• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಗನಸಖಿಯರಿಗೆ ನೆಲ ತೋರಿಸಿದ ಏರ್ ಇಂಡಿಯಾ

By Mahesh
|

ನವದೆಹಲಿ, ಮಾ.4: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆ ಮತ್ತೊಮ್ಮೆ ತನ್ನ ಕಠಿಣ ನಿಯಮಗಳ ಮೂಲಕ ಸುದ್ದಿಯಾಗಿದೆ. ಇತ್ತೀಚೆಗೆ ಕೆಲಸಕ್ಕೆ ತಡವಾಗಿ ಹಾಜರಾದ ಕಾರಣಕ್ಕೆ 10 ಮಂದಿ ಗಗನಸಖಿಯರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ವಿಮಾನ ವಿಳಂಬವಾದ ಕಾರಣ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಗಗನಸಖಿಯರು ಪರಿಪರಿಯಾಗಿ ವಿವರಿಸಿದರೂ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಹಿರಿಯ ಅಧಿಕಾರಿಗಳ ಮನ ಕರಗಲಿಲ್ಲ ಎಂದು ತಿಳಿದು ಬಂದಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯಂತೆ ಗಗನಸಖಿಯರು ಕೆಲಸಕ್ಕೆ ವಿಳಂಬವಾಗಿ ಬರುವುದರಿಂದ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ. ವಿಮಾನಯಾನ ಸಿಬ್ಬಂದಿಗಳಿಗೂ ಕಷ್ಟವಾಗುತ್ತಿದೆ. ಅಲ್ಲದೆ ವಿಮಾನ ವಿಳಂಬದಿಂದಾಗಿ ಪ್ರಯಾಣಿಕರು ಕಷ್ಟ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

ಈ ರೀತಿ ಕೆಲಸಕ್ಕೆ ತಡವಾಗಿ ಹಾಜರಾಗುವ ಗಗನಸಖಿಯರು ಹಾಗೂ ಇನ್ನಿತರ ವಿಮಾನ ಸಿಬ್ಬಂದಿಗಳ ಮೇಲೆ ಏರ್ ಇಂಡಿಯಾ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಮುಂತಾಗಿದ್ದು, ಇನ್ನಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಸದ್ಯಕ್ಕೆ ಏರ್ ಇಂಡಿಯಾದ ಕ್ಯಾಬಿನ್ ಸಿಬ್ಬಂದಿ ಸಂಖ್ಯೆ 3,600ರಷ್ಟಿದೆ. ಮೊದಲ ಹಂತದಲ್ಲಿ ದೆಹಲಿ-ಶಿಕಾಗೋ ನಾನ್ ಸ್ಟಾಪ್ ವಿಮಾನ ವಿಳಂಬವಾದ ಹಿನ್ನೆಲೆಯಲ್ಲಿ ನಾಲ್ಕು ಮಂದಿ ಗಗನಸಖಿಯರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಭಾನುವಾರ ಸಂಖೆ ಹೊತ್ತಿಗೆ ಇನ್ನೂ ಐದಾರು ಗಗನಸಖಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನಷ್ಟು ಮಂದಿಯನ್ನು ಮನೆಗೆ ಕಳಿಸಲು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ವಿಮಾನ ವಿಳಂಬ ಹೊಸ ವಿಷಯವಲ್ಲ ಅದಕ್ಕೆ ನಾನಾ ಕಾರಣಗಳಿರಬಹುದು. ಆದರೆ, ವಿಮಾನ ವಿಳಂಬಕ್ಕೆ ಗಗನಸಖಿಯರು ಕೆಲಸಕ್ಕೆ ತಡವಾಗಿ ಹಾಜರಾಗಿರುವುದೇ ನೇರ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.ಫೆ.13ರಂದು ನಾಲ್ಕು ಗಗನಸಖಿಗಳು ಅಸ್ಟ್ರೇಲಿಯಾದ ವಿಮಾನದಲ್ಲಿ ಕರ್ತವ್ಯ ನಿರ್ವಹಿಸಲು ದೆಹಲಿಯ 3ನೇ ಟರ್ಮಿನಲ್ ಗೆ ತೆರಳಲು ವಿಳಂಬವಾಗಿದೆ.

ಒಬ್ಬ ಗಗನಸಖಿಯಂತೂ ಎರಡು ಗಂಟೆ ತಡವಾಗಿ ಕೆಲಸಕ್ಕೆ ಹಾಜರಾಗಿದ್ದು ಅಧಿಕಾರಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಅಲ್ಲದೆ, ನಾನು ಈಗ ಆಸ್ಟ್ರೇಲಿಯಾಕ್ಕೆ ತೆರಳಲು ಸಾಧ್ಯವಿಲ್ಲ ದುಬೈ ಅಥವಾ ಹತ್ತಿರದ ನಗರಗಳಿಗೆ ತೆರಳುವ ವಿಮಾನ ಇದ್ದರೆ ಹೇಳಿ ಎಂದಿದ್ದಾರೆ. ಆಕೆಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸುಮಾರು ವರ್ಷಗಳ ಹಿಂದೆ ಏರ್ ಇಂಡಿಯಾ ಸಂಸ್ಥೆಗೆ ತೋರ ಮೈಯ ಗಗನಸಖಿಯರು ಭಾರವೆನಿಸಿ ಹೊರಹಾಕಿದ್ದಾರೆ. ದಪ್ಪ ಶರೀರ ಹೊತ್ತ ಗಜಗಾಮನಿ ಗಗನಸಖಿಯರಿಗೆ ಪಿಂಕ್ ಸ್ಲಿಪ್ ವಿತರಣೆ ಕಾರ್ಯ ಹಮ್ಮಿಕೊಂಡಿತ್ತು.ದೇಶಿಯ ವಿಮಾನಯಾನದಲ್ಲಿ ಸೇವೆ ಸಲ್ಲಿಸುತ್ತಿದ್ದ 10 ಗಗನಸಖಿಯರಿಗೆ ಪಿಂಕ್ ಸ್ಲಿಪ್ ನೀಡಲಾಗಿತ್ತು. ತೂಕ ಇಳಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಇದಲ್ಲದೆ ಪಿಂಕ್ ಸ್ಲಿಪ್ ಪಡೆದವರಿಗೆ ಬದಲಿ ಕೆಲಸ ನೀಡುವ ಆಹ್ವಾನವನ್ನು ಗಗನಸಖಿಯರು ತಿರಸ್ಕರಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Air India sacked about 10 air hostesses last week for reporting late for work, said a Times of India report.According to sources, more crew members could lose their jobs in the coming days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more