ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಬೆಡ್, ಆಕ್ಸಿಜನ್, ಐಸಿಯು ಪ್ರಮಾಣ ತಗ್ಗಿಸಿದ್ದೇಕೆ ಕೇಂದ್ರ ಸರ್ಕಾರ?"

|
Google Oneindia Kannada News

ನವದೆಹಲಿ, ಜೂನ್ 06: ಭಾರತದಲ್ಲಿ ಕೊರೊನಾವೈರಸ್ ಎರಡನೇ ಅಲೆಯ ಬಗ್ಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ ಹೊರತಾಗಿಯೂ ಕೇಂದ್ರ ಸರ್ಕಾರವು ತುರ್ತು ನಿಗಾ ಘಟಕ, ಆಕ್ಸಿಜನ್ ಹಾಗೂ ವೆಂಟಿಲೇಟರ್ ಸಂಖ್ಯೆನ್ನು ಕಡಿಮೆಗೊಳಿಸಿದ್ದು ಏಕೆ ಎಂದು ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ದೇಶದಲ್ಲಿ 2020ರ ಸಪ್ಟೆಂಬರ್ ತಿಂಗಳಿನಿಂದ 2021ರ ಜನವರಿ ತಿಂಗಳ ವೇಳೆಗೆ ಆಕ್ಸಿಜನ್, ಐಸಿಯು ಹಾಸಿಗೆ ಹಾಗೂ ವೆಂಟಿಲೇಟರ್ ಸಂಖ್ಯೆನ್ನು ತಗ್ಗಿಸಲಾಗಿದೆ ಎಂದು ದೂಷಿಸಿದ್ದಾರೆ. ಐದು ತಿಂಗಳಿನಲ್ಲಿ ಶೇ.30ರಷ್ಟು ಆಕ್ಸಿಜನ್ ಬೆಡ್, ಶೇ.46ರಷ್ಟು ಐಸಿಯು ಬೆಡ್ ಹಾಗೂ ಶೇ.26ರಷ್ಟು ವೆಂಟಿಲೇಟರ್ ಬೆಡ್ ಪ್ರಮಾಣವನ್ನು ಕಡಿತಗೊಳಿಸಲಾಗಿದೆ.

ಒಂದು ಬಾರಿ ಕೊರೊನಾವೈರಸ್ ಬಂದು ಹೋಗುವುದು ಒಳ್ಳೆಯದ್ದೇ!?ಒಂದು ಬಾರಿ ಕೊರೊನಾವೈರಸ್ ಬಂದು ಹೋಗುವುದು ಒಳ್ಳೆಯದ್ದೇ!?

ಸಂಸದೀಯ ಆರೋಗ್ಯ ಮಂಡಳಿಯು ಕೊರೊನಾವೈರಸ್ ಎರಡನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ ಹೊರತಾಗಿಯೂ ಸರ್ಕಾರವು ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸದೇ ಕಡಿತಗೊಳಿಸಿದರ ಹಿಂದಿನ ಮರ್ಮವೇನು ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

Amid Covid-19 Rise Why Central Govt Reduced Oxygen,ICU And Ventilator Beds: Priyanka Gandhi Question

"ಸೆಂಟ್ರಲ್ ವಿಸ್ತಾ ಯೋಜನೆ ಅಷ್ಟು ಮುಖ್ಯವೇ":
ದೇಶದ ಪ್ರಜೆಗಳಿಗೆ ಮೂಲಭೂತ ಸೇವೆಗಳನ್ನು ನೀಡುವುದಕ್ಕಿಂತಲೂ ಕೇಂದ್ರ ಸರ್ಕಾರಕ್ಕೆ ಸೆಂಟ್ರಲ್ ವಿಸ್ತಾ ಯೋಜನೆಯೇ ಮುಖ್ಯವಾಯಿತೇ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ. ಅವರು ಅಧಿಕಾರಕ್ಕೆ ಬಂದ ನಂತರ ಕೇಂದ್ರ ಬಜೆಟ್ ನಲ್ಲಿ ಆರೋಗ್ಯ ವಲಯಕ್ಕೆ ನೀಡುತ್ತಿದ್ದ ಪಾಲನ್ನು ಶೇ.20ಕ್ಕೆ ತಗ್ಗಿಸಲಾಯಿತು. ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವುದಾಗಿ ಹೇಳಿದರು. ಆದರೆ ಇಂದು ಅದ್ಯಾವ ಕೆಲಸಗಳೂ ಆಗಿಲ್ಲ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸೆಂಟ್ರಲ್ ವಿಸ್ತಾ ಯೋಜನೆಗಾಗಿ ಪ್ರತಿನಿತ್ಯ ಒಬ್ಬರಲ್ಲ ಒಬ್ಬ ಕಾರ್ಮಿಕರು ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಂಥ ಪರಿಸ್ಥಿತಿಯನ್ನು ಸೃಷ್ಟಿಸಿದ ಕೇಂದ್ರ ಸರ್ಕಾರಕ್ಕೆ ಪ್ರಜೆಗಳ ಆರೋಗ್ಯಕ್ಕಿಂತ ಸೆಂಟ್ರಲ್ ವಿಸ್ತಾ ಯೋಜನೆಯೇ ಹೆಚ್ಚಾಗಿದೆಯೇ ಎಂದು ಪ್ರಿಯಾಂಕಾ ಗಾಂಧಿ ಕಿಡಿ ಕಾರಿದ್ದಾರೆ.

English summary
Amid Covid-19 Rise Why Central Govt Reduced Oxygen,ICU And Ventilator Beds: Priyanka Gandhi Question.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X