• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತೀಯರಿಗೆ ಕೆಲವು ದೇಶಗಳು ಇನ್ನೂ ಪ್ರವೇಶ ನಿರ್ಬಂಧಿಸಿವೆ: ಹರ್ದೀಪ್‌ ಸಿಂಗ್

|
Google Oneindia Kannada News

ನವದೆಹಲಿ, ನವೆಂಬರ್ 03: ಭಾರತೀಯರಿಗೆ ಕೆಲವು ದೇಶಗಳು ಇನ್ನೂ ಪ್ರವೇಶ ನಿರ್ಬಂಧಿಸಿವೆ ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ತಿಳಿಸಿದ್ದಾರೆ.

ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಮಾರ್ಚ್ 23ರಿಂದ ಭಾರತದಲ್ಲಿ ನಿಗದಿ ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.

ವಂದೇ ಭಾರತ್ ವಿಮಾನದಲ್ಲಿ ವುಹಾನ್‌ಗೆ ಹೊರಟಿದ್ದ 19 ಭಾರತೀಯರಿಗೆ ಕೊರೊನಾ ಸೋಂಕು ವಂದೇ ಭಾರತ್ ವಿಮಾನದಲ್ಲಿ ವುಹಾನ್‌ಗೆ ಹೊರಟಿದ್ದ 19 ಭಾರತೀಯರಿಗೆ ಕೊರೊನಾ ಸೋಂಕು

ಕೆಲವು ದೇಶಗಳು ಇನ್ನೂ ಭಾರತೀಯರ ಪ್ರವೇಶದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿಲ್ಲ ಮತ್ತು ಅವರು ತಮ್ಮ ಮಿತಿಗಳನ್ನು ಸರಳಗೊಳಿಸಿದಾಗ ಈ ದೇಶಗಳಿಗೆ ಪ್ರಯಾಣಿಸಲು ನೆರವಾಗಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಕ್ಟೋಬರ್ 22 ರಂದು ಕೇರಳ ಮತ್ತು ಬಹ್ರೇನ್ ನಡುವೆ ಕಾರ್ಯ ನಿರ್ವಹಿಸುವ ವಿಶೇಷ ವಿಮಾನಗಳ ಸರಾಸರಿ 30 ರಿಂದ 39ಸಾವಿರದಷ್ಟಿದೆ. ಏಕೆಂದರೆ ಗಲ್ಫ್ ದೇಶವು ವಾರಕ್ಕೆ ಭಾರತದಿಂದಾಗಿ 750 ಪ್ರಯಾಣಿಕರಿಗೆ ಮಾತ್ರ ಅನುಮತಿ ನೀಡಿದೆ.

ಕೊರೊನಾ ಸೋಂಕಿನ ಮಧ್ಯೆ ಭಾರತದಿಂದ ಪ್ರಯಾಣಿಕರನ್ನು ಹೊತ್ತೊಯ್ಯಲು ವಿಮಾನಯಾನ ಸಂಸ್ಥೆಗಳಿಗೆ ಸೌದಿ ಅರೇಬಿಯಾ ಅವಕಾಶ ನೀಡಿಲ್ಲ.

ಮೇ 6ರಿಂದ ವಂದೇ ಭಾರತ್ ಮಿಷನ್‌ನಲ್ಲಿ ಅಂತಾರಾಷ್ಟ್ರೀಯ ವಿಮಾನಗಳನ್ನು ನಡೆಸುತ್ತಿದ್ದೇವೆ. ಆದಾಗ್ಯೂ ಕೊಲ್ಲಿ ಪ್ರದೇಶದ ಕೆಲವು ದೇಶಗಳು ಸೇರಿದಂತೆ ಕೆಲವು ದೇಶಗಳು ಇನ್ನೂ ಭಾರತೀಯ ಪ್ರಜೆಗಳ ಪ್ರವೇಶದ ಮೇಲಿನ ನಿರ್ಬಂಧವನ್ನು ತೆಗೆದುಹಾಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

English summary
Some countries have still not removed restrictions on the entry of Indian nationals and the central government is ready to fly passengers to these countries whenever they ease their limits, said Civil Aviation Minister Hardeep Singh Puri on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X