ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ವಾಯು ಗುಣಮಟ್ಟ ಕೊಂಚ ಸುಧಾರಣೆ

|
Google Oneindia Kannada News

ನವದೆಹಲಿ, ನವೆಂಬರ್ 02: ದೆಹಲಿಯಲ್ಲಿ ವಾಯು ಗುಣಮಟ್ಟ ಕೊಂಚ ಸುಧಾರಣೆ ಕಂಡಿದೆ. ಗಾಳಿಯ ವೇಗ ಹೆಚ್ಚಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುವುದು ಹೆಚ್ಚಾಗಿದೆ. ಇದು ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಾಯುಗುಣಮಟ್ಟ ಮಾಪನ ಮಾಡುವ ದೆಹಲಿಯ ವಾಯು ಗುಣಮಟ್ಟ ಆರಂಭಿಕ ಎಚ್ಚರಿಕಾ ವ್ಯವಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ ವಾಯುಮಾಲಿನ್ಯ ದೆಹಲಿಯಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ ವಾಯುಮಾಲಿನ್ಯ

ಮಾಲಿನ್ಯ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ. ಸೋಮವಾರ ಗಾಳಿ ಗುಣಮಟ್ಟದ ಸೂಚ್ಯಂಕ 286(ಎಕ್ಯೂಐ) ದಾಖಲಾಗಿದೆ. ಇದನ್ನು ಕಳಪೆ ಗುಣಮಟ್ಟ ಎಂದೂ ಕರೆಯಲಾಗುತ್ತದೆ.

Delhis Air Quality Improves Due To High Wind Speed

ಮಧ್ಯ ವಯಸ್ಸಿನವರು ಮತ್ತು ಇಳಿ ವಯಸ್ಸಿನವರು ಉಸಿರಾಟ, ಸುಸ್ತು, ತುರಿಕೆ, ತಲೆನೋವಿನ ಸಮಸ್ಯೆ ಎಂದು ಹೇಳುತ್ತಿದ್ದು ದೆಹಲಿ ಸರ್ಕಾರ ಈ ಸಮಸ್ಯೆ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿ ಜನತೆ ಕೊಂಚ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಾದ ಗುರುಗ್ರಾಮ್, ನೊಯ್ಡಾ, ಫರೀದಾಬಾದ್ ಮತ್ತು ಗಜಿಯಾಬಾದ್ ಗಳಲ್ಲಿ ವಾಯುಮಾಲಿನ್ಯ ಗುಣಮಟ್ಟದ ಸೂಚ್ಯಂಕ(ಎಕ್ಯುಐ) ಸ್ವಲ್ಪ ಸುಧಾರಿಸಿದೆ ಎಂದು ಕೇಂದ್ರ ವಾಯುಗುಣಮಟ್ಟ, ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ((SAFAR) ಕೇಂದ್ರ ತಿಳಿಸಿದೆ.

ದೆಹಲಿಯಲ್ಲಿ ಶನಿವಾರ 367,ಶುಕ್ರವಾರ 374, ಗುರುವಾರ 395, ಬುಧವಾರ 297, ಮಂಗಳವಾರ 312, ಸೋಮವಾರ 353 ಎಐಕ್ಯೂ ವರದಿಯಾಗಿತ್ತು. ದೆಹಲಿಯಲ್ಲಿ ಭಾನುವಾರ ಗಾಳಿಯ ಗುಣಮಟ್ಟ ಸೂಚ್ಯಂಕವು 364 ಇತ್ತು. ದೆಹಲಿಯ ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡುವುದು ಶೇ.40ರಷ್ಟು ಮಾಲಿನ್ಯಕ್ಕೆ ಕಾರಣವಾಗಿದೆ.

English summary
Pollution levels in the national capital dipped on Monday with high wind speed aiding dispersion of pollutants, even as farm fires continued to rage in neighbouring states
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X