ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021 ರ ಎಲ್ಲಾ ಹಜ್ ಅರ್ಜಿಗಳು ರದ್ದು: ಭಾರತದ ಹಜ್ ಸಮಿತಿ

|
Google Oneindia Kannada News

ನವದೆಹಲಿ, ಜೂ. 15: ಹಜ್ 2021 ಕ್ಕೆ ನಿಗದಿಯಾಗಿದ್ದ ಎಲ್ಲಾ ಅರ್ಜಿಗಳನ್ನು ಮಂಗಳವಾರ ಭಾರತದ ಹಜ್ ಸಮಿತಿ ರದ್ದುಗೊಳಿಸಿದೆ. ನಾಗರಿಕರು ಮತ್ತು ಸ್ಥಳೀಯ ನಿವಾಸಿಗಳಿಗೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ಹಜ್‌ಗೆ ಹಾಜರಾಗಲು ಅವಕಾಶ ನೀಡಲು ನಿರ್ಧರಿಸಿದೆ ಎಂದು ಸೌದಿ ಅರೇಬಿಯಾ ಘೋಷಿಸಿದ ನಂತರ ಭಾರತದ ಹಜ್ ಸಮಿತಿ ಈ ನಿರ್ಧಾರಕ್ಕೆ ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹಜ್ ಸಮಿತಿ, "ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ಕೊರೊನಾ ವೈರಸ್ ಸಾಂಕ್ರಾಮಿಕ ಕಾರಣದಿಂದಾಗಿ ಸೌದಿ ಅರೇಬಿಯಾದ ನಾಗರಿಕರು ಮತ್ತು ನಿವಾಸಿಗಳಿಗೆ ಮಾತ್ರ ಸೀಮಿತ ಸಂಖ್ಯೆಯಲ್ಲಿ ಹಜ್‌ಗೆ ಹಾಜರಾಗಲು ಅವಕಾಶ ನೀಡಲು ನಿರ್ಧರಿಸಿದೆ ಎಂದು ತಿಳಿಸಿದೆ. ಈ ಬಾರಿ ಹಜ್ ರದ್ದು ಮಾಡಲಾಗಿದೆ. ಆದ್ದರಿಂದ, ಹಜ್ 2021 ಎಲ್ಲಾ ಅರ್ಜಿಗಳನ್ನು ರದ್ದುಪಡಿಸಲು ಭಾರತದ ಹಜ್ ಸಮಿತಿಯು ನಿರ್ಧರಿಸಿದೆ," ಎಂದು ತಿಳಿಸಿದೆ.

2020ರ ಹಜ್ ಪ್ರಾರ್ಥನೆಯಲ್ಲಿ 1,000 ಯಾತ್ರಾರ್ಥಿಗಳಿಗೆ ಅವಕಾಶ 2020ರ ಹಜ್ ಪ್ರಾರ್ಥನೆಯಲ್ಲಿ 1,000 ಯಾತ್ರಾರ್ಥಿಗಳಿಗೆ ಅವಕಾಶ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಹಜ್ ತೀರ್ಥಯಾತ್ರೆ 60,000 ಕ್ಕಿಂತ ಕಡಿಮೆ ಜನರಿಗೆ ಮಾತ್ರ ಸೀಮಿತವಾಗಿದೆ ಎಂದು ಶನಿವಾರ ಸೌದಿ ಅರೇಬಿಯಾ ಘೋಷಿಸಿದೆ.

All applications for Haj 2021 cancelled says Haj Committee of India

ಕಳೆದ ವರ್ಷದ ಹಜ್‌ನಲ್ಲಿ ಈಗಾಗಲೇ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವ 1,000 ಜನರು ಭಾಗವಹಿಸಲು ಆಯ್ಕೆ ಮಾಡಲಾಗಿತ್ತು. 160 ವಿವಿಧ ರಾಷ್ಟ್ರದಿಂದ ಮೂರರಲ್ಲಿ ಎರಡು ಭಾಗದಷ್ಟು ವಿದೇಶಿಗರು ಆಗಮಿಸಿದ್ದರು. ಮೂರನೇ ಒಂದು ಭಾಗದಷ್ಟು ಜನರು ಸೌದಿ ಭದ್ರತಾ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿಗಳು ಇದ್ದರು. ಪ್ರತಿ ವರ್ಷ, ಸುಮಾರು 2 ಮಿಲಿಯನ್ ಮುಸ್ಲಿಮರು ಹಜ್ ಪ್ರಯಾಣ ಮಾಡುತ್ತಾರೆ.

(ಒನ್‌ಇಂಡಿಯಾ ಸುದ್ದಿ)

English summary
All applications for Haj 2021 cancelled says Haj Committee of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X