• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ ವಾಯುಮಾಲಿನ್ಯ

|

ನವದೆಹಲಿ, ಅಕ್ಟೋಬರ್ 30: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ 'ಗರಿಷ್ಠ' ಮಟ್ಟವನ್ನು ತಲುಪಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಮಾಹಿತಿ ಪ್ರಕಾರ, ಬೆಳಗ್ಗೆ 7ಗಂಟೆಗೆ ಏರ್ ಕ್ವಾಲಿಟಿ ಇಂಡೆಕ್ಸ್ 380 ತಲುಪಿದೆ. ಪಟ್ಟರ್ಗಂಜ್‌ ಪ್ರದೇಶದಲ್ಲಿ ಎಐಕ್ಯೂ ಮೌಲ್ಯವೂ 404,ಆನಂದ್ ವಿಹಾರದಲ್ಲಿ 408, ಬವಾನಾದಲ್ಲಿ 447 ಮತ್ತು ವರ್ಜೀಪುರದಲ್ಲಿ 411 ಆಗಿತ್ತು.

ನವದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ 1 ಕೋಟಿ ದಂಡ, 5 ವರ್ಷ ಜೈಲು

ಗುರುವಾರ, ಶಾದಿಪುರ (406), ಪಟ್ಪರ್ಗಂಜ್ (411), ಜಹಾಂಗೀರ್‌ಪುರಿ (429) ಮತ್ತು ವಿವೇಕ್ ವಿಹಾರ್ (432) ಸೇರಿದಂತೆ ಹದಿನಾರು ಮಾನಿಟರಿಂಗ್ ಕೇಂದ್ರಗಳು ಕೆಟ್ಟ ಗಾಳಿಯ ಗುಣಮಟ್ಟವನ್ನು ದಾಖಲಿಸಿದೆ.

ಗಾಳಿಯ ಗುಣಮಟ್ಟವು 301-400 ಅಂಕದ ನಡುವಿನ ಅತ್ಯಂತ ಕಳಪೆ ವಲಯವನ್ನು ಪ್ರವೇಶಿಸುತ್ತದೆ ಮತ್ತು 400 ಅನ್ನು ಮೀರಿದ ನಂತರ ತೀವ್ರ ವಲಯಕ್ಕೆ ದಾಟುತ್ತದೆ. ದೆಹಲಿಯ ಸರಾಸರಿ 24 ಗಂಟೆಗಳ ವಾಯು ಗುಣಮಟ್ಟದ ಸೂಚ್ಯಂಕ ಬುಧವಾರ 297 ಆಗಿದ್ದು, ಮಂಗಳವಾರದ 312 ಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ.

ಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಈ ಕಾನೂನು ತಕ್ಷಣದಿಂದಲೇ ಅನ್ವಯವಾಗುತ್ತದೆ ಎಂದು ಆದೇಶಿಸಿದೆ.

ಕೇಂದ್ರದ ಹೊಸ ಕಾನೂನಿನಡಿ ಗಾಳಿಯನ್ನು ಮಲಿನಗೊಳಿಸುವು ಚಟುವಟಿಕೆಗಳನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ನಿಯಮಗಳನ್ನು ಉಲ್ಲಂಘಿಸಿದವರಿಗೆ ಭಾರೀ ಮೊತ್ತದ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಬೆಳೆ ತ್ಯಾಜ್ಯ ಸುಡುವುದರ ವಿರುದ್ಧ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ "ಕೇಂದ್ರ ಸರ್ಕಾರ ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯ ತಡೆಗೆ ಕಠಿಣ ಕಾನೂನು ರೂಪಿಸಲಿದೆ ಎಂದು ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದ್ದರು.

ಎನ್‌ಸಿಆರ್‌ನಲ್ಲಿ ವಾಯುಗುಣಮಟ್ಟ ನಿರ್ವಹಣೆಗಾಗಿ 20 ಸದಸ್ಯರನ್ನು ಒಳಗೊಂಡ ಆಯೋಗ ಸ್ಥಾಪನೆಯಾಗಲಿದೆ. ಇದು ದೆಹಲಿ, ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ ಭಾಗಗಳಲ್ಲಿ ಕಾರ್ಯನಿರ್ವಹಿಸಲಿದೆ. ಸುಗ್ರೀವಾಜ್ಞೆಯ ಕಾನೂನು ಪಾಲನೆ ಮಾಡದೇ ಇದ್ದಲ್ಲಿ ಆಯೋಗ ದೂರು ದಾಖಲಿಸಿಕೊಂಡು ದಂಡ ಹಾಗೂ ಶಿಕ್ಷೆ ವಿಧಿಸುವ ಅಧಿಕಾರ ಹೊಂದಿರಲಿದೆ.

English summary
The air quality in the national capital on Friday entered the 'severer' category in Delhi-NCR Friday Morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X