ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಿ ಮುಂದೆ ವಿಚಾರಣೆಗೆ ಹಾಜರಾದ ಡಿಕೆಶಿ ಪುತ್ರಿ ಐಶ್ವರ್ಯ

|
Google Oneindia Kannada News

Recommended Video

DK Shivakumar : ವಿಚಾರಣೆಗೆ ಹಾಜರಾದ ಡಿಕೆಶಿ ಪುತ್ರಿ ಐಶ್ವರ್ಯ | Oneindia Kannada

ನವದೆಹಲಿ, ಸೆಪ್ಟೆಂಬರ್ 12: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಪುತ್ರಿ ಇಂದು ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಐಶ್ವರ್ಯ ಜಾರಿ‌ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ನೀಡುವ ಹೇಳಿಕೆಗಳು ಡಿ‌.ಕೆ. ಶಿವಕುಮಾರ್ ಅವರ ಭವಿಷ್ಯವನ್ನು ನಿರ್ಧರಿಸುತ್ತವೆ.

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಶತಕೋಟಿಗಳ ಒಡತಿ ಆಗಿದ್ದೇಗೆ?

ಡಿ.ಕೆ. ಶಿವಕುಮಾರ್, ಐಶ್ವರ್ಯ ಹೆಸರಿನಲ್ಲಿ ಬೇನಾಮಿ‌ ಆಸ್ತಿ ಮಾಡಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂಬುದು ಇಡಿ ಅಧಿಕಾರಿಗಳ ದಟ್ಟ ಅನುಮಾನವಾಗಿದೆ.

Aishwarya Shivakumar Come To ED Office For Hearing

ಆದರೆ ಡಿಕೆ ಶಿವಕುಮಾರ್ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಅದರಿಂದಾಗಿ ಈಗ ಇಡಿ ಅಧಿಕಾರಿಗಳು ಡಿಕೆಶಿ ಪುತ್ರಿ ಐಶ್ವರ್ಯ ಅವರಿಂದ ಬಾಯಿ ಬಿಡಿಸಲು ಪ್ರಯತ್ನಿಸಲಿದ್ದಾರೆ.

ಈಗಾಗಲೇ 7 ದಿನ ಡಿ.ಕೆ. ಶಿವಕುಮಾರ್ ಅವರನ್ನು ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಪುತ್ರಿ ಐಶ್ವರ್ಯ ಅವರಿಗೆ ಸೆಪ್ಟೆಂಬರ್ 12ನೇ ತಾರೀಖು ದೆಹಲಿಯ ಜಾರಿ‌ ನಿರ್ದೇಶನಾಲಯದ ಕಚೇರಿಗೆ ವಿಚಾರಣೆಗಾಗಿ ಆಗಮಿಸಬೇಕೆಂದು ಸಮನ್ಸ್ ನೀಡಿದ್ದರು. ಈ ಸಮನ್ಸ್ ಅನ್ವಯ ಗುರುವಾರ ಐಶ್ವರ್ಯ ವಿಚಾರಣೆಗೆ ಬಂದಿದ್ದಾರೆ.

ಇಡಿ ವಿಚಾರಣೆಗೆ ದೆಹಲಿಗೆ ತೆರಳಿದ ಡಿಕೆಶಿ ಪುತ್ರಿ ಐಶ್ವರ್ಯಾಇಡಿ ವಿಚಾರಣೆಗೆ ದೆಹಲಿಗೆ ತೆರಳಿದ ಡಿಕೆಶಿ ಪುತ್ರಿ ಐಶ್ವರ್ಯಾ

ಗೌರಮ್ಮ ಅವರು 2001ಲ್ಲಿ ಐಶ್ವರ್ಯಗೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ 3 ಎಕರೆ ಜಮೀನನ್ನು ಗಿಫ್ಟ್​ ಡೀಡ್ ಮಾಡಿಕೊಟ್ಟಿದ್ದರು.

ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಮೊಮ್ಮಗಳಾದ ಐಶ್ವರ್ಯಗೆ ನೀಡಿರುವ ಆಸ್ತಿ ಮತ್ತು ಹಣವೇ ಈಗ ಅಪಾಯವಾಗಿ ಪರಿಣಮಿಸಿದೆ.

2002ರಲ್ಲಿ ಹೊಸಕೆರೆಹಳ್ಳಿಯಲ್ಲಿ 3 ಎಕರೆ ಜಮೀನಿಗೆ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದರು. ಇದಲ್ಲದೆ 2018ರಲ್ಲಿ ತಮ್ಮ ಅಕೌಂಟ್​ನಿಂದ ಐಶ್ವರ್ಯ ಖಾತೆಗೆ 3 ಕೋಟಿ ರೂಪಾಯಿ ಹಾಕಿದ್ದರು. ಇವೆಲ್ಲವನ್ನೂ ಅಕ್ರಮ, ಬೇನಾಮಿ ಎಂದು ಪರಿಗಣಿಸಿರುವ ಇಡಿ ಅಧಿಕಾರಿಗಳು ಈ ಸಂಬಂಧ ಐಶ್ವರ್ಯ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.

ಮೂರನೇ ದಿನ ಇಡಿಯಿಂದ ಡಿ.ಕೆ.ಶಿವಕುಮಾರ್ ವಿಚಾರಣೆಮೂರನೇ ದಿನ ಇಡಿಯಿಂದ ಡಿ.ಕೆ.ಶಿವಕುಮಾರ್ ವಿಚಾರಣೆ

ಐಶ್ವರ್ಯ ಅಕೌಂಟಿಗೆ ಸಿಂಗಲ್ ಟ್ರಾಂನ್ಸಾಕ್ಷನ್ ಮೂಲಕ 193 ಕೋಟಿ ಕ್ರೆಡಿಟ್ ಆಗಿದೆ. ಇದಲ್ಲದೆ ಐಶ್ವರ್ಯ ಅಕೌಂಟಿನಿಂದ ಕೆಫೆ ಕಾಫಿ ಡೇಗೆ ಮತ್ತು ಕೆಫೆ ಕಾಫಿ ಡೇಯಿಂದ ಐಶ್ವರ್ಯ ಅಕೌಂಟಿಗೆ 20 ಕೋಟಿ ರೂಪಾಯಿ ವರ್ಗಾವಣೆಯಾಗಿದೆ ಎನ್ನುವ ಮಾಹಿತಿ ಇದೆ. ಇನ್ನು ಐಶ್ವರ್ಯ ವಿಚಾರಣೆಯಲ್ಲಿ ಏನ ಮಾಹಿತಿ ನೀಡುತ್ತಾರೆ ಎನ್ನುವುದೇ ಕುತೂಹಲಕರ ಸಂಗತಿಯಾಗಿದೆ.

English summary
22-year-old Aishwarya has come under the scanner after several questionable transactions were found in her name , So She appered infront Of ED officers Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X