ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ತಾಂತ್ರಿಕ ದೋಷ: ಏರ್ ಇಂಡಿಯಾ ಪ್ರಯಾಣಿಕರ ಪರದಾಟ

|
Google Oneindia Kannada News

ನವದೆಹಲಿ, ಏಪ್ರಿಲ್ 29: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಶನ್ ಸಿಸ್ಟೆಮ್ ನಲ್ಲಿ ಕಂಡು ಬಂದ ತಾಂತ್ರಿಕ ದೋಷದ ಕಾರಣ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಕಂಡುಬಂತು.

ಸೋಮವಾರ ಬೆಳಗ್ಗಿನ ಜಾವ 12:20 ರ ಸುಮಾರಿಗೆ ಇಮಿಗ್ರೇಶನ್ ಸಿಸ್ಟಂ ಸರ್ವರ್ ನಲ್ಲಿ ದೋಷ ಕಂಡುಬಂದಿತ್ತು. 40 ನಿಮಿಷಗಳ ಕಾಲ ಸರ್ವರ್ ಡೌನ್ ಆಗಿದ್ದರಿಂದ ಏರ್ ಇಂಡಿಯಾ ವಿಮಾನಗಳು ವಿಳಂಬವಾದವು.

ತಂತ್ರಾಂಶದಲ್ಲಿ ದೋಷ, ಏರ್ ಇಂಡಿಯಾ ವಿಮಾನ ವಿಳಂಬತಂತ್ರಾಂಶದಲ್ಲಿ ದೋಷ, ಏರ್ ಇಂಡಿಯಾ ವಿಮಾನ ವಿಳಂಬ

ಈ ಕುರಿತು ಏರ್ಪೋರ್ಟ್ ನಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡುತ್ತಿದ್ದಂತೆಯೇ ಪ್ರಯಾಣಿಕರು ಪರದಾಡುವುದು ಕಂಡುಬಂತು. ಇಮಿಗ್ರೇಶನ್ ಸಿಸ್ಟಂ ಡೆಸ್ಕ್ ಮುಂದೆ ಸಾಕಷ್ಟು ಜನರು ಸಾಲುಗಟ್ಟಿ ನಿಂತಿದ್ದರು. ಈ ಘಟನೆಯ ಕುರಿತು ಹಲವರು ಟ್ವೀಟ್ ಮಾಡಿ ತಮ್ಮ ಬೇಸರ ವ್ಯಕ್ತಪಡಿಸಿದರು.

Air Indias immigration system server faces problem at Delhi airport

ಭಾನುವಾರ ಸಹ ಏರ್ ಇಂಡಿಯಾದ 137 ವಿಮಾನಗಳು 197 ನಿಮಿಷ ತಡವಾಗಿ ಹಾರಾಟ ನಡೆಸಿದ್ದವು. ಇದಕ್ಕೂ ತಾಂತ್ರಿಕ ದೋಷವೇ ಕಾರಣ ಎನ್ನಲಾಗಿತ್ತು.

ಸರ್ವರ್ ಸಮಸ್ಯೆ: ಜಗತ್ತಿನಾದ್ಯಂತ ಏರ್ ಇಂಡಿಯಾ ವಿಮಾನ 5 ಗಂಟೆ ವಿಳಂಬಸರ್ವರ್ ಸಮಸ್ಯೆ: ಜಗತ್ತಿನಾದ್ಯಂತ ಏರ್ ಇಂಡಿಯಾ ವಿಮಾನ 5 ಗಂಟೆ ವಿಳಂಬ

ಶನಿವಾರವಷ್ಟೇ ಏರ್ ಇಂಡಿಯಾದ ಮೈನ್ ಸರ್ವರ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಐದು ಗಂಟೆಗಳ ಕಾಲ ಸರ್ವರ್ ಕಾರ್ಯ ನಿರ್ವಹಿಸಿರಲಿಲ್ಲ. ಇದರಿಂದ ವಿಶ್ವದಾದ್ಯಂತ ಏರ್ ಇಂಡಿಯಾ ವಿಮಾನಗಳು ಸುಮಾರು ಐದು ಗಂಟೆಗಳ ಕಾಲ ವಿಳಂಬವಾಗಿದ್ದವು. ಈ ಕುರಿತು ಏರ್ ಇಂಡಿಯಾ ಟ್ವೀಟ್ ಮಾಡಿ, ಕ್ಷಮೆ ಕೇಳಿತ್ತು.

English summary
Air India's immigration system server faces problem in Indira Gandhi international Airport, Delhi early morning today. Hundreds of passengers faced a harrowing time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X