ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊರೊನಾ ಲಸಿಕೆ 9 ತಿಂಗಳಿನಿಂದ 1 ವರ್ಷದವರೆಗೆ ಪರಿಣಾಮಕಾರಿಯಾಗಿರಬಲ್ಲದು'

|
Google Oneindia Kannada News

ನವದೆಹಲಿ, ನವೆಂಬರ್ 24: ಕೊರೊನಾ ವೈರಸ್ ವಿರುದ್ಧ ನೀಡಲಾಗುವ ಲಸಿಕೆಯು ಕನಿಷ್ಠ ಒಂದು ವರ್ಷದವರೆಗೆ ವೈರಸ್‌ನಿಂದ ರಕ್ಷಣೆ ನೀಡಬಲ್ಲದು ಎಂದು ದೆಹಲಿಯ ಏಮ್ಸ್ ಆಸ್ಪತ್ರೆ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ. ಲಸಿಕೆಯು ನೀಡುವ ರಕ್ಷಣೆಯ ಸಾಮರ್ಥ್ಯದ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, 9 ತಿಂಗಳಿನಿಂದ ಒಂದು ವರ್ಷದವರೆಗೆ ಅದು ಸಮರ್ಥವಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ.

ಲಸಿಕೆಯು ಭಾರಿ ದೊಡ್ಡ ಪ್ರಮಾಣದಲ್ಲಿ ಜನಸಂಖ್ಯೆಗೆ ರಕ್ಷಣೆ ಒದಗಿಸಲಿದೆ ಮತ್ತು ಸೋಂಕು ಹರಡುವಿಕೆಯ ಸರಪಣಿಯನ್ನು ತುಂಡರಿಸುವ ತಾಕತ್ತು ಹೊಂದಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಜನವರಿ ವೇಳೆಗೆ ಭಾರತಕ್ಕೆ 10 ಕೋಟಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ: ಆದರ್ ಪೂನಾವಾಲಾ ಜನವರಿ ವೇಳೆಗೆ ಭಾರತಕ್ಕೆ 10 ಕೋಟಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ: ಆದರ್ ಪೂನಾವಾಲಾ

ಆದರೆ, ಅವರ ಪ್ರಕಾರ ಈ ಕೊರೊನಾ ವೈರಸ್ ಪಿಡುಗು ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. 'ಕೋವಿಡ್ 19 ತೊಲಗುವುದಿಲ್ಲ. ಅದನ್ನು ಕೆಲವು ಸಮಯದವರೆಗೆ ನಿರ್ಮೂಲನೆ ಮಾಡಲು ಆಗುವುದಿಲ್ಲ. ಅದು ಮುಂದೆ ಮೃದು ರೋಗವಾಗಿ ಬದಲಾಗುವುದು' ಎಂದು ಅವರು ಹೇಳಿದ್ದಾರೆ.

AIIMS Director Randeep Guleria Says Vaccine Efficacy To Last 9 Months To 1 Year

2023ರ ವೇಳೆಗೆ ಸೋಂಕಿನ ಪ್ರಮಾಣ ಕಡಿಮೆಯಾಗಲಿದೆ. ಅದಕ್ಕೂ ಮುನ್ನ ವಿಶ್ವ ಆರೋಗ್ಯ ಸಂಸ್ಥೆಯು ಪಿಡುಗು ಅಂತ್ಯಗೊಂಡಿದೆ ಎಂಬ ಘೋಷಿಸುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.

ಭಾರತವು ಕನಿಷ್ಠ ಐದು ಲಸಿಕೆಗಳತ್ತ ಗಮನ ಹರಿಸಿದೆ. ಇದರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಭಾರತದ ಸೆರಮ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಕೋವಿಶೀಲ್ಡ್ ಮುಖ್ಯವಾಗಿದೆ. ಭಾರತದಲ್ಲಿ ಈ ಲಸಿಕೆಯು ಮೂರನೇ ಹಂತದ ಪ್ರಯೋಗದಲ್ಲಿದೆ. ಶೀಘ್ರದಲ್ಲಿಯೇ ಲಸಿಕೆಯ ತುರ್ತು ಬಳಕೆ ಅಧಿಕಾರವನ್ನು ಪಡೆದುಕೊಳ್ಳುವುದಾಗಿ ಈಗಾಗಲೇ ಸೆರಮ್ ಸಂಸ್ಥೆ ತಿಳಿಸಿದೆ.

1000 ರೂ.ಗೆ ಕೊವಿಡ್-19 ಲಸಿಕೆ; ಭಾರತಕ್ಕೆ ಮೊದಲ ಆದ್ಯತೆ ಎಂದ ಸಂಸ್ಥೆ! 1000 ರೂ.ಗೆ ಕೊವಿಡ್-19 ಲಸಿಕೆ; ಭಾರತಕ್ಕೆ ಮೊದಲ ಆದ್ಯತೆ ಎಂದ ಸಂಸ್ಥೆ!

ಭಾರತದ ಭಾರತ್ ಬಯೋಟೆಕ್ ಸಂಸ್ಥೆಯು ಐಸಿಎಂಆರ್ ಸಹಭಾಗಿತ್ವದಲ್ಲಿ ತಯಾರಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯು ಶೇ 60ರಷ್ಟು ಪರಿಣಾಮಕಾರಿಯಾಗಿದೆ ಎಂದು ಮೊದಲ ಮತ್ತು ಎರಡನೇ ಹಂತದ ಪ್ರಯೋಗದ ವಿವರಗಳನ್ನು ಮುಂದಿಟ್ಟು ಹೇಳಿಕೊಂಡಿದೆ.

English summary
AIIMS Director Randeep Guleria said, coronavirus vaccine protection could last at 9 months to 1 year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X