ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಮಾಲಿನ್ಯ: ದೆಹಲಿಯಲ್ಲಿ ಶಾಲೆಗಳ ಪುನಾರಂಭ ಯಾವಾಗ?

|
Google Oneindia Kannada News

ನವದೆಹಲಿ, ಡಿಸೆಂಬರ್ 16: ನವದೆಹಲಿಯಲ್ಲಿ ಶಾಲಾ-ಕಾಲೇಜುಗಳ ಪುನಾರಂಭ, ನಿರ್ಮಾಣ ಕಾಮಗಾರಿಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸುವ ಬಗ್ಗೆ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯು ಗುರುವಾರ ಅಥವಾ ಶುಕ್ರವಾರ ನಿರ್ಧರಿಸಲಿದೆ.

ಸುಪ್ರೀಂಕೋರ್ಟ್ ನಲ್ಲಿ ಗುರುವಾರ ಇದೇ ವಿಷಯ ವಿಚಾರಣೆಗೆ ಬರಲಿದ್ದು, ಕೈಗಾರಿಕಾ ಘಟಕಗಳ ಪುನಾರಂಭಿಸಿರುವ ಬಗ್ಗೆ ಬುಧವಾರ ಕೇಂದ್ರೀಯ ವಾಯು ಗುಣಮಟ್ಟ ಆಯೋಗವು ನ್ಯಾಯಾಲಯಕ್ಕೆ ತಿಳಿಸಿದೆ. ಕಳೆದ ವಾರ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ನಿಯಂತ್ರಣಕ್ಕೆ ಬಂದಿರುವುದನ್ನು ಗಮನಿಸಿತ್ತು.

ದೆಹಲಿ ವಾಯುಮಾಲಿನ್ಯ: ಕೇಂದ್ರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲೇನಿದೆ?ದೆಹಲಿ ವಾಯುಮಾಲಿನ್ಯ: ಕೇಂದ್ರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲೇನಿದೆ?

ನವದೆಹಲಿಯಲ್ಲಿ ವಾಯು ಗುಣಮಟ್ಟವನ್ನು ನೋಡಿಕೊಂಡು ಶಾಲೆಗಳು, ಕೈಗಾರಿಕೆಗಳ ಪುನಾರಂಭ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಯಾವಾಗ ಆರಂಭಿಸಬೇಕು ಎಂದು ತೀರ್ಮಾನಿಸುವುದಕ್ಕೆ ಮಾಲಿನ್ಯ ಮಂಡಳಿಗೆ ಸೂಚನೆ ನೀಡಿತ್ತು.

Air Pollution: Delhi Schools Re-opening Decision On Friday, Says Pollution Panel

ಕೈಗಾರಿಕೆಗಳ ಪುನಾರಂಭದ ಪರಿಶೀಲನೆ:

ವಾಣಿಜ್ಯ ಉದ್ಯಮಿಗಳು ಮತ್ತು ಕೈಗಾರಿಕೆ ಮಾಲೀಕರು ಸಲ್ಲಿಸಿದ ವೈಯಕ್ತಿಕ ಮನವಿಗಳನ್ನು ಕೇಂದ್ರೀಯ ವಾಯು ಗುಣಮಟ್ಟ ನಿರ್ವಹಣೆ ಆಯೋಗ(CAQM)ಕ್ಕೆ ಕೋರ್ಟ್ ಬಿಟ್ಟಿತ್ತು. ಮಾಲಿನ್ಯ ಮಂಡಳಿ ಈ ಸಂಬಂಧ ಬುಧವಾರ ಕೋರ್ಟಿಗೆ ಮಾಹಿತಿ ನೀಡಿದ್ದು, ಈಗಾಗಲೇ ಕೆಲವು ಕೈಗಾರಿಕೆಗಳ ಮೇಲಿನ ಬಿಗಿ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಅದರ ಪರಿಣಾಮವನ್ನು ನೋಡಿಕೊಂಡು ಶಾಲೆಗಳ ಪುನಾರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಂಡಳಿಯು ತಿಳಿಸಿದೆ.

6 ವಿದ್ಯುತ್ ಉತ್ಪಾದನಾ ಘಟಕ ಪುನಾರಂಭ:

ನವದೆಹಲಿಯಲ್ಲಿ ಚಳಿಗಾಲದ ನಡುವೆ ವಿದ್ಯುತ್ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ 6 ವಿದ್ಯುತ್ ಉತ್ಪಾದಕ ಘಟಕಗಳ ಪುನಾರಂಭಕ್ಕೆ ಅವಕಾಶ ನೀಡಲಾಗಿದೆ ಎಂದು ಮಾಲಿನ್ಯ ಮಂಡಳಿಯು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ. ಕನಿಷ್ಠ ಅವಶ್ಯಕತೆಗಳ ಆಧಾರದ ಮೇಲೆ ಈ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.

ಟ್ರಕ್ ಗಳು ದೆಹಲಿ ಪ್ರವೇಶಿಸಲು ನಿರ್ಬಂಧ:

ವಿದ್ಯುತ್ ಚಾಲಿತ ಹಾಗೂ ಅಗತ್ಯ ವಸ್ತುಗಳ ಸಾಗಾಣಿಕೆ ವಾಹನಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಟ್ರಕ್ ಗಳನ್ನು ದೆಹಲಿ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಹಾಲು ಉತ್ಪಾದನಾ ಘಟಕ, ಔಷಧಿ ಹಾಗೂ ಜೀವ ರಕ್ಷಕ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕೆಗಳು ದಿನದಲ್ಲಿ 8 ಗಂಟೆ ಮಾತ್ರ ಕಾರ್ಯ ನಿರ್ವಹಿಸುವುದಕ್ಕೆ ಆಯೋಗದಿಂದ ಅವಕಾಶ ನೀಡಲಾಗಿದೆ.

ಕಾಗದ ಮತ್ತು ಪಂಪ್ ಸಂಸ್ಕರಣೆ, ಡಿಸ್ಟಿಲರಿಗಳು ಮತ್ತು ಕ್ಯಾಪ್ಟಿವ್ ಥರ್ಮಲ್ ಪವರ್ ಪ್ಲಾಂಟ್‌ಗಳು ಮತ್ತು ಭತ್ತ/ಅಕ್ಕಿ ಸಂಸ್ಕರಣೆಗೆ ಸಂಬಂಧಿಸಿದ ಕೈಗಾರಿಕೆಗಳಿಗೆ ಸಮಯದ ನಿರ್ಬಂಧಗಳನ್ನು ತೆಗೆದು ಹಾಕಲಾಗುತ್ತದೆ. ಆದರೆ, ಈ ಕೈಗಾರಿಕೆಗಳಿಗೆ ವಾರದಲ್ಲಿ ಐದು ದಿನ ಮಾತ್ರ ತೆರೆದಿರುತ್ತವೆ, ಶನಿವಾರ ಮತ್ತು ಭಾನುವಾರದಂದು ಬಂದ್ ಆಗಿರುತ್ತವೆ.

ದೆಹಲಿಯಲ್ಲಿ ಗಾಳಿ ಗುಣಮಟ್ಟದಲ್ಲಿ ಎಷ್ಟಿದೆ?:

ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ(ಎಐಕ್ಯೂ) 335ಕ್ಕೆ ಇಳಿದಿದೆ. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇದೀಗ ತೀರಾ ಕಳಪೆ ಹಂತಕ್ಕೆ ತಲುಪಿದ್ದರೆ, ಕೆಲವು ಪ್ರದೇಶದಲ್ಲಿ ಅದು ಕಳಪೆ ಮಟ್ಟದಲ್ಲಿದೆ. ವಾಯು ಮಾಲಿನ್ಯ ಪ್ರಮಾಣ ಎಷ್ಟಿರಬೇಕು ಎಂಬುದಕ್ಕೆ ಒಂದು ಮಾನದಂಡವಿದೆ. ಅದರ ಪ್ರಕಾರ, 00-50 ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತಿಕಳಪೆ, 401-500 ಅಪಾಯಕಾರಿ, ಹಾಗೂ 500 ನಂತರ ಅತಿ ಅಪಾಯಕಾರಿ ಎಂದು ಹೇಳಲಾಗುತ್ತದೆ.

English summary
Air Pollution: Delhi Schools Re-opening Decision On Friday, Says Pollution Panel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X