ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಂಕ್ರಾಮಿಕ ಪಿಡುಗಿನ ನಡುವೆ ಪ್ರಧಾನಿಗೆ ಹೊಸ ನಿವಾಸ ನಿರ್ಮಾಣ ಬೇಕೇ?

|
Google Oneindia Kannada News

ನವದೆಹಲಿ, ಮೇ 03: ಇಡೀ ಊರಿಗೆ ಊರು ಕೊಚ್ಚಿಕೊಂಡು ಹೋಗುತ್ತಿದ್ದರೆ ಅದ್ಯಾರೋ ಪಿಟೀಲು ಬಾರಿಸಿಕೊಳ್ಳುತ್ತಾ ಕುಳಿತಿದ್ದರಂತೆ. ಈ ಮಾತಿಗೂ ಕೇಂದ್ರ ಸರ್ಕಾರದ ನಿಲುವುಗೂ ಹೇಳಿ ಮಾಡಿಸಿದಂತೆ ಹೋಲಿಕೆ ಆಗುತ್ತಿದೆ.

ದೇಶವೇ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ನಲುಗಿ ಹೋಗುತ್ತಿದೆ. ಪ್ರತಿನಿತ್ಯ ಸಾವಿರ ಸಾವಿರ ಜನರು ಕೊವಿಡ್-19 ಮಹಾಮಾರಿಯಿಂದ ಪ್ರಾಣ ಬಿಡುತ್ತಿದ್ದಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಪ್ರಧಾನಮಂತ್ರಿ ಹೊಸ ನಿವಾಸ ನಿರ್ಮಾಣಕ್ಕೆ ಕೇಂದ್ರ ವಿಸ್ತಾ ಯೋಜನೆ ಅಡಿಯಲ್ಲಿ ಅನುಮತಿ ನೀಡಲಾಗಿದೆ. 2022ರ ಡಿಸೆಂಬರ್ ವೇಳೆಗೆ ಯೋಜನೆ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ.

 ಹೊಸ ಸಂಸತ್ ಭವನಕ್ಕೆ ಮೂರು ಸುರಂಗ ಮಾರ್ಗ; ಸಂಪರ್ಕ ಕಲ್ಪಿಸುವುದೆಲ್ಲಿಗೆ? ಹೊಸ ಸಂಸತ್ ಭವನಕ್ಕೆ ಮೂರು ಸುರಂಗ ಮಾರ್ಗ; ಸಂಪರ್ಕ ಕಲ್ಪಿಸುವುದೆಲ್ಲಿಗೆ?

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರ ಮಧ್ಯೆ ಕೇಂದ್ರ ವಿಸ್ತಾ ಯೋಜನೆಗೆ ಅಡಿಯಲ್ಲಿ ಪ್ರಧಾನಮಂತ್ರಿ ನಿವಾಸ ನಿರ್ಮಾಣಕ್ಕೆ ಅನುಮತಿ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳು ಮತ್ತು ಕಾರ್ಯಕರ್ತರ ವಿರೋಧದ ನಡುವೆಯೂ ಕೇಂದ್ರ ಸರ್ಕಾರವು ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ.

Amid Coronavirus Pandemic, Central Govt Set Deadline For PMs New House

ಡಿಸೆಂಬರ್ ವೇಳೆಗೆ ಮೊದಲ ಕಟ್ಟಡ ನಿರ್ಮಾಣ:

ನೂತನ ಸಂಸತ್ ಕಚೇರಿ ನಿರ್ಮಾಣದ ಯೋಜನೆ ಅಡಿಯಲ್ಲಿ ಮೊದಲ ಹಂತವಾಗಿ 2020ರ ಡಿಸೆಂಬರ್ ವೇಳೆಗೆ ಪ್ರಧಾನಮಂತ್ರಿ ನಿವಾಸ, ಪ್ರಧಾನಿ ರಕ್ಷಣೆ ಮತ್ತು ಆಡಳಿತಾತ್ಮಕ ಅಧಿಕಾರಿಗಳ ಮುಖ್ಯ ಕಚೇರಿ ನಿರ್ಮಾಣ ಮಾಡುವುದಕ್ಕೆ ಗಡುವು ವಿಧಿಸಲಾಗಿದೆ. ಪ್ರಸ್ತುತ ಮೊದಲಿನ ರೇಸ್ ಕೋರ್ಸ್ ರಸ್ತೆಯ ಲೋಕಕಲ್ಯಾಣ ಮಾರ್ಗ್ 7ರಲ್ಲಿ ಪ್ರಧಾನಮಂತ್ರಿ ನಿವಾಸವಿದೆ. ಮುಂದಿನ ವರ್ಷ ಮೇ ತಿಂಗಳ ವೇಳೆಗೆ ಉಪ ರಾಷ್ಟ್ರಪತಿ ನಿವಾಸದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ನೂತನ ಕಟ್ಟಡ ನಿರ್ಮಾಣ:

ನವದೆಹಲಿಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ 13,450 ಕೋಟಿ ರೂಪಾಯಿ ವೆಚ್ಚವಾಗಲಿದ್ದು, 46,000 ಕಾರ್ಮಿಕರನ್ನು ಈ ಕಾರ್ಯದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. "ಸೆಂಟ್ರಲ್ ವಿಸ್ತಾ ಅಗತ್ಯವಲ್ಲ, ಅಗತ್ಯವಾಗಿರುವುದರ ಮೇಲೆ ಕೇಂದ್ರ ಸರ್ಕಾರದ ಗಮನ ಹರಿಸಬೇಕು" ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

English summary
Amid Coronavirus Pandemic, Central Govt Set Deadline For Build Prime Minister's New House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X