ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಏರ್ ಇಟಲಿ ಪ್ರವೇಶ, ಮಿಲನ್ ಗೆ ನೇರ ವಿಮಾನ ಸೇವೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ವೈಮಾನಿಕ ಸಂಸ್ಥೆ ಏರ್ ಇಟಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದು, ಕ್ರಮವಾಗಿ ಡಿಸೆಂಬರ್ 7 ಮತ್ತು ಡಿಸೆಂಬರ್ 14, 2018ರಂದು ನವದೆಹಲಿ ಮತ್ತು ಮುಂಬೈನಿಂದ ಮಿಲನ್‍ಗೆ ನೇರ ವಿಮಾನಯಾನ ಸೇವೆಯನ್ನು ಒದಗಿಸುವುದಾಗಿ ಘೋಷಿಸಿದೆ.

ಏಷ್ಯಾದ ಎರಡು ಪ್ರಮುಖ ಉದ್ದಿಮೆ ನಗರಿಗಳೊಂದಿಗೆ ಇಟಲಿಯನ್ನು ಸಂಪರ್ಕಿಸುವ ಮೂಲಕ, ಏರ್‍ಇಟಲಿಯ ನೆಟ್‍ವರ್ಕ್‍ಗೆ ಭಾರತವು 4ನೇ ಅಂತಾರಾಷ್ಟ್ರೀಯ ಸೇರ್ಪಡೆಯಾಗಲಿದೆ.

ಈಗಾಗಲೇ ಏರ್ ಇಟಲಿಯ ಮಿಲನ್-ಮಲ್ಪೆನ್ಸಾ(ಎಂಎಕ್ಸ್‍ಪಿ)ದಲ್ಲಿರುವ ಹೊಸ ಹಬ್‍ನಿಂದ ನ್ಯೂಯಾರ್ಕ್(ಜೆಎಫ್‍ಕೆ), ಮಿಯಾಮಿ(ಎಂಐಎ) ಮತ್ತು ಬ್ಯಾಂಕಾಕ್(ಬಿಕೆಕೆ)ಗೆ ನೇರ ವಿಮಾನಯಾನ ಸೌಲಭ್ಯವನ್ನು ಕಲ್ಪಿಸಿದೆ.

ಈ ಕುರಿತು ಮಾತನಾಡಿದ ಏರ್ ಇಟಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರೋಸೆನ್ ಡಿಮಿಟ್ರೆವ್, "ಏಷ್ಯಾದ ಎರಡು ಪ್ರಮುಖ ಉದ್ದಿಮೆ ಮತ್ತು ಪ್ರವಾಸಿ ಸ್ಥಳಗಳಾದ ಮುಂಬೈ ಮತ್ತು ನವದೆಹಲಿಯೊಂದಿಗೆ ಇಟಲಿಯನ್ನು ಸಂಪರ್ಕಿಸಲು ನಾವು ಎದುರುನೋಡುತ್ತಿದ್ದೇವೆ.

ಪ್ರಾಕೃತಿಕ ಸೌಂದರ್ಯದ ತಾಣವಾದ, ಅತ್ಯುತ್ತಮ ಅಭಿರುಚಿಯ ಜನರನ್ನೊಳಗೊಂಡ, ಹೃದಯಕ್ಕೆ ಹತ್ತಿರವಾದ ಆಹಾರ ಪದ್ಧತಿಯಿರುವ ಮತ್ತು ಅಗಾಧ ಸಂಪ್ರದಾಯಗಳ ನೆಲೆಯಾದ ಇಟಲಿಯು ಖಂಡಿತಾ ಭಾರತೀಯರು ಅಪ್ಯಾಯಮಾನವಾಗುತ್ತದೆ.

ವಿವರಗಳು ಹಾಗೂ ಆಫರ್ ಗಳ ಬಗ್ಗೆ ತಿಳಿಯಬೇಕೆಂದರೆ, ಕಂಪನಿಯ ವೆಬ್‍ಸೈಟ್ ಭೇಟಿ ನೀಡಿ ಅಥವಾ ಏರ್‍ಇಟಲಿ ಆಪ್ ಅಥವಾ ಕಾಲ್ ಸೆಂಟರ್ ಅಥವಾ ನಿಮ್ಮ ಟ್ರಾವೆಲ್ ಏಜೆಂಟ್ ಅನ್ನು ಸಂಪರ್ಕಿಸಿ.

ಎರಡು ಹೊಸ ರೂಟ್‍ಗಳ ಸೇರ್ಪಡೆ

ಎರಡು ಹೊಸ ರೂಟ್‍ಗಳ ಸೇರ್ಪಡೆ

ನಮ್ಮ ಈ ಹೊಸ ಸೇವೆಯು ಭಾರತ ಮತ್ತು ಇಟಲಿಯ ನಡುವೆ ಸಂಚರಿಸುವಂಥ ಉದ್ದಿಮೆ ಅತಿಥಿಗಳು, ವಿಶ್ರಾಂತಿಗಾಗಿ ಬರುವ ಪ್ರವಾಸಿಗರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ, ಎರಡೂ ದೇಶಗಳ ನಡುವಿನ ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದೆ'' ಎಂದು ಏರ್ ಇಟಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರೋಸೆನ್ ಡಿಮಿಟ್ರೆವ್ ಹೇಳಿದರು.

ಎರಡು ಹೊಸ ರೂಟ್‍ಗಳನ್ನು ಸೇರ್ಪಡೆಗೊಳಿಸುವುದರ ಮೂಲಕ, ಏರ್ ಇಟಲಿಯು ಏರ್ ಲೈನ್ಸ್ ಹಬ್‍ನಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕದ ಆಯ್ಕೆಯನ್ನು ನೀಡಲಿದೆ ಮತ್ತು ವಿಶೇಷ ಡೆಸ್ಟಿನೇಷನ್‍ಗಳೂ ಲಭ್ಯವಾಗುವಂತೆ ಮಾಡಲಿದೆ.

ನ್ಯೂಯಾರ್ಕ್ ಮತ್ತು ಮಿಯಾಮಿಗೆ ಕೂಡ ತಲುಪಬಹುದಾಗಿದೆ

ನ್ಯೂಯಾರ್ಕ್ ಮತ್ತು ಮಿಯಾಮಿಗೆ ಕೂಡ ತಲುಪಬಹುದಾಗಿದೆ

ಮಲ್ಪೆನ್ಸಾ ಮೂಲಕ ಇಟಲಿಯ ಪ್ರಮುಖ ನಗರಗಳು ಹಾಗೂ ಡೆಸ್ಟಿನೇಷನ್‍ಗಳಾದ ರೋಮ್, ಕೆಟಾನಿಯಾ ಮತ್ತು ಪಲೆರ್ಮೋ(ಸಿಸಿಲಿ), ನೇಪಲ್ಸ್ (ಕ್ಯಾಪೇನಿಯಾ), ಲಮೇಝಿಯಾ ಟರ್ಮೆ(ಕೆಲ್ಯಾಬ್ರಿಯಾ) ಮತ್ತು ಒಲ್ಬಿಯಾ ಕೋಸ್ಟಾ ಸ್ಮೆರಾಲ್ಡಾ (ಸರ್ಡೀನಿಯಾ)ಗಳಿಗೆ ಸಂಚರಿಸಲು ಭಾರತದಿಂದ ಮಿಲನ್‍ಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅದಕ್ಕಿಂತಲೂ ಹೆಚ್ಚಾಗಿ, ದೆಹಲಿ ಮತ್ತು ಮುಂಬೈನ ಏರ್ ಇಟಲಿ ಪ್ರಯಾಣಿಕರು ಮಿಲನ್ ಮಲ್ಪೆನ್ಸಾ ಮೂಲಕವಾಗಿ ಅಗ್ಗದ ದರದಲ್ಲಿ ಸುಲಭವಾಗಿ ನ್ಯೂಯಾರ್ಕ್ ಮತ್ತು ಮಿಯಾಮಿಗೆ ಕೂಡ ತಲುಪಬಹುದಾಗಿದೆ.

ಆನ್‍ಬೋರ್ಡ್ ಮನರಂಜನೆ

ಆನ್‍ಬೋರ್ಡ್ ಮನರಂಜನೆ

ಭಾರತದಿಂದ ಮಿಲನ್‍ಗೆ ಸಂಪರ್ಕ ಕಲ್ಪಿಸುವ ಎರಡು ಹೊಸ ರೂಟ್‍ಗಳಿಗೆಂದು ಏರ್‍ಬಸ್ ಎ330-200 ಅನ್ನು ನಿಯೋಜಿಸಲಾಗಿದೆ. ಇದು ಎರಡೂ ನಗರಗಳ ನಡುವೆ ವಾರಕ್ಕೆ ಮೂರು ಬಾರಿ ಸಂಚರಿಸಲಿದೆ.

ಎಕ್ಸ್‍ಕ್ಲೂಸಿವ್ ಬ್ಯುಸಿನೆಸ್ ಕ್ಲಾಸ್ ಕ್ಯಾಬಿನ್‍ನಲ್ಲಿ 24 ಆಸನಗಳಿವೆ. ಅಲ್ಲದೆ, ಸಂಪೂರ್ಣ ರಿಕ್ಲೈನಿಂಗ್ ಸೀಟ್‍ಗಳು, ಇಟಾಲಿಯನ್ ವೈನ್ ಹಾಗೂ ಶಾಂಪೈನ್ ಅನ್ನು ಒಳಗೊಂಡ ಇಟಲಿಯ ಮೆನು, ವೈ-ಫೈ ಸೇವೆ, ವ್ಯಾಪಕ ಇನ್‍ಫ್ಲೈಟ್ ಮನರಂಜನೆ ವ್ಯವಸ್ಥೆ ಮತ್ತು ವಿಮಾನದಲ್ಲಿನ ಸಿಬ್ಬಂದಿಯಿಂದ ವಿಶೇಷ ಆತಿಥ್ಯಗಳನ್ನು ನೀಡುವ ಮೂಲಕ ಏರ್‍ಇಟಲಿಯು ಪ್ರಯಾಣಿಕರಿಗೆ ಗರಿಷ್ಠ ಆರಾಮದಾಯಕತೆಯನ್ನು ಒದಗಿಸಿದೆ. ಎಕಾನಮಿ ಕ್ಲಾಸ್ ಕ್ಯಾಬಿನ್‍ನಲ್ಲಿ 228 ಆಸನಗಳಿದ್ದು, ಅತಿಥಿಗಳಿಗೆ ಆರಾಮದಾಯಕ ಪ್ರಯಾಣ ಸೌಲಭ್ಯ, ವಿಶೇಷ ಆತಿಥ್ಯ, ವೈಫೈ ಮತ್ತು ವ್ಯಾಪಕ ಆನ್‍ಬೋರ್ಡ್ ಮನರಂಜನೆಯನ್ನು ಒದಗಿಸಲಿದೆ.

2018ರ ಡಿಸೆಂಬರ್ ನಿಂದ ಆರಂಭ

2018ರ ಡಿಸೆಂಬರ್ ನಿಂದ ಆರಂಭ

ಹೊಸ ರೂಟ್‍ಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ, ಉತ್ತೇಜನಾ ಕೊಡುಗೆಯಾಗಿ ಕಡಿಮೆ ದರದ ಟಿಕೆಟ್ ಮಾರಾಟ ನಡೆಯುತ್ತಿದ್ದು, ದೆಹಲಿಯಿಂದ ಒಬ್ಬ ವ್ಯಕ್ತಿಗೆ ರಿಟರ್ನ್ ಟಿಕೆಟ್‍ಗೆ 29,472 ರೂಪಾಯಿ (ಎಲ್ಲವನ್ನೊಳಗೊಂಡ) ಮತ್ತು ಮುಂಬೈನಿಂದ ತಲಾ 30,597 ರೂಪಾಯಿ ಇರಲಿದೆ.

ಸಮಯ- 2018ರ ಡಿಸೆಂಬರ್ ನಿಂದ ಆರಂಭ
ದೆಹಲಿ-ಮಿಲನ್ ವಾರಕ್ಕೆ 3 ವಿಮಾನ- ಮಂಗಳವಾರ, ಶುಕ್ರವಾರ ಮತ್ತು ಭಾನುವಾರ. ಡಿಸೆಂಬರ್ 7ರಿಂದ ಆರಂಭ.
ಮುಂಬೈ- ಮಿಲನ್ ವಾರಕ್ಕೆ 3 ವಿಮಾನ- ಶುಕ್ರವಾರ, ಶನಿವಾರ ಮತ್ತು ಭಾನುವಾರ, ಡಿಸೆಂಬರ್ 14ರಿಂದ ಆರಂಭ.

English summary
Air Italy announced its entry into the Indian market, offering services from New Delhi and Mumbai to Milan, effective from December 7 and December 14 respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X