• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏರ್ ಏಷ್ಯಾದ ಇಬ್ಬರು ಅಧಿಕಾರಿಗಳು ಸೇವೆಯಿಂದ ಅಮಾನತು

|

ನವದೆಹಲಿ, ಆಗಸ್ಟ್ 11: ಸುರಕ್ಷತಾ ನಿಯಮ ಉಲ್ಲಂಘಿಸಿದ ಆರೋಪದಡಿ ಏರ್ ಏಷ್ಯಾದ ಇಬ್ಬರು ಕಾರ್ಯನಿರ್ವಾಹಕ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಈ ಕುರಿತು ಭಾರತೀಯ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ಡಿಜಿಸಿಎ ಮಾಹಿತಿ ನೀಡಿದೆ.ಕಳೆದ ಜೂನ್ ತಿಂಗಳಲ್ಲಿ ಏರ್ ಏಷಿಯಾದ ಮಾಜಿ ಪೈಲಟ್ ನಡೆಸುತ್ತಿರುವ ಯೂಟ್ಯೂಬ್ ಚಾನಲ್ ಫೈಯಿಂಗ್ ಬೀಸ್ಟ್ ನಲ್ಲಿ, ಕಡಿಮೆ ವೆಚ್ಚದ ವಿಮಾನದಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

5 ನಿಮಿಷಗಳಲ್ಲೇ 150ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿದಿದ್ದು ಹೇಗೆ?

ಈ ಕುರಿತು ಇಬ್ಬರು ಕಾರ್ಯನಿರ್ವಾಹಕರಾದ ಕಾರ್ಯನಿರ್ವಹಣೆ ವಿಭಾಗದ ಮುಖ್ಯಸ್ಥ ಮನೀಶ್ ಉಪ್ಪಳ್ ಮತ್ತು ವಿಮಾನದ ಸುರಕ್ಷತೆ ವಿಭಾಗದ ಮುಖ್ಯಸ್ಥ ಮುಕೇಶ್ ನೆಮ ಅವರಿಗೆ ಕಳೆದ ಜೂನ್ ನಲ್ಲಿ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಲು ಏರ್‌ ಏಷ್ಯಾ ನಿರಾಕರಿಸಿದೆ. ಇದೀಗ ಅವರನ್ನು ಮೂರು ತಿಂಗಳ ಕಾಲ ಸೇವೆಯಿಂದ ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ ಎಂದು ನಾಗರಿಕ ವಿಮಾನಯಾನದ ಮಹಾ ನಿರ್ದೇಶನಾಲಯದ ಅಧಿಕಾರಿ ತಿಳಿಸಿದ್ದಾರೆ.

English summary
Aviation regulator DGCA has suspended two senior executives of AirAsia India for a period of three months over “safety violations”, news agency PTI quoted a senior official as saying.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X