• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಾವುದೇ ನೌಕರರನ್ನು ಕೆಲಸದಿಂದ ವಜಾಗೊಳಿಸುವುದಿಲ್ಲ: ಏರ್‌ ಇಂಡಿಯಾ

|

ನವದೆಹಲಿ, ಜುಲೈ 23: ಪಿಟಿಐನಲ್ಲಿನ ವರದಿಯ ಪ್ರಕಾರ ಏರ್ ಇಂಡಿಯಾ ತನ್ನ ನೌಕರರನ್ನು ವಜಾಗೊಳಿಸುವುದಿಲ್ಲ ಎಂದು ಹೇಳಿದೆ. ವಿಮಾನ ಹಾರಾಟ ಸಿಬ್ಬಂದಿಗೆ ಗಂಟೆಗಳ ಅನುಗುಣವಾಗಿ ಪಾವತಿಸಲಾಗುವುದು ಎಂದು ತಿಳಿಸಿದೆ. ಆದರೆ ತಿಂಗಳ ಮಾಸಿಕ ಭತ್ಯೆ 25,000ಕ್ಕಿಂತ ಹೆಚ್ಚು ಇರುವವರಿಗೆ ಶೇಕಡಾ 50ರಷ್ಟು ಕಡಿಮೆ ಮಾಡಿದೆ.

"ಸಾಮಾನ್ಯ ವರ್ಗದ ಅಧಿಕಾರಿಗಳಿಗೆ", ಇತರ ಎಲ್ಲ ಭತ್ಯೆಗಳನ್ನು ಶೇ. 50ರಷ್ಟು ಕಡಿಮೆಗೊಳಿಸಲಾಗುವುದು ಎಂದು ಆಂತರಿಕ ಆದೇಶದಲ್ಲಿ ತಿಳಿಸಲಾಗಿದೆ. "ಸಾಮಾನ್ಯ ವರ್ಗದ ಸಿಬ್ಬಂದಿ" ಮತ್ತು "ನಿರ್ವಾಹಕರು" ಇತರ ಎಲ್ಲ ಭತ್ಯೆಗಳನ್ನು ಶೇ. 30ರಷ್ಟು ಕಡಿಮೆಗೊಳಿಸುತ್ತಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕ್ಯಾಬಿನ್ ಸಿಬ್ಬಂದಿ ಸದಸ್ಯರು ತಮ್ಮ ಇತರ ಎಲ್ಲ ಭತ್ಯೆಗಳಾದ ಚೆಕ್ ಭತ್ಯೆ, ಹಾರುವ ಭತ್ಯೆ ಮತ್ತು ತ್ವರಿತ ರಿಟರ್ನ್ ಭತ್ಯೆಯನ್ನು ಶೇ. 20ರಷ್ಟು ಕಡಿಮೆಗೊಳಿಸುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಮೆರಿಕಕ್ಕೆ ಟಿಕೆಟ್ ಬುಕ್ಕಿಂಗ್ ಆರಂಭಿಸಿದ ಏರ್ ಇಂಡಿಯಾ

"ದೇಶೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಗಳು ಕೋವಿಡ್ ಪೂರ್ವ ಮಟ್ಟವನ್ನು ತಲುಪಲು ವಿಸ್ತರಿಸಿದಂತೆ ಮತ್ತು ಏರ್ ಇಂಡಿಯಾದ ಆರ್ಥಿಕ ಸ್ಥಿತಿ ಸುಧಾರಿಸಿದಂತೆ, ಭತ್ಯೆಗಳ ತರ್ಕಬದ್ಧತೆಯನ್ನು ಪರಿಶೀಲಿಸಲಾಗುವುದು" ಎಂದು ಏರ್ ಇಂಡಿಯಾ ಹೇಳಿದೆ.

ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಸುಮಾರು 60 ಏರ್ ಇಂಡಿಯಾ ಪೈಲಟ್‌ಗಳು ಹಾರಾಟ ನಡೆಸುತ್ತಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಈ ಹಿಂದೆ ತಿಳಿಸಿದೆ.

ಏರ್ ಇಂಡಿಯಾ ಸುಮಾರು, 70,000 ಕೋಟಿ ಸಾಲವನ್ನು ಹೊಂದಿದೆ. ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಆದರೆ ಇಲ್ಲಿಯವರೆಗೆ ಯಾವುದೇ ಒಪ್ಪಂದವು ಆಗಿಲ್ಲ.

English summary
Air India today has announced to not lay off any employees like other airlines in India. The carrier also said that the "flying crew will be paid according to the actual number of hours flown
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X