ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಾಹ್ಮಣ ದಂಪತಿಗೆ ಮಾಂಸದೂಟ ಕೊಟ್ಟು ಕಷ್ಟಕ್ಕೆ ಸಿಲುಕಿದ ಏರ್‌ಇಂಡಿಯಾ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಬ್ರಾಹ್ಮಣ ದಂಪತಿಗೆ ಮಾಂಸದೂಟ ಕೊಟ್ಟ ತಪ್ಪಿಗೆ ಏರ್‌ ಇಂಡಿಯಾ ವಿಮಾನ 47 ಸಾವಿರ ರೂ ಪರಿಹಾರ ತೆತ್ತಿದೆ.

2016ರ ನವೆಂಬರ್ 14ರಂದು ಮೊಹಾಲಿ ಮೂಲದ ಬ್ರಾಹ್ಮಣ ದಂಪತಿ ಚಿಕಾಗೊದಿಂದ ದೆಹಲಿಗೆ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅವರು ಸಸ್ಯಾಹಾರ ಆರ್ಡರ್ ಮಾಡಿದರೆ ವಿಮಾನ ಸಿಬ್ಬಂದಿ ಮಾಂಸದೂಟವನ್ನು ನೀಡಿತ್ತು.

ಏರ್ ಇಂಡಿಯಾ ಸಂಸ್ಥೆಯಲ್ಲಿ ಸಹಾಯಕ ಸೂಪರ್ ವೈಸರ್ ಹುದ್ದೆಗಳಿವೆಏರ್ ಇಂಡಿಯಾ ಸಂಸ್ಥೆಯಲ್ಲಿ ಸಹಾಯಕ ಸೂಪರ್ ವೈಸರ್ ಹುದ್ದೆಗಳಿವೆ

ಅದಕ್ಕೆ ಕೋಪಗೊಂಡ ದಂಪತಿ ಏರ್ ಇಂಡಿಯಾ ವಿಮಾನದ ವಿರುದ್ಧ ಪ್ರಕರಣ ದಾಖಲಿಸಿದ್ದರು.ಪಂಜಾಬ್‌ನ ಗ್ರಾಹಕರ ನ್ಯಾಯಾಲಯವು 47 ಸಾವಿರ ರೂ ಪರಿಹಾರ ನೀಡುವಂತೆ ಆದೇಶ ನೀಡಿದೆ.

Air India Asked To Pay Rs 47 Thousand Compensation

ಈ ಮೊದಲು ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿಹತ್ತು ಸಾವಿರ ಪರಿಹಾರ ನೀಡುವುದಾಗಿ ಏರ್‌ಲೈನ್ಸ್ ತಿಳಿಸಿತ್ತು. ಬಳಿಕ ರಾಜ್ಯ ಗ್ರಾಹಕರ ನ್ಯಾಯಾಲಯ ನಾಲ್ಕು ಪಟ್ಟು ನೀಡಿ ಅದರ ಜೊತೆ ಏಳು ಸಾವಿರ ರೂ ಸೇರಿಸಿ ನೀಡುವಂತೆ ತಿಳಿಸಿದೆ.

ಚಂದ್ರಮೋಹನ್ ಪಾಠಕ್ ಅವರ ಹೇಳಿಕೆ ಪ್ರಕಾರ ದಂಪತಿ 2016ರ ಜೂನ್ 17ರಂದು ನವದೆಹಲಿಯಿಂದ ಚಿಕಾಗೋಗೆ ಎರಡು ಟಿಕೆಟ್‌ ಹಾಗೂ ಅಲ್ಲಿಂದ ಮರಳಲು ಮತ್ತೆರೆಡು ಒಟ್ಟು ನಾಲ್ಕು ಟಿಕೆಟ್‌ ಬುಕ್ ಮಾಡಿದ್ದರು.

ಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರು: ಸ್ಪೀಕರ್ ಓಂ ಬಿರ್ಲಾಬ್ರಾಹ್ಮಣರು ಹುಟ್ಟಿನಿಂದಲೇ ಶ್ರೇಷ್ಠರು: ಸ್ಪೀಕರ್ ಓಂ ಬಿರ್ಲಾ

ಟಿಕೆಟ್ ಬುಕ್ ಮಾಡುವಾಗಲೇ ಅದರಲ್ಲಿ ತಿಳಿಸಲಾಗಿತ್ತು, ನಾವಿಬ್ಬರೂ ಸಂಪೂರ್ಣವಾಗಿ ಸಸ್ಯಾಹಾರಿಗಳು ಜೊತೆಗೆ ಆಹಾರವನ್ನು ಕೂಡ ಸೆಲೆಕ್ಟ್ ಮಾಡಿದ್ದೆವು.

ಚಿಕಾಗೊಗೆ ಹೋಗುವಾಗ ಯಾವುದೇ ತೊಂದರೆಯಾಗಿರಲಿಲ್ಲ, ಆಹಾರವನ್ನು ನಾವು ಹೇಳಿದ್ದೇ ನೀಡಿದ್ದರು. ಆದರೆ ಚಿಕಾಗೋದಿಂದ ವಾಪಸ್ ಬರುವಾಗ ನಾನ್‌ವೆಜ್ ನೀಡಿದ್ದರು.

ಆದರೆ ಅದೇ ಸಮಯದಲ್ಲಿ ಏರ್‌ಲೈನ್ಸ್ ದೂರು ನೀಡುವ ಪುಸ್ತಕದಲ್ಲಿ ಬರೆಯಲು ಕೂಡ ಅವಕಾಶ ಮಾಡಿಕೊಟ್ಟಿರಲಿಲ್ಲ.

English summary
The Punjab State Consumer Disputes Redressal Commission has directed Air India to pay a compensation of Rs 40,000 to a Mohali-based Brahmin couple as a penalty for serving non-vegetarian food instead of a veg meal they had opted for.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X