ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ ದಿನದ ಫ್ಲೈಪಾಸ್ಟ್ ನೇತೃತ್ವ ವಹಿಸಲಿದ್ದಾರೆ ಸ್ವಾತಿ ರಾಥೋಡ್

|
Google Oneindia Kannada News

ನವದೆಹಲಿ, ಜನವರಿ 25:ಗಣರಾಜ್ಯೋತ್ಸವ ದಿನದ ಪರೇಡ್‌ನ ಫ್ಲೈಪಾಸ್ಟ್ ನೇತೃತ್ವವನ್ನು ಭಾರತೀಯ ವಾಯುಸೇನೆಯ ಲೆಫ್ಟಿನೆಂಟ್ ಸ್ವಾತಿ ರಾಥೋಡ್ ವಹಿಸಲಿದ್ದಾರೆ.

ಸ್ವಾತಿ ರಾಥೋಡ್ ಮೂಲತಃ ರಾಜಸ್ತಾನದವರು, ಇದೇ ಮೊದಲ ಬಾರಿಗೆ ರಾಜಪಥದಲ್ಲಿ ಜನವರಿ 26 ರಂದು ನಡೆಯಲಿರುವ ಫ್ಲೈಪಾಸ್ಟ್‌ನ ನೇತೃತ್ವವಹಿಸಿಕೊಂಡಿರುವ ಮೊದಲ ಮಹಿಳೆ ಇವರಾಗಿದ್ದಾರೆ.

ರಾಜ್ಯದ 19 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ರಾಜ್ಯದ 19 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ

ಅವರ ತಂದೆ ಡಾ. ಭವಾನಿ ಸಿಂಗ್ ರಾಥೋಡ್ ಮಾತನಾಡಿ, ಮಗಳ ಈ ಸಾಧನೆ ಯಾವಾಗಲೂ ನಾನು ತಲೆಯನ್ನು ಎತ್ತಿ ಗೌರವದಿಂದ ನಡೆಯುವಂತೆ ಮಾಡಿದೆ. ನಾನು ಕಂಡಿದ್ದ ಕನಸನ್ನು ಮಗಳು ನೆರವೇರಿಸಿದ್ದಾಳೆ'.

All About Swathi Rathore, First Woman To Lead Republic Day Parade Flypast In Kannada

ರಾಥೋಡ್ ರಾಜ್ಯ ಕೃಷಿ ಇಲಾಖೆಯ ಉಪ ನಿರ್ದೇಶಕರಾಗಿದ್ದರು. ಎಲ್ಲಾ ಪೋಷಕರು ತಮ್ಮ ಮಕ್ಕಳ ಕನಸನ್ನು ನನಸು ಮಾಡಲು ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ.

2013ರಲ್ಲಿ ಸ್ವಾತಿ ಭಾರತೀಯ ವಾಯು ಸೇನೆಯ ಕಾಮನ್ ಅಡ್ಮಿಷನ್ ಪರೀಕ್ಷೆ ಬರೆದಿದ್ದರು. ಅದರಲ್ಲಿ ಉತ್ತೀರ್ಣರಾದ ಬಳಿಕ ಭಾರತೀಯ ವಾಯು ಸೇನೆ ಮಂಡಳಿಯ ಇಂಟರ್‌ವ್ಯೂನಲ್ಲಿಯೂ ಪಾಸ್ ಆಗಿದ್ದರು.

200 ಮಂದಿ ಮಹಿಳಾ ಅಭ್ಯರ್ಥಿಗಳ ಪೈಕಿ 90 ಮಂದಿ ಉತ್ತೀರ್ಣರಾಗಿ ಮುಖ್ಯನೆಲೆಗೆ ಬಂದಿದ್ದರು.

English summary
Indian Air Force Flight Lieutenant Swati Rathore, who hails from Rajasthan, will script a new chapter in the history of woman empowerment by becoming the first woman to lead the flypast at the Republic Day parade on January 26 at Delhi's Rajpath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X