ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಆರ್ಡರ್ ರದ್ದಾಗಿದೆ ಎಂದು ವಂಚಿಸಿದ ಅಮೇಜಾನ್ ಡೆಲಿವರಿ ಬಾಯ್

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ಇ-ಕಾಮರ್ಸ್ ತಾಣದಿಂದ ಖರೀದಿಸಿದ ಮೊಬೈಲ್ ಫೋನ್ ಅನ್ನು ಗ್ರಾಹಕರೊಬ್ಬರಿಗೆ ತಲುಪಿಸದೆ ವಂಚನೆ ಮಾಡಿದ ಆರೋಪದಡಿ ಅಮೇಜಾನ್ ಡೆಲಿವರಿ ಬಾಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮೊಬೈಲ್ ಫೋನ್‌ಅನ್ನು ಡೆಲಿವರಿ ಮಾಡುವ ಬದಲು 22 ವರ್ಷದ ಯುವಕ, ಆರ್ಡರ್ ಅನ್ನು ರದ್ದು ಮಾಡಲಾಗಿದೆ ಎಂದು ಹೇಳಿ ಆ ಫೋನ್‌ಅನ್ನು ತಾನೇ ಇರಿಸಿಕೊಂಡಿದ್ದ. ಈ ಸಂಬಂಧ ಗ್ರಾಹಕ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಬೇರೊಬ್ಬ ವ್ಯಕ್ತಿಯಿಂದ ಆ ಫೋನನ್ನು ವಶಪಡಿಸಿಕೊಂಡಿದ್ದಾರೆ. ಡೆಲಿವರಿ ಬಾಯ್ ಆ ಫೋನನ್ನು ಮತ್ತೊಬ್ಬರಿಗೆ ಮಾರಾಟ ಮಾಡಿ ಅವರಿಂದ ಹಣ ಪಡೆದುಕೊಂಡಿದ್ದ.

ಪಾರ್ಸೆಲ್ ಹೆಸರಿನಲ್ಲಿ ಹುಬ್ಬಳ್ಳಿ ಯುವಕನಿಗೆ 5 ಲಕ್ಷ ವಂಚನೆಪಾರ್ಸೆಲ್ ಹೆಸರಿನಲ್ಲಿ ಹುಬ್ಬಳ್ಳಿ ಯುವಕನಿಗೆ 5 ಲಕ್ಷ ವಂಚನೆ

ಅಮೇಜಾನ್‌ನಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್ ವಿರುದ್ಧ ದೆಹಲಿ ಪೊಲೀಸರಿಗೆ ಸೋಮವಾರ ದೂರು ನೀಡಲಾಗಿತ್ತು. ಅಕ್ಟೋಬರ್ 1ರಂದು ಮೊಬೈಲ್ ಫೋನ್ ಆರ್ಡರ್ ಮಾಡಿದ್ದ ವ್ಯಕ್ತಿ ಕಿದ್ವಾಯಿ ನಗರದಲ್ಲಿರುವ ಮನೆಗೆ ಬಂದಿದ್ದ ಡೆಲಿವರಿ ಬಾಯ್, ನಿಮ್ಮ ಆರ್ಡರ್ ರದ್ದಾಗಿದೆ. ಶೀಘ್ರದಲ್ಲಿಯೇ ನಿಮ್ಮ ದುಡ್ಡು ವಾಪಸ್ ಬರಲಿದೆ ಎಂದು ಹೇಳಿದ್ದ. ಅವರು ಅಮೇಜಾನ್ ತಾಣದಲ್ಲಿ ಪರಿಶೀಲಿಸಿದಾಗ ಮೊಬೈಲ್ ಫೋನ್ ಗ್ರಾಹಕರಿಗೆ ಡೆಲಿವರಿಗೆ ಆಗಿದೆ ಎಂದು ತೋರಿಸುತ್ತಿತ್ತು.

 Amazon Delivery Boy Tells Customer His Order Was Cancelled, Arrested

OLX ಹೆಸರಿನಲ್ಲಿ ಜನರಿಗೆ 12 ಲಕ್ಷ ರೂ. ವಂಚಿಸಿದ್ದವನ ಬಂಧನ OLX ಹೆಸರಿನಲ್ಲಿ ಜನರಿಗೆ 12 ಲಕ್ಷ ರೂ. ವಂಚಿಸಿದ್ದವನ ಬಂಧನ

ಕೂಡಲೇ ಅವರು ಅಮೇಜಾನ್ ಗ್ರಾಹಕ ವೇದಿಕೆಯನ್ನು ಸಂಪರ್ಕಿಸಿ ತಮ್ಮ ಹಣ ವಾಪಸ್ ನೀಡುವಂತೆ ಕೇಳಿದರು. ಪರಿಶೀಲನೆ ನಡೆಸಿದ ಕಂಪೆನಿ, ನಿಮ್ಮ ಫೋನ್ ಈಗಾಗಲೇ ಡೆಲಿವರಿ ಆಗಿದೆ ಎಂದು ತಿಳಿಸಿತ್ತು. ನಂತರ ಆ ಗ್ರಾಹಕ ಕಿದ್ವಾಯಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೀರ್ತಿನಗರದ ಜವಾಹರ್ ಕ್ಯಾಂಪ್‌ನ ನಿವಾಸಿಯಾಗಿರುವ ಡೆಲಿವರಿ ಬಾಯ್ ಮನೋಜ್ ವಿರುದ್ಧ ಐಪಿಸಿ ಸೆಕ್ಷನ್ 420ರ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಹಣದ ಅವಶ್ಯಕತೆ ಇದ್ದಿದ್ದರಿಂದ ಈ ರೀತಿ ವಂಚನೆ ಮಾಡಿದ್ದಾಗಿ ಆತ ತಿಳಿಸಿದ್ದಾನೆ.

English summary
Police have arrested a Amazon delivery boy in Delhi, who told the customer that order has been cancelled and sold the mobile phone to someone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X