ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ-ಲುಧಿಯಾನ ವಿಮಾನದಲ್ಲಿ ಪ್ರಯಾಣಿಸಿದ್ದ ಏರ್ ಇಂಡಿಯಾ ಸಿಬ್ಬಂದಿಗೆ ಕೊರೊನಾ ಸೋಂಕು

|
Google Oneindia Kannada News

ನವದೆಹಲಿ, ಮೇ 27: ದೆಹಲಿ-ಲುಧಿಯಾನ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಸಿಬ್ಬಂದಿಗೆ ಕೊರೊನಾ ಸೋಂಕಿ ಇರುವುದು ಪತ್ತೆಯಾಗಿದೆ.

ವಿಮಾನದಲ್ಲಿದ್ದ 40 ಮಂದಿ ಸಹ ಪ್ರಯಾಣಿಕರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಅದರಲ್ಲಿ 4 ಮಂದಿ ಕ್ರ್ಯೂ ಕೂಡ ಸೇರಿದ್ದಾರೆ.

ಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕು ಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕು

ಪಂಜಾಬ್ ಸರ್ಕಾರದ ಮಾರ್ಗಸೂಚಿ ಪ್ರಕಾರ ಅವರನ್ನು ಇನ್‌ಸ್ಟಟ್ಯೂಷನಲ್ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಪ್ರಯಾಣಿಕ ಅಲಾಯನ್ಸ್ ಏರ್‌ನ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಟಿಕೆಟ್ ಪಡೆದು ಸಂಚರಿಸುತ್ತಿದ್ದರು.

Airline Employee Who Took Delhi-Ludhiana Flight Tests COVID Positive

ಕೊರೊನಾ ಲಾಕ್‌ಡೌನ್ ಬಳಿಕ ದೇಶೀಯ ವಿಮಾನಗಳ ಹಾರಾಟ ಮೇ 25 ರಿಂದ ಆರಂಭಗೊಂಡಿತ್ತು. 26 ರಂದು ಪ್ರಯಾಣಿಕರೊಬ್ಬರಿಗೆ ಕೊರೊನಾ ಸೋಂಕು ಇರುವುದು ತಿಳಿದುಬಂದಿದೆ.

ದೇಶೀಯ ವಿಮಾನ ಹಾರಾಟ ಆರಂಭವಾದ ಮೊದಲನೇ ದಿನವೇ ಕೊಯಮತ್ತೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ 23 ವರ್ಷದ ವ್ಯಕ್ತಿಗೆ ಕೊರೊನಾ ಇರುವುದು ದೃಢಪಟ್ಟಿತ್ತು.

ದೆಹಲಿಯಿಂದ ಮೊದಲ ದಿನ 39 ಸಾವಿರ ಪ್ರಯಾಣಿಕರು ಸಂಚರಿಸಿದ್ದರು, ಎರಡನೇ ದಿನ 42 ಸಾವಿರ ಪ್ರಯಾಣಿಕರು ಸಂಚರಿಸಿದ್ದರು. ಸಾಕಷ್ಟು ವಿಮಾನಗಳ ಹಾರಾಟ ರದ್ದುಗೊಂಡಿತ್ತು. ಸಾಕಷ್ಟು ವಿಮಾನಗಳು ಸೋಮವಾರದಿಂದಲೇ ಹಾರಾಟ ಆರಂಭಿಸಿದ್ದರೂ ಕೂಡ ಅರ್ಧದಷ್ಟು ಪ್ರಯಾಣಿಕರು ಮಾತ್ರ ಇದ್ದರು.

English summary
A 50-year-old Alliance Air employee, one of the 11 people on board a Delhi-Ludhiana flight on Monday, has tested positive for coronavirus. All other passengers have been quarantined.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X