and Mohmedd Ali Jinna both were same: Ramachandra Guha

ನಾನು ಜಿನ್ನಾ ಬಗ್ಗೆ ಯಾವುದೇ ಮೃದು ಧೋರಣೆ ಇಲ್ಲದೆ ಬರೆದಿದ್ದೇನೆ. ಗಾಂಧಿ, ಅಂಬೇಡ್ಕರ್ ಅವರ ಬಗ್ಗೆ ಬರೆವಾಗ ಅವರು ಜೀವನದಲ್ಲಿ ಅನುಭವಿಸಿದ ಕಷ್ಟಗಳಾದರೂ ನನ್ನನ್ನು ಮೃದು ಮಾಡಿಬಿಡುತ್ತವೇನೋ ಆದರೆ ಜಿನ್ನಾ ವಿಷಯದಲ್ಲಿ ಹಾಗಾಗಿಲ್ಲ ಎಂದು ಅವರು ಹೇಳಿದ್ದಾರೆ.

ಅಮಿತ್ ಶಾ ರಾಜ್ಯಕ್ಕೆ: ರಾಜ್ಯ ರಾಜಕೀಯ ಗೊಂದಲಕ್ಕೆ ಕೊನೆ ಮೊಳೆ? ಅಮಿತ್ ಶಾ ರಾಜ್ಯಕ್ಕೆ: ರಾಜ್ಯ ರಾಜಕೀಯ ಗೊಂದಲಕ್ಕೆ ಕೊನೆ ಮೊಳೆ?

ರಾಂಚಂದ್ರ ಗುಹಾ ಅವರ ಹೊಸ ಪುಸ್ತಕವು 1100 ಪುಟಗಳಿಗಿಂತಲೂ ಹೆಚ್ಚಿಗಿದ್ದು. ಮಹಾತ್ಮಾ ಗಾಂಧಿ ಅವರು ದಕ್ಷಿಣ ಆಫ್ರಿಕಾದಿಂದ ಬಂದ ದಿನಗಳಿಂದ ಹಿಡಿದು ಅವರ ಮರಣದವರೆಗೆ ಮಾಹಿತಿಯನ್ನು ಒಳಗೊಂಡಿದೆ. ಗಾಂಧಿ ಅವರ ಪ್ರೇಮ ಪ್ರಕರಣ, ವಿಚಿತ್ರ ಪ್ರಯೋಗದ ಬಗ್ಗೆಯೂ ರಾಮಚಂದ್ರ ಗುಹಾ ತಮ್ಮ ಹೊಸ ಪುಸ್ತಕದಲ್ಲಿ ಬರೆದಿದ್ದಾರೆ.

English summary
Muhammad Ali Jinnah and BJP president Amit Shah both were same kind of leaders. Both had only single point agenda and they will what ever to achive the goal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X