ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಗೆ ಹೊಸ ರಥ: ಭಾರತಕ್ಕೆ VVIP ವಿಮಾನ ಬೋಯಿಂಗ್ ಬಿ 777

|
Google Oneindia Kannada News

ನವದೆಹಲಿ, ಅಕ್ಟೋಬರ್ 2: ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳಿಗಾಗಿ ಅಮೆರಿಕಾದಿಂದ ಹೊಸ ಅತ್ಯಾಧುನಿಕ ವಿಮಾನಗಳು ಭಾರತಕ್ಕೆ ಗುರುವಾರ ಆಗಮಿಸಿದೆ.

ವಿವಿಐಪಿಗಳಿಗೆಂದೇ ಅತ್ಯಾಧುನಿಕ ಸಂವಹನ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಹೊಂದಿರುವ ಬೋಯಿಂಗ್ 777 ವಿಮಾನಗಳು ಗುರುವಾರ ಮಧ್ಯಾಹ್ನ ಟೆಕ್ಸಾಸ್‌ನ ಬೋಯಿಂಗ್ ರಕ್ಷಣಾ ನೆಲೆಯಿಂದ ನೇರವಾಗಿ ಭಾರತ ದೇಶಕ್ಕೆ ಬಂದಿದೆ. ಈ ವಿಮಾನಗಳ ಹಾರಾಟಕ್ಕೆ ನಾಲ್ವರು ನುರಿತ ಪೈಲಟ್‌ಗಳನ್ನು ನೇಮಿಸಿದ್ದು, ಸತತ 15 ಗಂಟೆಗಳ ಕಾಲ ವಿಮಾನ ಪ್ರಯಾಣಿದ, 13,000 ಕಿ.ಮೀ ಸಂಚಾರ ನಡೆಸಿ ಗುರುವಾರ ಮಧ್ಯಾಹ್ನ 3.11ಕ್ಕೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ವಾಣಿಜ್ಯ ವಿಮಾನ ಸಂಚಾರ ನಿರ್ಬಂಧ ಅ. 31ರವರೆಗೂ ವಿಸ್ತರಣೆವಾಣಿಜ್ಯ ವಿಮಾನ ಸಂಚಾರ ನಿರ್ಬಂಧ ಅ. 31ರವರೆಗೂ ವಿಸ್ತರಣೆ

ಈ ಹೊಸ ಬೋಯಿಂಗ್ 777 ಮುಂದಿನ ತಿಂಗಳು ತನ್ನ ಮೊದಲ ವಿವಿಐಪಿ ಹಾರಾಟವನ್ನು ನಿರ್ವಹಿಸುವ ಸಾಧ್ಯತೆಯಿದೆ. ಈ ಎರಡು ಹೊಸ ವಿಮಾನಗಳಿಗೆ ಸುಮಾರು 8,400 ಕೋಟಿ ರೂಪಾಯಿ ವೆಚ್ಚ ತಗುಲಿದೆ

Air India: B777 Plane For VVIP Travel Arrives In India

ಈ ಹಿಂದೆ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ವಿದೇಶಕ್ಕೆ ಪ್ರಯಾಣಿಸಿದಾಗಲೆಲ್ಲಾ ಅವರು ಏರ್ ಇಂಡಿಯಾ ಬೋಯಿಂಗ್ 747 ವಿಮಾನವನ್ನು ಅವಲಂಬಿಸಿದ್ದಾರೆ.

ಆದರೆ ಈ ಜೆಟ್‌ಗಳು ಈಗ 20 ವರ್ಷಕ್ಕಿಂತಲೂ ಹಳೆಯದಾಗಿದೆ ಮತ್ತು ಸುರಕ್ಷಿತ ಸಂವಹನ ಸಾಧನಗಳು ಅಥವಾ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿಗಳಂತಹ ಪ್ರತಿಕೂಲ ಬೆದರಿಕೆಗಳನ್ನು ಪತ್ತೆಹಚ್ಚಲು ಮತ್ತು ಜಾಮ್ ಮಾಡಲು ಯಾವುದೇ ಸಂವೇದಕಗಳನ್ನು ಹೊಂದಿಲ್ಲ. ಹೀಗಾಗಿ ಅತ್ಯಾಧುನಿಕ ವಿಮಾನಗಳನ್ನು ಭಾರತಕ್ಕೆ ತರಲಾಗಿದೆ.

ಇನ್ನು 40 ಪೈಲಟ್‌ಗಳು ಎರಡು ಬೋಯಿಂಗ್ 777 ವಿಮಾನಗಳನ್ನು ಹಾರಿಸಲಿದ್ದಾರೆ ಹಾಗೂ ಹೆಚ್ಚಿನ ವೇತನವನ್ನು ಪಡೆಯಲಿದ್ದಾರೆ.

English summary
A wide-body Boeing 777 aircraft customised with self-defence and jamming features that will be used to fly the President, Vice President and PM Reached India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X