ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ವಿರುದ್ಧ ಕೇಂದ್ರದ ಯುದ್ಧಕ್ಕೆ ಸರ್ವ ಪಕ್ಷಗಳು ಬೆಂಬಲ

|
Google Oneindia Kannada News

ನವದೆಹಲಿ, ಫೆಬ್ರವರಿ 26: ಉಗ್ರರ ಹುಟ್ಟಡಿಗಸಲು ಎಲ್ಲಾ ರಾಜಕೀಯ ಪಕ್ಷಗಳೂ ಒಟ್ಟಾಗಿ ನಿಂತು ಕೇಂದ್ರ ಸರ್ಕಾರಕ್ಕೆ ಬೆಂಬಲ ಘೋಷಿಸಿವೆ.

ಮೆಹಬೂಬಾ ಮಾತನ್ನೇ ಬಂಡವಾಳ ಮಾಡಿಕೊಂಡ ಪಾಕಿಸ್ತಾನಮೆಹಬೂಬಾ ಮಾತನ್ನೇ ಬಂಡವಾಳ ಮಾಡಿಕೊಂಡ ಪಾಕಿಸ್ತಾನ

ಉಗ್ರರ ನಿಗ್ರಹಕ್ಕೆ ಪಾಕಿಸ್ತಾನದ ಒಳನುಗ್ಗಿ ಕಾರ್ಯಾಚರಣೆ ಕೈಗೊಂಡ ನಂತರ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷಗಳ ಮುಖಂಡರು ಕೇಂದ್ರ ಸರ್ಕಾರದ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಉಗ್ರರ ಬೇಟೆಗೆ ವಾಯುಪಡೆ ಬಳಸಿದ್ದು 1.7 ಕೋಟಿ ಮೌಲ್ಯದ ಬಾಂಬ್!ಉಗ್ರರ ಬೇಟೆಗೆ ವಾಯುಪಡೆ ಬಳಸಿದ್ದು 1.7 ಕೋಟಿ ಮೌಲ್ಯದ ಬಾಂಬ್!

ಸರ್ವ ಪಕ್ಷ ಸಭೆಯ ಬಳಿಕ ಮಾತನಾಡಿದ ಸುಷ್ಮಾ ಸ್ವರಾಜ್ ಅವರು, ಸಭೆಯಲ್ಲಿ ಮೊದಲಿಗೆ ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡಿದ ವಾಯುಸೇನೆಗೆ ಅಭಿನಂದನೆ ಸಲ್ಲಿಸಲಾಯಿತು. ನಂತರ ಸರ್ವ ಪಕ್ಷಗಳು ಈ ಉಗ್ರರ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಇರುವುದಾಗಿ ಹೇಳಿದರು ಎಂದಿದ್ದಾರೆ.

ಕಾಶ್ಮೀರಿ ಅಮ್ಮಂದಿರಿಗೆ ಪತ್ರ : ನಿಮ್ಮ ಮಗ ಬೀದಿ ಹೆಣವಾಗುವುದು ಬೇಕಾ?ಕಾಶ್ಮೀರಿ ಅಮ್ಮಂದಿರಿಗೆ ಪತ್ರ : ನಿಮ್ಮ ಮಗ ಬೀದಿ ಹೆಣವಾಗುವುದು ಬೇಕಾ?

All party meeting decides to continue fight against terrorism

ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆಯ ಬಗ್ಗೆ ವಿವರಗಳನ್ನು ಸುಷ್ಮಾ ಸ್ವರಾಜ್ ಅವರು ಸರ್ವ ಪಕ್ಷಗಳಿಗೆ ನೀಡಿದರು. ಗೃಹ ಸಚಿವ ರಾಜನಾಥ ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಭೆಯಲ್ಲಿ ಹಾಜರಿದ್ದರು. ಎಲ್ಲಾ ಪ್ರಮುಖ ಪಕ್ಷಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

English summary
All party meeting is held today in New Delhi in leadership of Sushma Swaraj. All parties praised Indian air force. All parties extended support to government in fight against terrorism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X