ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದಕರ ಹುಟ್ಟಡಗಿಸಲು ಬಂದರು ಬಂದೂಕು ಹಿಡಿದ ದುರ್ಗೆಯರು

By Manjunatha
|
Google Oneindia Kannada News

ನವದೆಹಲಿ, ಆಗಸ್ಟ್ 11: ಭಾರತದ ಭಯೋತ್ಪಾದಕ ನಿಗ್ರಹ ದಳಕ್ಕೆ ಇನ್ನು ಮಹಿಳಾ ಬಲ ಕೂಡ ಸೇರಿಕೊಂಡಿದೆ. ದೆಹಲಿ ಪೊಲೀಸ್ ದೇಶದಲ್ಲೇ ಮೊದಲ ಬಾರಿಗೆ ಮಹಿಳಾ ಸ್ವಾಟ್ (SWAT) ತಂಡವನ್ನು ಸೇರ್ಪಡೆಗೊಳಿಸಿಕೊಂಡಿದೆ.

36 ಮಹಿಳಾ ಕಮಾಂಡರ್‌ಗಳು ಈ ತಂಡದಲ್ಲಿದ್ದು, ಬಹುತೇಕರು ಈಶಾನ್ಯ ರಾಜ್ಯದ ಮಹಿಳೆಯರಾಗಿದ್ದಾರೆ. ಸ್ವಾತಂತ್ರ್ಯ ದಿನೋತ್ಸವದ ಭದ್ರತಾ ಕಾರ್ಯದಲ್ಲಿ ಈ ತಂಡ ಭಾಗಿಯಾಗಲಿದೆ.

ಬೇಟಿ ಬಚಾವೊ...' ಜಾಗೃತಿ ಮೂಡಿಸಲು ವಿಮಾನವೇರಿ ಹೊರಟ ಮಹಿಳಾ ಪೈಲಟ್‌ಗಳುಬೇಟಿ ಬಚಾವೊ...' ಜಾಗೃತಿ ಮೂಡಿಸಲು ವಿಮಾನವೇರಿ ಹೊರಟ ಮಹಿಳಾ ಪೈಲಟ್‌ಗಳು

ಈ ಮಹಿಳಾ ಸ್ವಾಟ್ (ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಾರಿಕಾ ಪಡೆ) ತಂಡವನ್ನು ದೆಹಲಿ ಪೊಲೀಸ್ ಗೆ ಸೇರ್ಪಡೆಗೊಳ್ಳುವ ವಿಶೇಷ ಸಂದರ್ಭಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಸಾಕ್ಷಿಯಾಗಿದ್ದು. ಮಹಿಳಾ ಸ್ವಾಟ್ ಬಲ ಇನ್ನಷ್ಟು ಹೆಚ್ಚಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಠಿಣ ತರಬೇತಿ

ಕಠಿಣ ತರಬೇತಿ

36 ಮಹಿಳಾ ಸ್ವಾಟ್ ಸದಸ್ಯರು 15 ತಿಂಗಳ ಕಠಿಣ ತರಬೇತಿ ಪಡೆದಿದ್ದಾರೆ. ಎನ್‌ಎಸ್‌ಜಿ ಕಮಾಂಡೋಗಳು ನೀಡಿದ ತರಬೇತಿಯಲ್ಲಿ, ಆರಂಭಿಕ ಹಂತದ ಭದ್ರತೆಯಿಂದ ಹಿಡಿದು ವಿಶೇಷ ಆಪರೇಷನ್‌ ಮಾಡುವ ಎಲ್ಲ ರೀತಿಯ ತರಬೇತಿಗಳನ್ನು ಈ ಮಹಿಳಾ ತಂಡ ಹೊಂದಿದೆ.

ಕ್ಯಾಬ್ ಚಾಲಕರಿಂದ ಕಿರುಕುಳ: ಮಹಿಳಾ ಚಾಲಕರಿಗೆ ಹೆಚ್ಚಿದ ಬೇಡಿಕೆಕ್ಯಾಬ್ ಚಾಲಕರಿಂದ ಕಿರುಕುಳ: ಮಹಿಳಾ ಚಾಲಕರಿಗೆ ಹೆಚ್ಚಿದ ಬೇಡಿಕೆ

ಕ್ರಾವ್ ಮಗಾದಲ್ಲಿ ಪರಿಣಿತಿ

ಕ್ರಾವ್ ಮಗಾದಲ್ಲಿ ಪರಿಣಿತಿ

ಇಸ್ರೇಲಿಯಾ ಕ್ರಾವ್ ಮಗಾ ಎಂಬ ಸಮರ ಕಲೆಯಲ್ಲಿ ಈ ತಂಡ ಪರಿಣಿತಿ ಪಡೆದಿದೆ. ಕ್ರಾವ್ ಮಗಾ ಅತ್ಯಂತ ಅಪಾಯಕಾರಿ ಹೊಡೆದಾಟದ ಕಲೆ ಎಂದೇ ಖ್ಯಾತಿ ಗಳಿಸಿದೆ. ಇದೊಂದು ನಿರಾಯುಧ ಯುದ್ಧ ಶೈಲಿ. ಆಯುಧ ಇಲ್ಲದೆ ಎದುರಾಳಿಯನ್ನು ನೆಲಕಚ್ಚಿಸುವ ಅತ್ಯಂತ ಅಪಾಯಕಾರಿ ಯುದ್ಧಶೈಲಿ ಇದಾಗಿದೆ.

ಪೊಲೀಸ್ ವೃತ್ತಿ ಪುರುಷ ಪ್ರಧಾನ: ರೂಪಾ ಮೌದ್ಗಿಲ್ಪೊಲೀಸ್ ವೃತ್ತಿ ಪುರುಷ ಪ್ರಧಾನ: ರೂಪಾ ಮೌದ್ಗಿಲ್

ಬಳಸುತ್ತಿರುವ ಗನ್‌ಗಳು

ಬಳಸುತ್ತಿರುವ ಗನ್‌ಗಳು

ಈ ಸ್ಟಾಟ್ ತಂಡದ ಮಹಿಳೆಯರು ಭಾರತದ ಎಲ್ಲ ರೀತಿಯ ಶಸ್ತ್ರಾಸ್ತ್ರಗಳನ್ನು ಬಳಸುವುದರ ಬಗ್ಗೆ ತರಬೇತಿ ಪಡೆದಿದ್ದಾರೆ. ಆದರೆ ಸ್ವಾತಂತ್ರ್ಯದಿನೋತ್ಸವದ ದಿನ ಇವರಿಗೆ ಎಂಪಿ5 ಸಬ್ ಮಷಿನ್ ಗನ್, ಜಿಲಾಕ್ 21 ಪಿಸ್ತೂಲುಗಳನ್ನು ನೀಡಿ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ.

ಯಾವ ಸನ್ನಿವೇಶಗಳಿಗೆ ಸಿದ್ಧ

ಯಾವ ಸನ್ನಿವೇಶಗಳಿಗೆ ಸಿದ್ಧ

ಈ ಸ್ವಾಟ್ ತಂಡವು, ತೆರೆ-ಮರೆ ಯುದ್ಧ, ವಿಐಪಿ ಭದ್ರತೆ, ನೇರ ಯುದ್ಧ, ನಗರ ಪ್ರದೇಶದಲ್ಲಿ ನಡೆಸುವ ದಾಳಿಗಳನ್ನು ಹತ್ತಿಕ್ಕುವಲ್ಲಿ ಪರಿಣಿತಿ ಪಡೆದಿದೆ ಎಂದು ದೆಹಲಿ ಆಯುಕ್ತ ಹೇಳಿದ್ದಾರೆ. ಇಷ್ಟೆ ಅಲ್ಲದೆ, ವಿಶೇಷ ತನಿಖೆ, ತಂತ್ರಜ್ಞಾನ ಮಾಹಿತಿ, ಶಸ್ತ್ರಾಸ್ತ್ರ ಮಾಹಿತಿಯೂ ಈ ತಂಡದ ಸದಸ್ಯರಿಗೆ ಇದೆ.

ಯಾವ ರಾಜ್ಯದ ಎಷ್ಟು ಮಹಿಳೆಯರು

ಯಾವ ರಾಜ್ಯದ ಎಷ್ಟು ಮಹಿಳೆಯರು

36 ಮಹಿಳೆಯರ ಈ ತಂಡದಲ್ಲಿ 13 ಮಹಿಳೆಯರು ಅಸ್ಸಾಂ ರಾಜ್ಯದವರೇ ಆಗಿರುವುದು ವಿಶೇಷ ಇನ್ನುಳಿದ ಮಹಿಳೆಯರು ಅರುಣಾಚಲಪ್ರದೇಶ, ಸಿಕ್ಕಿಂ ಮತ್ತು ಮಣಿಪುರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಎಲ್ಲಾ ಸದಸ್ಯರು ಈಶಾನ್ಯದವರೇ ಆಗಿರುವುದು ವಿಶೇಷ.

English summary
All women SWAT team Friday inducted to Delhi police by central home minister Rajanath Singh. 36 fully trained women were in the team. they trained by NSG commandos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X