ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚುತ್ತಿದೆ ದೆಹಲಿಯ ಮನೆಗಳಲ್ಲಿನ ವಾಯುಮಾಲಿನ್ಯದ ಮಟ್ಟ

|
Google Oneindia Kannada News

ನವದೆಹಲಿ ಡಿಸೆಂಬರ್ 9: ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಬರುವಂತೆ ಕಾಣಿಸುತ್ತಿಲ್ಲ. ಬದಲಿಗೆ ದೆಹಲಿಯಲ್ಲಿ ಮನೆಗಳಲ್ಲೂ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ವರದಿ ಬಂದಿದೆ. ಇದರಿಂದಾಗಿ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಹೊಸ ಅಧ್ಯಯನ ಜನರನ್ನು ಮತ್ತಷ್ಟು ಭೀತಿ ಹುಟ್ಟಿಸಿದೆ. ಈ ಹೊಸ ಅಧ್ಯಯನದ ಪ್ರಕಾರ 'ದೆಹಲಿಯಲ್ಲಿ ಹೊರಾಂಗಣ ಮಾಲಿನ್ಯ ಜನರನ್ನು ತೊಂದರೆಗೊಳಿಸುತ್ತಿದೆ. ಮಾತ್ರವಲ್ಲದೆ ದೆಹಲಿಯ ಮನೆಗಳಲ್ಲಿನ ವಾಯು ಮಾಲಿನ್ಯದ ಮಟ್ಟವು WHO ಮಾನದಂಡಗಳಿಗಿಂತ 20 ಪಟ್ಟು ಹೆಚ್ಚಾಗಿದೆ ಎಂದು ಹೇಳುತ್ತದೆ. ಮನೆಯಲ್ಲಿ ಏರ್ ಪ್ಯೂರಿಫೈಯರ್ ಇರುವವರ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ, ಆದರೆ ಅಲ್ಲಿಯೂ ಮಾಲಿನ್ಯ ಇದೆ' ಎಂದಿದೆ.

ಗುರುವಾರವೂ ದೆಹಲಿ-ಎನ್‌ಸಿಆರ್‌ನ ವಾತಾವರಣದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಇಂದಿಗೂ ಇಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 208 ಆಗಿದೆ. ಇದು ಕಳಪೆ ವಿಭಾಗದಲ್ಲಿ ಬರುತ್ತದೆ. ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆಯು (SAFAR) ಗಾಳಿಯ ಗುಣಮಟ್ಟವು ಈಗಾಗಲೇ ಸುಧಾರಿಸಿದೆ ಆದರೆ ಇನ್ನೂ ಊಹಿಸಬಹುದಾದ ಸ್ಥಿತಿಯಲ್ಲಿದೆ ಎಂದು ಹೇಳಿದೆ. ನವೆಂಬರ್‌ನಿಂದ ದೆಹಲಿಯು ಮಾಲಿನ್ಯದ ತೀವ್ರತೆಯನ್ನು ಎದುರಿಸುತ್ತಿದೆ. ಸತತ ಪ್ರಯತ್ನ ಮಾಡಿದರೂ ದೆಹಲಿಯ ವಾತಾವರಣ ಸುಧಾರಿಸುತ್ತಿಲ್ಲ.

ಇದು ಇಂದು ಬೆಳಗ್ಗೆ ದೆಹಲಿಯಲ್ಲಿ ಎಕ್ಯೂಐ ಪರಿಸ್ಥಿತಿ

ಪುಸಾ, ದೆಹಲಿ IMD - ಪಶ್ಚಿಮ ದೆಹಲಿ 214 AQI ಕೆಟ್ಟದ್ದಾಗಿದೆ

ಪುಸಾ, ದೆಹಲಿ DPCC - ಪಶ್ಚಿಮ ದೆಹಲಿ 271 AQI ಅತ್ಯಂತ ಕಳಪೆಯಾಗಿದೆ

ಶಾದಿಪುರ, ದೆಹಲಿ - ಪಶ್ಚಿಮ ದೆಹಲಿ 252AQI⁠ ಅತ್ಯಂತ ಕಳಪೆಯಾಗಿದೆ

ದೆಹಲಿ ಮಿಲ್ಕ್ ಸ್ಕೀಮ್ ಕಾಲೋನಿ 282 AQI ಅತ್ಯಂತ ಕಳಪೆಯಾಗಿದೆ

ದೆಹಲಿ ಅಶೋಕ್ ವಿಹಾರ್ 284 AQI ಅತ್ಯಂತ ಕಳಪೆಯಾಗಿದೆ

ದೆಹಲಿ NSIT ದ್ವಾರಕಾ - 281 AQI⁠, ಅತ್ಯಂತ ಕಳಪೆಯಾಗಿದೆ

ದೆಹಲಿ - ಲೋಧಿ ರಸ್ತೆ 281 AQI⁠, ಅತ್ಯಂತ ಕಳಪೆಯಾಗಿದೆ.

Air pollution spread to homes in Delhi

ಬುಧವಾರದಂದು ಪ್ರಮುಖ ನಗರಗಳ AQI ಹೀಗಿದೆ

ಗುರುಗ್ರಾಮ್‌ನಲ್ಲಿ AQI 317

ಫರಿದಾಬಾದ್‌ನಲ್ಲಿ AQI 311

ಗಾಜಿಯಾಬಾದ್‌ನಲ್ಲಿ AQI 341

ಗ್ರೇಟರ್ ನೋಯ್ಡಾದಲ್ಲಿ AQI 312

ಮೊರಾದಾಬಾದ್‌ನಲ್ಲಿ AQI 322

ಆಗ್ರಾದಲ್ಲಿ AQI 326

ಜೈಪುರದಲ್ಲಿ AQI 221

ಲಕ್ನೋದಲ್ಲಿ AQI 211

ಅಂಬಾಲಾದಲ್ಲಿ AQI 248

Air pollution spread to homes in Delhi

ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

ಪ್ರಪಂಚದ ಅತ್ಯಂತ ಕಲುಷಿತ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಕೊಳೆತ ಬೆಳೆಗಳು ಹಾಗೂ ಬೆಳೆಯ ನಂತರದ ಹುಲ್ಲು ಸುಡುವಿಕೆ, ಸಾರಿಗೆಯಿಂದ ಹೊರಸೂಸುವಿಕೆ, ನಗರ ಮತ್ತು ಇತರ ಕೈಗಾರಿಕೆಗಳ ಹೊರಗಿನ ಕಲ್ಲಿದ್ದಲು ಸ್ಥಾವರಗಳು, ಹಾಗೆಯೇ ತೆರೆದ ಕಸವನ್ನು ಸುಡುವುದು ಮತ್ತು ಧೂಳಿನ ಕಾರಣದಿಂದ ಕುಸಿದಿದೆ. ದೆಹಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ.

English summary
There has been no improvement in the air of Delhi-NCR on Thursday as well. a new study by the Energy Policy Institute at the University of Chicago has scared people further.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X