ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತಾಡಲು ಬಿಡಿ, ಭೂಕಂಪ ಏನಂತ ತೋರಿಸ್ತೀನಿ : ರಾಹುಲ್

ಕಳೆದ ಒಂದು ತಿಂಗಳಿಂದ ಅಪನಗದೀಕರಣದ ಮೇಲೆ ಚರ್ಚೆ ಆಗಲೆಂದು ಬಯಸುತ್ತಿದ್ದೇವೆ. ಅವಕಾಶ ಕೊಟ್ಟದರೂ ನೋಡಲಿ 'ದೂದ್ ಕಾ ದೂದ್, ಪಾನಿ ಕಾ ಪಾನಿ' ಆಗೇ ಆಗುತ್ತದೆ, ನೋಡ್ತಿರಿ ಬೇಕಾದ್ರೆ ಎಂದು ಆಡಳಿತ ಪಕ್ಷಕ್ಕೆ ರಾಹುಲ್ ಗಾಂಧಿ ಸವಾಲು ಎಸೆದಿದ್ದಾರೆ.

By Prasad
|
Google Oneindia Kannada News

ನವದೆಹಲಿ, ಡಿಸೆಂಬರ್ 09 : "ಅಪನಗದೀಕರಣದ ಮೇಲೆ ಚರ್ಚೆ ಮಾಡದೆ ಕೇಂದ್ರ ಸರಕಾರ ಪಲಾಯನ ಮಾಡುತ್ತಿದೆ. ಅವರು ನನಗೆ ಈ ವಿಷಯದ ಮೇಲೆ ಮಾತನಾಡಲು ಅವಕಾಶ ಮಾಡಿಕೊಟ್ಟರೆ ಭೂಕಂಪ ಹೇಗಿರುತ್ತದೆಂದು ತೋರಿಸುತ್ತೇನೆ!"

ಹೀಗೆಂದು ಗುಡುಗಿರುವವರು ಮತ್ತಾರೂ ಅಲ್ಲ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಅಪನಗದೀಕರಣ ಭಾರತದ ಇತಿಹಾಸದಲ್ಲಿಯೇ ದಾಖಲಾದ ಅತೀದೊಡ್ಡ ಹಗರಣ. ಈ ಬಗ್ಗೆ ನಾನು ಲೋಕಸಭೆಯಲ್ಲಿ ಮಾತನಾಡಲು ಇಚ್ಛಿಸುತ್ತೇನೆ. ಅಲ್ಲಿ ಎಲ್ಲವನ್ನೂ ಬಯಲು ಮಾಡುತ್ತೇನೆ ಎಂದು ರಾಹುಲ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ. [ನಗದು ಬದಲು ಕಾರ್ಡ್ ಬಳಸುವವರಿಗೆ ಭರ್ಜರಿ ರಿಯಾಯಿತಿ]

Demonetisation - Allow me to speak, will show what earthquake is : Rahul Gandhi

ಪ್ರಧಾನ ಮಂತ್ರಿ (ನರೇಂದ್ರ ಮೋದಿ) ಇಡೀ ದೇಶದಲ್ಲಿ ಭಾಷಣ ಬಿಗಿಯುತ್ತಿದ್ದಾರೆ. ಆದರೆ, ಲೋಕಸಭೆಗೆ ಬರಲು ಹೆದರುತ್ತಿದ್ದಾರೆ. ಇಷ್ಟೊಂದು ಹೆದರಿಕೆ ಏಕೆ? ಎಂದು ಅಪನಗದೀಕರಣ ಯಜ್ಞ ಶುರುವಾಗಿ ಒಂದು ತಿಂಗಳು ಸಂದಿರುವ ಸಂದರ್ಭದಲ್ಲಿ ಶುಕ್ರವಾರ ಮಾಧ್ಯಮದೆದಿರು ರಾಹುಲ್ ಪ್ರಶ್ನಿಸಿದ್ದಾರೆ. [ಟ್ವಿಟ್ಟರಲ್ಲಿ ಅಪಹಾಸ್ಯಕ್ಕೀಡಾಗ ರಾಹುಲ್ 'ಭೂಕಂಪ'ದ ಮಾತು]

ಕಳೆದ ಒಂದು ತಿಂಗಳಿಂದ ಅಪನಗದೀಕರಣದ ಮೇಲೆ ಚರ್ಚೆ ಆಗಲೆಂದು ಬಯಸುತ್ತಿದ್ದೇವೆ. ಅವಕಾಶ ಕೊಟ್ಟದರೂ ನೋಡಲಿ 'ದೂದ್ ಕಾ ದೂದ್, ಪಾನಿ ಕಾ ಪಾನಿ' ಆಗೇ ಆಗುತ್ತದೆ, ನೋಡ್ತಿರಿ ಬೇಕಾದ್ರೆ ಎಂದು ಆಡಳಿತ ಪಕ್ಷಕ್ಕೆ ರಾಹುಲ್ ಗಾಂಧಿ ಸವಾಲು ಎಸೆದಿದ್ದಾರೆ. [ಕೋಟ್ಯಂತರ ರುಪಾಯಿ ನೋಟು ಬದಲಾವಣೆ ದಂಧೆ ನಡೆದದ್ದು ಹೀಗೆ]

English summary
Govt running away from debate on Demonetisation. If they allow me to speak then you will see what an earthquake will come : Rahul Gandhi has challenged the ruling party and Narendra Modi to allow him to speak on note ban. Will they allow him to speak?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X