ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ಬಗ್ಗೆ ಚರ್ಚಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ

|
Google Oneindia Kannada News

ನವದೆಹಲಿ, ನವೆಂಬರ್ 29: ಕೊರೊನಾದ ಹೊಸ ರೂಪಾಂತರಿ ಒಮಿಕ್ರೋನ್ ಬಗ್ಗೆ ಚರ್ಚಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಸಭೆ ಕರೆದಿದೆ. ಕೊರೊನಾ ವೈರಸ್​ನ ಹೊಸ ರೂಪಾಂತರಿ 'ಓಮಿಕ್ರಾನ್' ಎಲ್ಲೆಡೆ ಆತಂಕ ಸೃಷ್ಟಿಸಿದ್ದು, ರಾಷ್ಟ್ರ ರಾಜಧಾನಿ ಕೂಡ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕೋವಿಡ್​ ಎರಡನೇ ಅಲೆ ವೇಳೆ ಉಲ್ಬಣಿಸಿದ್ದ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ, ರಾಷ್ಟ್ರ ರಾಜಧಾನಿ ಜನರ ಜೀವನವನ್ನು ಸಹಜ ಸ್ಥಿತಿಗೆ ತಂದಿದ್ದ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರ ಇದೀಗ ಓಮಿಕ್ರಾನ್ ವಕ್ರದೃಷ್ಟಿ ಬೀರದಂತೆ ಕಠಿಣ ನಿಯಮಾವಳಿಗಳನ್ನು ಜಾರಿ ಮಾಡುವ ಸಾಧ್ಯತೆಯಿದೆ.

ಓಮಿಕ್ರಾನ್‌ ರೂಪಾಂತರ ಯಾವೆಲ್ಲಾ ದೇಶದಲ್ಲಿ ಪತ್ತೆಯಾಗಿದೆ?, ಇಲ್ಲಿದೆ ಪಟ್ಟಿಓಮಿಕ್ರಾನ್‌ ರೂಪಾಂತರ ಯಾವೆಲ್ಲಾ ದೇಶದಲ್ಲಿ ಪತ್ತೆಯಾಗಿದೆ?, ಇಲ್ಲಿದೆ ಪಟ್ಟಿ

ನಾಗರಿಕ ವಿಮಾನಯಾನ ಸಚಿವಾಲಯದ ತಜ್ಞರು ಮತ್ತು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ದೆಹಲಿಗೆ ಬಂದಿಳಿಯುವ ಎಲ್ಲಾ ಪ್ರಯಾಣಿಕರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸುವುದು ಹಾಗೂ ಓಮಿಕ್ರಾನ್ ವರದಿಯಾಗಿರುವ ದಕ್ಷಿಣ ಆಫ್ರಿಕಾ, ಬ್ರಿಟನ್, ಬೋಟ್ಸ್‌ವಾನಾ, ಜಿಂಬಾಬ್ವೆ, ಹಾಂಕಾಂಗ್, ಬೆಲ್ಜಿಯಂ ಮತ್ತು ಇಸ್ರೇಲ್​​ ದೇಶಗಳಿಂದ ದೆಹಲಿಗೆ ಬಂದಿಳಿಯುವ ಪ್ರಯಾಣಿಕರನ್ನು ಕ್ವಾರಂಟೈನ್​ಗೆ ಒಳಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Amid Concerns Over New Covid 19 Variant Omicron, DDMA Meet Today

B.1.1.529 ಎಂದು ಕರೆಯಲ್ಪಡುವ ಹೊಸ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ. ವಿಶ್ವಸಂಸ್ಥೆ ಅದಕ್ಕೆ ' ಒಮಿಕ್ರೋನ್ ' ಎಂದು ಹೆಸರಿಟ್ಟಿದೆ. ಇದು ಮರುಸೋಂಕು, ಅಂದರೆ ಕೋವಿಡ್​ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತವೆ. ಇದೀಗ ಈ ತಳಿ ಇತರ ದೇಶಗಳಿಗೂ ಹರಡುತ್ತಿದೆ.

ದಕ್ಷಿಣ ಆಫ್ರಿಕಾದಾದ್ಯಂತ ನೂರಾರು ಸೋಂಕಿತ ಜನರು ವಾಕರಿಕೆ, ತಲೆನೋವು, ಆಯಾಸ ಮತ್ತು ಹೆಚ್ಚಿನ ನಾಡಿ ಬಡಿತದ ರೋಗ ಲಕ್ಷಣಗಳು ವರದಿಯಾಗಿದ್ದು ಕೋವಿಡ್‌ನ ಇತರ ರೂಪಾಂತರಗಳಲ್ಲಿ ಕಂಡುಬಂದ ರುಚಿ ಅಥವಾ ವಾಸನೆಯ ನಷ್ಟದಿಂದ ಯಾರೂ ಬಳಲಿದಂತೆ ಕಾಣುತ್ತಿಲ್ಲ. ಇದಲ್ಲದೆ ದಕ್ಷಿಣ ಆಫ್ರಿಕಾದ ಹೆಚ್ಚಿನ ವೈದ್ಯರು ಓಮಿಕ್ರಾನ್ ಸೋಂಕನ್ನು ಹೊಂದಿರುವ ರೋಗಿಗಳು ತೀವ್ರ ತಲೆನೋವು, ವಾಕರಿಕೆ ಇಲ್ಲವೇ ತಲೆತಿರುಗುವಿಕೆಯನ್ನು ಹೊಂದಿದ್ದಾರೆ ಎಂಬುದಾಗಿ ದೃಢಪಡಿಸಿದ್ದಾರೆ.

ಕೋವಿಡ್ ಹೊಸ ರೂಪಾಂತರವಾಗಿ ಮಾರ್ಪಾಡಾಗಿದೆ ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ ಮೊದಲ ಆಫ್ರಿಕನ್ ವೈದ್ಯೆ ಡಾ. ಏಂಜೆಲಿಕ್ ಕೊಯೆಟ್ಜಿ ಪತ್ರಿಕೆಗಳಿಗೆ ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ ಅವರು ಚಿಕಿತ್ಸೆ ನೀಡಿದ ರೋಗಿಗಳಲ್ಲಿ ಕೋವಿಡ್ ಲಕ್ಷಣಗಳು ತುಂಬಾ ವಿಭಿನ್ನ ಹಾಗೂ ಸೌಮ್ಯವಾಗಿವೆ ಎಂದಿದ್ದಾರೆ. ರೋಗಲಕ್ಷಣಗಳು ತಕ್ಷಣವೇ ಪ್ರಭಾವ ಬೀರುವುದಿಲ್ಲವೆಂದು ತಿಳಿಸಿರುವ ಸ್ಥಳೀಯ ಪತ್ರಿಕೆಗಳು ಆಯಾಸದಿಂದ ಬಳಲುತ್ತಿರುವ ಯುವ ಜನರು ಹಾಗೂ ಹೆಚ್ಚಿನ ನಾಡಿ ಬಡಿತವನ್ನು ಹೊಂದಿರುವ ಸಣ್ಣ ಮಗು ಸೇರಿದಂತೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದೆ.

ದಕ್ಷಿಣ ಆಫ್ರಿಕಾದಿಂದ ಬಂದಂತಹ ಮೊದಲ ಅಂಕಿ ಅಂಶ ನೋಡುವಾಗ, ವೈರಾಲಜಿಸ್ಟ್ ಮಾರ್ಕ್ ವ್ಯಾನ್ ರಾನ್ಸ್ಟ್ ಪ್ರಕಾರ "ಒಮಿಕ್ರೋನ್ ರೂಪಾಂತರವು ಕಡಿಮೆ ರೋಗಕಾರಕವಾಗಿದ್ದರೆ ಆದರೆ ಹೆಚ್ಚಿನ ಸೋಂಕಿನೊಂದಿಗೆ, ಡೆಲ್ಟಾವನ್ನು ಬದಲಿಸಲು ಒಮಿಕ್ರೋನ್‌ಗೆ ಅವಕಾಶ ನೀಡಿದರೆ, ಇದು ತುಂಬಾ ಧನಾತ್ಮಕವಾಗಿರುತ್ತದೆ" ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಪುರಾವೆಗಳು ರೂಪಾಂತರವು ಮರು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಡೆಲ್ಟಾ ಸೇರಿದಂತೆ ಇತರ ತಳಿಗಳಿಗಿಂತ ಹೆಚ್ಚು ವೇಗವಾಗಿ ಹರಡಬಹುದು ಎಂದು WHO ಎಚ್ಚರಿಸಿದೆ. ಒಮಿಕ್ರೋನ್ ಮರು ಸೋಂಕಿನ ಅಪಾಯವನ್ನು ಹೆಚ್ಚಿಸಿದೆ ಎಂಬುದನ್ನು ಸೂಚಿಸಲು ಆರಂಭಿಕ ಪುರಾವೆಗಳಿಗೆ ಎಂದು ತಿಳಿಸಿದ ಅವರು ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರದ ಕ್ಷಿಪ್ರ ಹರಡುವಿಕೆಯು ಬೆಳವಣಿಗೆಯ ಪ್ರಯೋಜನ ಹೊಂದಿದೆ ಎಂದು ತಿಳಿಸಿದ್ದಾರೆ.

ಇದರ ನಡುವೆಯೇ, ಜರ್ಮನಿ, ನೆದರ್ಲ್ಯಾಂಡ್, ಬೆಲ್ಜಿಯಂ, ಆಸ್ಟ್ರೇಲಿಯಾ, ಜೆಕ್ ರಿಪಬ್ಲಿಕ್, ಇಟಲಿ ಮತ್ತು ಯುಕೆ ಅಧಿಕಾರಿಗಳು ತಮ್ಮ ದೇಶಗಳಲ್ಲಿ ಕೊರೋನಾವೈರಸ್‌ನ ಹೊಸ ಒಮಿಕ್ರೋನ್ ರೂಪಾಂತರವನ್ನು ದೃಢಪಡಿಸಿದ್ದಾರೆ ಹಾಗೂ ಹರಡುವಿಕೆಯನ್ನು ತಡೆಯಲು ಪ್ರಪಂಚದಾದ್ಯಂತ ಸರಕಾರಗಳು ಹೆಣಗಾಡುತ್ತಿವೆ. ಪ್ರಪಂಚದಾದ್ಯಂತ 5 ದಶಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ಕೊರೊನಾ ಪ್ರಾರಂಭವಾಗಿ ಎರಡು ವರ್ಷಗಳು ಕಳೆದಿದ್ದರೂ ಎಲ್ಲಾ ದೇಶಗಳು ಹೆಚ್ಚಿನ ಮುತುವರ್ಜಿ ಅನುಸರಿಸಿಕೊಂಡು ಬರುತ್ತಿವೆ.

Recommended Video

Omicron ಎಷ್ಟು ಅಪಾಯಕಾರಿ ಎಂದು ತಿಳಿಯಲು ಇನ್ನೂ ಕಾಲಾವಕಾಶ ಬೇಕು | Oneindia Kannada

English summary
The Delhi Disaster Management Authority (DDMA) is scheduled to meet today to take a call on international passengers, especially from South Africa, Botswana, Zimbabwe and Hong Kong, amid concerns due to the new COVID-19 variant Omicron.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X