ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ 6 ತಿಂಗಳಲ್ಲಿ ಎಲ್ಲಾ ಸರ್ಕಾರಿ ವಾಹನಗಳು ವಿದ್ಯುತ್ ಚಾಲಿತ

|
Google Oneindia Kannada News

ನವದೆಹಲಿ,ಫೆಬ್ರವರಿ 25: ಮುಂದಿನ 6 ತಿಂಗಳಲ್ಲಿ ದೆಹಲಿ ಸರ್ಕಾರದ ಎಲ್ಲಾ ವಾಹನಗಳು ವಿದ್ಯುತ್ ಚಾಲಿತವಾಗಲಿವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿ ಸರ್ಕಾರದ ಯಾವುದೇ ಇಲಾಖೆ ಮತ್ತು ಸ್ವಾಯತ್ತ ಸಂಸ್ಥೆ ಹಣಕಾಸು ಇಲಾಖೆಯ ಅನುಮತಿಯೊಂದಿಗೆ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನವನ್ನು ಬಾಡಿಗೆಗೆ ಪಡೆಯಬಹುದು.

ಬೆಂಗಳೂರಲ್ಲಿ ಸಿಕೆ ಮೋಟರ್ಸ್ ಎಲೆಕ್ಟ್ರಿಕ್ ವಾಹನಗಳ ಅನಾವರಣ ಬೆಂಗಳೂರಲ್ಲಿ ಸಿಕೆ ಮೋಟರ್ಸ್ ಎಲೆಕ್ಟ್ರಿಕ್ ವಾಹನಗಳ ಅನಾವರಣ

ಬಳಿಕ ಅಸ್ತಿತ್ವದಲ್ಲಿರುವ ಒಪ್ಪಂದವನ್ನು ವಿಸ್ತರಿಸಲು ಅನುಮತಿ ಅಗತ್ಯವಿಲ್ಲ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

All Delhi Government Vehicles To Switch To Electric Within 6 Months

ಸಾರಿಗೆ ಇಲಾಖೆಯು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸುವುದನ್ನು ನೋಡಿಕೊಳ್ಳುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತನೆ ಹೇಗೆ ನಡೆಯುತ್ತಿದೆ ಎಂಬುದರ ಕುರಿತು ಎಲ್ಲಾ ಇಲಾಖೆಗಳು ಪ್ರತಿ ತಿಂಗಳು ಸಾರಿಗೆ ಇಲಾಖೆಗೆ ವರದಿ ನೀಡುತ್ತವೆ. ಅಂತರವನ್ನು ಗುರುತಿಸುತ್ತವೆ ಹಾಗೆಯೇ ಆರು ತಿಂಗಳುಗಳಲ್ಲಿ ಗುರಿಯನ್ನು ಪೂರೈಸಲು ಸಲಹೆ ನೀಡುತ್ತದೆ.

ಕಳೆದ ಆಗಸ್ಟ್‌ನಲ್ಲಿ ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಿಸಿದ್ದು,ನಗರವನ್ನು ಭಾರತದ ಎಲೆಕ್ಟ್ರಿಕ್ ರಾಜಧಾನಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ.

ದೆಹಲಿಯ ವಾಯು ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಲುಮತ್ತು 2024ರ ವೇಳೆಗೆ ಎಲ್ಲಾ ಹೊಸ ವಾಹನಗಳಲ್ಲಿ ಕನಿಷ್ಠ ಶೇ.25ರಷ್ಟು ಬ್ಯಾಟರಿ ಚಾಲಿತವಾಗಿರಲಿದೆ.

ರಾಷ್ಟ್ರರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ವಿಶೇವಾಗಿ ಚಳಿಗಾಲದ ಸಮಯದಲ್ಲಿ ಮತ್ತಷ್ಟು ಕಳಪೆಯಾಗುತ್ತದೆ. ಸಮ-ಬೆಸ ಯೋಜನೆಯನ್ನು ಕೂಡ ಜಾರಿಗೆ ತಂದಿದೆ.
ನಗರದಲ್ಲಿ ವಾಹನಗಳಿಂದಾಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

English summary
All petrol, diesel and CNG vehicles of the Delhi government will be replaced with electric ones within six months, the Arvind Kejriwal government said in an order today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X