ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನಗಳ ಹಾರಾಟ ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಬ್ರಿಟಿಷ್ ಏರ್‌ವೇಸ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 9: ಬ್ರಿಟಿಷ್ ಏರ್‌ವೇಸ್ ತನ್ನೆಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸುದ್ದಿ ಸಂಸ್ಥೆ ರಾಯ್ಟರ್ಸ್ ಈ ಕುರಿತು ವರದಿ ಮಾಡಿದೆ. ಪೈಲಟ್‌ಗಳು ಪ್ರತಿಭಟನೆಗಿಳಿದಿರುವ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಬ್ರಿಟಿಷ್ ಏರ್‌ವೇಸ್ ಹಾರಾಟ ಸ್ಥಗಿತಗೊಳಿಸಲಾಗಿದೆ.

ಪ್ರಯಾಣಿಕರ ಅನಾನುಕೂಲತೆ ಮತ್ತು ಎಲ್ಲಾ ದೂರುಗಳ ಬಗ್ಗೆ ಬ್ರಿಟಿಷ್ ಏರ್‌ವೇಸ್‌ ಹೇಳಿಕೆ ನೀಡಿದೆ. ಬ್ರಿಟಿಷ್ ಏರ್‌ಲೈನ್ಸ್ ​​ಪೈಲಟ್ಸ್ ಅಸೋಸಿಯೇಷನ್ ​​(BALPA) ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರಾಗುವುದರಿಂದ, ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಒಂದು ಕಲ್ಪನೆಯನ್ನು ಪಡೆಯಬಹುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

All British Airways Flights Cancelled

ಪೈಲಟ್‌ಗಳೊಂದಿಗೆ ಜೊತೆ ಮಾತುಕತೆ ನಡೆಸಿದ ನಂತರ ನಾವು ತೀರ್ಮಾನಕ್ಕೆ ಬರಲು ಆಶಿಸುತ್ತಿದ್ದೇವೆ ಎಂದು ವಿಮಾನಯಾನ ಸಂಸ್ಥೆ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಸೋಮವಾರ ಮತ್ತು ಮಂಗಳವಾರ ನಿಗದಿಯಾಗಿದ್ದ 1,500 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮುಷ್ಕರದಿಂದಾಗಿ ಸುಮಾರು 280,000 ಪ್ರಯಾಣಿಕರ ಪ್ರಯಾಣದ ಮೇಲೆ ಪರಿಣಾಮ ಬೀರಿದೆ ಎಂದು ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ತಿಳಿಸಿದೆ.

ಕಳೆದ ಹಲವು ತಿಂಗಳುಗಳಿಂದ ವೇತನ, ಬೇಡಿಕೆಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದವನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ, ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಮತ್ತು ಪರಿಸ್ಥಿತಿ ಇಲ್ಲಿಗೆ ಬಂದು ತಲುಪಿದೆ ಎಂದು ಬ್ರಿಟಿಷ್ ಏರ್‌ವೇಸ್‌ ವಿಷಾದ ವ್ಯಕ್ತಪಡಿಸಿದೆ.

English summary
Due to Pilots strike All British Airways Flights cancelled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X