• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್-19 ಏರಿಕೆಗೆ ಯುವಜನರು ಹೆಚ್ಚು ಕಾರಣ: ಏಮ್ಸ್ ನಿರ್ದೇಶಕ

|

ನವದೆಹಲಿ, ಏಪ್ರಿಲ್ 1: ಕೋವಿಡ್-19 ಪ್ರಕರಣಗಳ ಏರಿಕೆಗೆ ಯುವಜನರು ಹೆಚ್ಚಿನ ಪ್ರಮಾಣದಲ್ಲಿ ಕಾರಣಕರ್ತರಾಗುತ್ತಿದ್ದಾರೆ ಎಂದು ದೆಹಲಿಯಲ್ಲಿನ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ (ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಕೋವಿಡ್-19 ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗುತ್ತಿದ್ದರೂ ಯುವಜನರು ಗುಂಪುಗೂಡಿ ಹೊರಗೆ ಹೋಗಿ ಜನರೊಂದಿಗೆ ಬೆರೆಯುತ್ತಿದ್ದಾರೆ. ತಮಗೆ ಸೋಂಕು ತಗುಲಿದರೂ ಅದರ ಪ್ರಭಾವ ಲಘುವಾಗಿರುತ್ತದೆ ಎಂಬ ಭಾವನೆಯ ಕಾರಣ ಅವರಲ್ಲಿ ಭಯ ಕಡಿಮೆಯಾಗಿದೆ. ಇದರಿಂದ ಅವರು ಕೋವಿಡ್ ತಡೆಗೆ ಅನುಸರಿಸಬೇಕಾದ ಕ್ರಮಗಳನ್ನು ಪಾಲಿಸುತ್ತಿಲ್ಲ ಎಂದು ಗುಲೇರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಚಿಕಿತ್ಸೆಯಲ್ಲಿ ಗಾಯತ್ರಿ ಮಂತ್ರ ಪಠಣ, ಪ್ರಾಣಾಯಾಮ ಎಷ್ಟು ಪರಿಣಾಮಕಾರಿ?

ಯುವಜನರಿಂದ ವಯಸ್ಕರ ಸಮೂಹಕ್ಕೆ ಸೋಂಕು ತಗುಲುವ ಅಪಾಯಗಳು ಅಧಿಕ. ಹೀಗಾಗಿ ವಯಸ್ಕರು ಹಾಗೂ ಆದ್ಯತೆಯ ವಯೋಮಾನದವರು ಲಸಿಕೆ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್-19 ಸನ್ನಿವೇಶದ ಕುರಿತು ಚರ್ಚಿಸಲು ಬುಧವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ನೀತಿ ಆಯೋಗದ ಸದಸ್ಯ ಡಾ. ವಿಕೆ ಪೌಲ್ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಪಂಜಾಬ್ ಸರ್ಕಾರ ಮತ್ತು ಚಂಡೀಗಡ ಆಡಳಿತ ತೆಗೆದುಕೊಂಡ ಸಾರ್ವಜನಿಕ ಆರೋಗ್ಯ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

   ಕರ್ನಾಟಕ: ಇಂದಿನಿಂದ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ವಿತರಣೆ | Oneindia Kannada

   ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

   English summary
   AIIMS director Dr Randeep Guleria said youngsters are contributing to the rise in Covid-19 cases with their neglegence.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X