• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರಕ್ಕಿಲ್ಲ ನಿರ್ಬಂಧ

|
Google Oneindia Kannada News

ನವದೆಹಲಿ, ಸಪ್ಟೆಂಬರ್.18: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಿದ ಕೆಲವು ಗಂಟೆಗಳಲ್ಲೇ ದುಬೈ ವಿಮಾನಯಾನ ಪ್ರಾಧಿಕಾರವು ತನ್ನ ಆದೇಶವನ್ನು ಹಿಂಪಡೆದುಕೊಂಡಿದೆ. ಶನಿವಾರದಿಂದ ಏರ್ ಇಂಡಿಯಾ ಎಕ್ಸ್ ಪ್ರಸ್ ವಿಮಾನಗಳು ಎಂದಿನಂತೆ ಸಂಚರಿಸಲಿವೆ ಎಂದು ಪ್ರಾಧಿಕಾರವು ಸ್ಪಷ್ಟಪಡಿಸಿದೆ.

ಶುಕ್ರವಾರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳ ಸಂಚಾರಕ್ಕೆ ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರವು ಆಕ್ಟೋಬರ್.2ರವರೆಗೂ ನಿರ್ಬಂಧ ವಿಧಿಸಿತ್ತು. ಕೊರೊನಾವೈರಸ್ ಸೋಂಕು ತಗುಲಿರುವ ಬಗ್ಗೆ ವರದಿಯಿದ್ದರೂ ಇಬ್ಬರು ಸೋಂಕಿತರನ್ನು ಪ್ರಯಾಣಿಸಲು ಅನುಮತಿ ನೀಡಲಾಗಿತ್ತು.

ಕೋವಿಡ್ ನಿಯಮ ಉಲ್ಲಂಘನೆ: ಏರ್ ಇಂಡಿಯಾ ವಿಮಾನ ಸಂಚಾರ ಅಮಾನತು ಮಾಡಿದ ದುಬೈಕೋವಿಡ್ ನಿಯಮ ಉಲ್ಲಂಘನೆ: ಏರ್ ಇಂಡಿಯಾ ವಿಮಾನ ಸಂಚಾರ ಅಮಾನತು ಮಾಡಿದ ದುಬೈ

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಇಂಥ ಎರಡು ಪ್ರತ್ಯೇಕ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆ ವಿಮಾನಯಾನ ಸಂಸ್ಥೆಯ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವುದಕ್ಕಾಗಿ ಸಂಚಾರಕ್ಕೆ ನಿರ್ಬಂಧ ವಿಧಿಸಲು ತೀರ್ಮಾನಿಸಲಾಗಿತ್ತು.

ನಿರ್ಬಂಧ ವಿಧಿಸುವುದಕ್ಕೆ ಕಾರಣವೇನು?:

   Air ಇಂಡಿಯಾಗೆ ಗ್ರಾಹಕರಿಗೆ ದೊಡ್ಡ shock | Oneindia Kannada

   ಪ್ರಯಾಣಿಕರೊಬ್ಬರು ಜೈಪುರದ ಲ್ಯಾಬೊರೇಟರಿ ಒಂದರಲ್ಲಿ ಕೊರೊನಾ ವೈರಸ್ ತಪಾಸಣೆಗೆ ಒಳಪಟ್ಟಿದ್ದರು. ಸೆ. 2ರಂದು ಅವರ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಹೀಗಿದ್ದರೂ ಅವರನ್ನು ಏರ್ ಇಂಡಿಯಾ ವಿಮಾನ ಐಎಕ್ಸ್ 1135ನಲ್ಲಿ ಸೆ. 4ರಂದು ದುಬೈಗೆ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಹೀಗೆ ಕೋವಿಡ್ ಸೋಂಕು ಇರುವ ವ್ಯಕ್ತಿಗಳನ್ನು ಎರಡನೆಯ ಬಾರಿಗೆ ಏರ್ ಇಂಡಿಯಾ ಕರೆದೊಯ್ದಿರುವುದನ್ನು ದುಬೈ ಅಧಿಕಾರಿಗಳು ಪತ್ತೆ ಮಾಡಿದ್ದರು.

   English summary
   Air India Express Says All Flights From Dubai To Operate As Per Schedule From Tomorrow.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X