ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಮ್ಮೆ 'ಲಾಕ್' ಆಗುತ್ತಾ ರಾಷ್ಟ್ರರಾಜಧಾನಿ; ಸಿಎಂ ಹೇಳುವುದೇನು?

|
Google Oneindia Kannada News

ನವದೆಹಲಿ, ಜೂನ್.15: ನೊವೆಲ್ ಕೊರೊನಾ ವೈರಸ್ ಆತಂಕದಲ್ಲಿ ಜನರು ಬದುಕು ಸಾಗಿಸುತ್ತಿರುವುದು ನಿಜ. ಆದರೆ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಬಾರಿ ಲಾಕ್ ಡೌನ್ ವಿಸ್ತರಿಸುವಂತಾ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

Recommended Video

Sushanth Singh Rajput's dad collapsed after hearing his son's news | Oneindia Kannada

ನವದೆಹಲಿಯಲ್ಲಿ ಸರ್ಕಾರವು ಲಾಕ್ ಡೌನ್ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಿಲ್ಲ. ಯಾವುದೇ ರೀತಿ ಊಹಾಪೋಹಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಸಾಕಷ್ಟು ಜನರು ಲಾಕ್ ಡೌನ್ ವಿಸ್ತರಿಸುವ ಬಗ್ಗೆ ಊಹಾಪೋಹದ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಕುರಿತು ಯಾವುದೇ ಯೋಜನೆಗಳನ್ನು ಹಾಕಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ 3.30 ಲಕ್ಷ ಮಂದಿಗೆ ಕೊರೊನಾವೈರಸ್ ಅಂಟಿದರೂ ಡೋಂಟ್ ವರಿ! ಭಾರತದಲ್ಲಿ 3.30 ಲಕ್ಷ ಮಂದಿಗೆ ಕೊರೊನಾವೈರಸ್ ಅಂಟಿದರೂ ಡೋಂಟ್ ವರಿ!

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ದೇಶದಲ್ಲೇ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ಈವರೆಗೂ ಮಹಾಮಾರಿಗೆ ನವದೆಹಲಿಯಲ್ಲಿ 1,300 ಜನರು ಪ್ರಾಣ ಬಿಟ್ಟಿದ್ದಾರೆ. 41,000ಕ್ಕೂ ಅಧಿಕ ಜನರಿಗೆ ಸೋಂಕು ಪತ್ತೆಯಾಗಿದೆ.

ಲಾಕ್ ಡೌನ್ ಘೋಷಣೆ ಬಗ್ಗೆ ಊಹಾಪೋಹ

ಲಾಕ್ ಡೌನ್ ಘೋಷಣೆ ಬಗ್ಗೆ ಊಹಾಪೋಹ

ರಾಷ್ಟ್ರ ರಾಜಧಾನಿಯು ಕಳೆದ ಜೂನ್.08 ಬಹುಪಾಲು ಅನ್ ಲಾಕ್ ಆಗಿದೆ. ಮಾರುಕಟ್ಟೆ, ಅಂಗಡಿಗಳು, ಕಾಂಪ್ಲೆಕ್ಸ್ ಕಚೇರಿಗಳೆಲಲ್ ಓಪನ್ ಆಗಿವೆ. ಇದಾಗಿ ವಾರದಲ್ಲೇ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಈ ಹಿನ್ನೆಲೆ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಬೆಡ್ ಗಳ ಕೊರತೆ ಎದುರಾಗಿದ್ದು, ತೀವ್ರ ಆತಂಕವನ್ನು ಹುಟ್ಟಿಸಿತ್ತು. ಸರ್ಕಾರವು ಈ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಂಡಿತು. ಹೀಗಿದ್ದರೂ ಸಮಸ್ಯೆಗೆ ಪರಿಹಾರ ಕಂಡು ಸಿಕ್ಕಿಲ್ಲವಾದ್ದರಿಂದ ಪುನಃ ನವದೆಹಲಿಯಲ್ಲಿ ಲಾಕ್ ಡೌನ್ ಕಠಿಣಗೊಳಿಸಲಾಗುತ್ತದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ರಾಷ್ಟ್ರ ರಾಜಧಾನಿಯ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಟೆಸ್ಟ್

ರಾಷ್ಟ್ರ ರಾಜಧಾನಿಯ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಟೆಸ್ಟ್

ನವದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರನ್ನು ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ಕೊವಿಡ್-19 ಪರಾಮರ್ಶೆ ಕುರಿತು ಚರ್ಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದ ಸಭೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ದಿನದಲ್ಲಿ ತಪಾಸಣೆಯ ಸಂಖ್ಯೆ ಡಬಲ್

ಎರಡು ದಿನದಲ್ಲಿ ತಪಾಸಣೆಯ ಸಂಖ್ಯೆ ಡಬಲ್

ನವದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದು, ಇನ್ನೆರೆಡು ದಿನಗಳಲ್ಲಿ ಸೋಂಕು ತಪಾಸಣೆಯ ಸಂಖ್ಯೆಯನ್ನು ಇಮ್ಮಡಿಗೊಳಿಸಲಾಗುತ್ತದೆ. ಅಂದರೆ ಈ ಮೊದಲು ದಿನಕ್ಕೆ 100 ಜನರನ್ನು ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸುತ್ತಿದ್ದರೆ, ಇನ್ನುಮುಂದೆ ದಿನಕ್ಕೆ 100ರ ಬದಲು 200 ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.

ಬೆಡ್ ಕೊರತೆ ನಿವಾರಣೆಗೆ 500 ರೈಲ್ವೆ ಕೋಚ್ ಗಳ ವ್ಯವಸ್ಥೆ

ಬೆಡ್ ಕೊರತೆ ನಿವಾರಣೆಗೆ 500 ರೈಲ್ವೆ ಕೋಚ್ ಗಳ ವ್ಯವಸ್ಥೆ

ನವದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಐಸೋಲೇಷನ್ ವಾರ್ಡ್ ಗಳಾಗಿ ಪರಿವರ್ತನೆಯಾಗಿರುವ 500 ರೈಲ್ವೆ ಕೋಚ್ ಗಳನ್ನು ನವದೆಹಲಿಯಲ್ಲಿ ಸೋಂಕಿತರ ಚಿಕಿತ್ಸೆ ನೀಡುವುದಾಗಿ ಕೇಂದ್ರ ಸರ್ಕಾರವು ಘೋಷಿಸಿದೆ. ಈ 500 ರೈಲ್ವೆ ಕೋಚ್ ಗಳಲ್ಲಿ ಕನಿಷ್ಠ 8,000 ಕೊರೊನಾ ವೈರಸ್ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದಕ್ಕೆ ಸಾಧ್ಯವಿದೆ ಎಂದು ಅಮಿತ್ ಶಾ ತಿಳಿಸಿದ್ದರು.

English summary
Coronavirus: Amid Speculation "No Lockdown Plans" In Delhi: Says Arvind Kejriwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X