ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ವಿವಾದದ ಕಾನೂನು ಪ್ರಕ್ರಿಯೆ ಅಂತ್ಯವಾಗುವರೆಗೂ ಸುಮ್ಮನಿರಿ: ರಾಮ್ ಮಾಧವ್

|
Google Oneindia Kannada News

ನವದೆಹಲಿ, ನವೆಂಬರ್ 15: 'ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳು ಮುಗಿಯುವವರೆಗೂ ಎಲ್ಲರೂ ಸುಮ್ಮನೆ ಉಳಿಯುವುದು ಒಳಿತು' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದರು.

ಶ್ರೀ ರವಿಶಂಕರ್ ಭೇಟಿಯಿಂದ ಬಗೆಹರಿಯುತ್ತಾ ಅಯೋಧ್ಯಾ ವಿವಾದ?ಶ್ರೀ ರವಿಶಂಕರ್ ಭೇಟಿಯಿಂದ ಬಗೆಹರಿಯುತ್ತಾ ಅಯೋಧ್ಯಾ ವಿವಾದ?

ಶ್ರೀ ರವಿಶಂಕರ್ ಗುರೂಜಿ ಅವರು ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ನಾಳೆ(ನ.16) ಅಯೋಧ್ಯೆಗೆ ತೆರಳಿರುವ ಕುರಿತಂತೆ ನವದೆಹಲಿಯಲ್ಲಿ ಮಾತನಾಡಿದ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.

All should first allow the legal process to be completed in the Supreme Court: Ram Madhav

'ಸುಪ್ರೀಂ ಕೋರ್ಟಿನಲ್ಲಿ ಅಯೋಧ್ಯಾ ವಿವಾದ ಪ್ರಕರಣ ಅಂತಿಮ ಘಟ್ಟದಲ್ಲಿ. ಇಂಥ ಸಮಯದಲ್ಲಿ ಕಾನೂನು ಪ್ರಕ್ರಿಯೆ ಅಂತ್ಯಗೊಳ್ಳುವುದಕ್ಕೆ ನಾವು ಅವಕಾಶ ಮಾಡಿಕೊಡಬೇಕು. ಕಾನೂನಾತ್ಮಕ ಪ್ರತಿಕ್ರಿಯೆಗಳು ಮುಗಿದ ನಂತರ ಮುಂದಿನ ದಾರಿಗಳನ್ನು ಹುಡುಕಿಕೊಳ್ಳಬೇಕು. ಸದ್ಯಕ್ಕೆ ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗೆ ಬಿಟ್ಟುಬಿಡಬೇಕು' ಎಂದು ರಾಮ್ ಮಾಧವ್ ಹೇಳಿದರು.

ಇಂದು(ನ.15) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ, ನಾಳೆ ಅಯೋಧ್ಯೆಗೆ ತೆರಳಲಿದ್ದಾರೆ.

English summary
Bharatiya Janata Party (BJP) national general secretary Ram Madhav downplayed Sri Sri Ravi Shankar's visit to Ayodhya and said they all should first allow the legal process to be completed in the Supreme Court, only after which other options should be explored.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X