ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲಿನ್ಯ ನಿಯಂತ್ರಣ: ವಿಶಿಷ್ಟ ಸಾಧನ ಅಳವಡಿಸಿಕೊಂಡ ಏರ್ ಇಂಡಿಯಾ

|
Google Oneindia Kannada News

ನವದೆಹಲಿ, ಅಕ್ಟೋಬರ್ 15: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ವಾಣಿಜ್ಯ ಏರ್‌ಬಸ್ ವಿಮಾನಗಳಲ್ಲಿ ಟ್ಯಾಕ್ಸಿ ಬೋಟ್ ಬಳಸಿದ ಜಗತ್ತಿನ ಮೊದಲ ಸಂಸ್ಥೆಯೆಂಬ ಕೀರ್ತಿಗೆ ಪಾತ್ರವಾಗುವ ಮೂಲಕ ಇತಿಹಾಸ ನಿರ್ಮಿಸಿದೆ.

ಬಾಕಿ ಮೊತ್ತ 4500 ಕೋಟಿ ರು ಪಾವತಿಸದ ಏರ್ ಇಂಡಿಯಾಬಾಕಿ ಮೊತ್ತ 4500 ಕೋಟಿ ರು ಪಾವತಿಸದ ಏರ್ ಇಂಡಿಯಾ

ಟ್ಯಾಕ್ಸಿ ಬೋಟ್ ಎಂದು ಕರೆಯಲಾಗುವ ಪರ್ಯಾಯ ಟ್ಯಾಕ್ಸಿ ಸಾಧನದಂತೆ ಸೆಮಿ-ರೊಬೊಟಿಕ್ ಏರ್‌ಕ್ರಾಫ್ಟ್ ಟ್ರ್ಯಾಕ್ಟರ್ ಬಳಕೆಯಾಗಲಿದೆ. ಇದು ವಿಮಾನದ ಪೈಲಟ್‌ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಏರ್ ಇಂಡಿಯಾದ ಏರ್‌ಬಸ್ ಎ320ಯಲ್ಲಿ ಈ ಟ್ಯಾಕ್ಸಿ ಸಾಧನವನ್ನು ಅಳವಡಿಸಲಾಗಿದ್ದು, ಇದನ್ನು ಬಳಸುತ್ತಿರುವ ಜಗತ್ತಿನಲ್ಲಿಯೇ ಮೊದಲ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಏರ್ ಇಂಡಿಯಾ ಪಾತ್ರವಾಗಿದೆ.

ಬ್ರಾಹ್ಮಣ ದಂಪತಿಗೆ ಮಾಂಸದೂಟ ಕೊಟ್ಟು ಕಷ್ಟಕ್ಕೆ ಸಿಲುಕಿದ ಏರ್‌ಇಂಡಿಯಾಬ್ರಾಹ್ಮಣ ದಂಪತಿಗೆ ಮಾಂಸದೂಟ ಕೊಟ್ಟು ಕಷ್ಟಕ್ಕೆ ಸಿಲುಕಿದ ಏರ್‌ಇಂಡಿಯಾ

ಫ್ರೆಂಚ್ ಕಂಪೆನಿಯೊಂದರ ಸಹಭಾಗಿತ್ವದಲ್ಲಿ ಇಸ್ರೇಲಿ ಏರೋಸ್ಪೇಸ್ ಇಂಡಸ್ಟ್ರೀಸ್ ಟ್ಯಾಕ್ಸಿ ಬೊಟ್ ಟ್ರ್ಯಾಕ್ಟರ್‌ಅನ್ನು ಅಭಿವೃದ್ಧಿಪಡಿಸಿದೆ. ವಾಣಿಜ್ಯ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಯಿಂದ ಮುಂಬೈಗೆ ಮೊದಲ ಬಾರಿಗೆ ಇದನ್ನು ಬಳಸಿ ಯಶಸ್ವಿಯಾಗಿ ಪ್ರಯಾಣಿಕರನ್ನು ಕರೆದೊಯ್ಯಲಾಗಿದೆ.

Air India Made History First Airline To Use Taxibot

ವಿಮಾನದ ಎಂಜಿನ್‌ಗಳು ಆಫ್ ಆಗಿದ್ದಾಗಲೂ ಟ್ಯಾಕ್ಸಿ ಬೋಟ್‌ ನಿಲ್ದಾಣದ ಜಾಗದಿಂದ ವಿಮಾನವನ್ನು ಟೇಕ್ ಆಫ್ ಆಗಲು ರನ್‌ವೇಗೆ ಎಳೆದೊಯ್ಯಬಲ್ಲದು. ಈ ಪ್ರಕ್ರಿಯೆಯಲ್ಲಿ ವಿಮಾನಗಳು ಬಳಸುವ ಇಂಧನದಲ್ಲಿ ಶೇ 85ರಷ್ಟನ್ನು ಟ್ಯಾಕ್ಸಿ ಬೋಟ್ ಉಳಿಸಬಲ್ಲದು. ವಿಮಾನಗಳು ಇಳಿದ ಬಳಿಕವೂ ಅವುಗಳನ್ನು ರನ್‌ವೇನಿಂದ ನಿಲ್ದಾಣದವರೆಗೆ ಎಳೆದೊಯ್ಯಲು ಇದನ್ನು ಬಳಸಬಹುದು ಎಂದು ತಯಾರಕರು ಹೇಳಿದ್ದಾರೆ. ಆದರೆ ಏರ್ ಇಂಡಿಯಾ ಪ್ರಸ್ತುತ ಅದನ್ನು ವಿಮಾನಗಳು ಹೊರಡುವ ವೇಳೆಯಲ್ಲಿ ಮಾತ್ರ ಬಳಸಲು ಉದ್ದೇಶಿಸಿದೆ.

ಏರ್ ಇಂಡಿಯಾ ಸಂಪೂರ್ಣ ಖಾಸಗಿಗೆ; ಕೇಂದ್ರದಿಂದ ಮಹತ್ವದ ಘೋಷಣೆಏರ್ ಇಂಡಿಯಾ ಸಂಪೂರ್ಣ ಖಾಸಗಿಗೆ; ಕೇಂದ್ರದಿಂದ ಮಹತ್ವದ ಘೋಷಣೆ

ಇದರ ಜತೆಗೆ ಟ್ಯಾಕ್ಸಿಬೋಟ್ ವಿಮಾನ ಹೊರಡುವ ವೇಳೆ ಪ್ರತಿ 15 ನಿಮಿಷಕ್ಕೆ 800 ಕೆಜಿಯವರೆಗೂ ಉಗುಳುವ CO2 ಪ್ರಮಾಣವನ್ನು ನಿಯಂತ್ರಿಸಬಲ್ಲದು. ಮಾತ್ರವಲ್ಲ ಶಬ್ದ ಮಾಲಿನ್ಯದ ಪ್ರಮಾಣವನ್ನೂ ಶೇ 60ರಷ್ಟು ತಗ್ಗಿಸಬಲ್ಲದು.

English summary
Air India become the first airline in the world to use a pilot controlled semi robotic aircraft tractor called Taxibot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X