ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್‌ನಲ್ಲೂ ಕೂಡ ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾನ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 5: ಅಮೆಜಾನ್‌ನಲ್ಲೂ ಕೂಡ ಏಕಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ಚಿಂತನೆ ನಡೆಸಿದೆ. 2020ರ ಜೂನ್ ಒಳಗೆ ಈ ಯೋಜನೆ ಅನುಷ್ಠಾನಕ್ಕೆ ತರುವುದಾಗಿ ಕಂಪನಿಯ ಆಡಳಿತ ಮಂಡಳಿಯು ತಿಳಿಸಿದೆ.

ಅಮೆಜಾನ್ ಇಂಡಿಯಾ 2019ರ ಅಂತ್ಯದ ವೇಳೆಗೆ ದೇಶಾದ್ಯಂತ ಪೇಪರ್ ಪ್ಯಾಕಿಂಗ್‌ಗೆ ಆದ್ಯತೆ ನೀಡುತ್ತದೆ ಎಂದು ಅಮೆಜಾನ್ ಅಧಿಕಾರಿ ಅನಿಖ್ ಸಕ್ಸೇನಾ ತಿಳಿಸಿದ್ದಾರೆ.

ಸಂಪೂರ್ಣ ಮರು ಬಳಕೆ ಮಾಡಬಹುದಾದ, ಪರಿಸರ ಸುರಕ್ಷಿತ ವಸ್ತುಗಳನ್ನು ಮಾತ್ರ ಪ್ಯಾಕಿಂಗ್ ಮಾಡಲು ಬಳಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

amazon

ಅಮೆಜಾನ್ ತನ್ನ ವಸ್ತುಗಳನ್ನು ಪ್ಯಾಕಿಂಗ್ ಮಾಡಲು ಹೆಚ್ಚು ಪ್ಲಾಸ್ಟಿಕ್ ಮತ್ತು ಥರ್ಮೋಕೋಲ್ ಬಳಕೆ ಮಾಡುತ್ತಿದೆ ಎಂಬ ಟೀಕೆಗಳು ಕೇಳಿ ಬಂದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

2022ರ ವೇಳೆಗೆ ಏಕ ಬಳಕೆಯ ಪ್ಲಾಸ್ಟಿಕ್‌ಗಳ ಬಳಕೆಯನ್ನು ರದ್ದುಗೊಳಿಸುವ ಯೋಜನೆಯನ್ನು ಪ್ರಕಟಿಸಿದ್ದರು. ಪ್ರಧಾನಿ ಈ ನಿರ್ಧಾರ ಘೋಷಿಸಿ ಕೆಲವೇ ದಿನಗಳಲ್ಲಿ ಎರಡು ಬೃಹತ್ ಕಂಪನಿಗಳು ಪ್ಲಾಸ್ಟಿಕ್‌ಗೆ ಗುಡ್‌ಬೈ ಹೇಳಲು ಮುಂದಾಗಿದೆ.

ಬೆಂಗಳೂರು ನಗರದಲ್ಲಿ 3 ಕಿ. ಮೀ. ಓಡಿ; ಪ್ಲಾಸ್ಟಿಕ್ ಸಂಗ್ರಹಿಸಿಬೆಂಗಳೂರು ನಗರದಲ್ಲಿ 3 ಕಿ. ಮೀ. ಓಡಿ; ಪ್ಲಾಸ್ಟಿಕ್ ಸಂಗ್ರಹಿಸಿ

ಕಳೆದ ವಾರ ಫ್ಲಿಪ್‌ಕಾರ್ಟ್ ಸಹ ಇದೇ ಮಾದರಿಯ ಪ್ಲಾಸ್ಟಿಕ್ ಬಳಕೆಯನ್ನು ಶೇ.25ರಷ್ಟು ಕಡಿತಗೊಳಿಸಿದೆ. 2021ರ ಮಾರ್ಚ್ ರ ವೇಳೆಗೆ ತನ್ನದೇ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತೆ ದೇಶದ ಜನರಲ್ಲಿ ಆ.15ರಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು.

English summary
Amazon India said on Wednesday it would replace all single use plastic in its packaging by June 2020 with paper cushions,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X