ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 2021ರಲ್ಲಿಯೂ ಮುಂದುವರಿಯಲಿದೆ ಕೋವಿಡ್-19: ಎಚ್ಚರಿಕೆ ನೀಡಿದ ಏಮ್ಸ್ ಮುಖ್ಯಸ್ಥ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 5: ಕೋವಿಡ್ 19 ಈಗ ಸಾಗುತ್ತಿರುವ ದೈನಂದಿನ ಬೆಳವಣಿಗೆಗಳನ್ನು ನೋಡಿದರೆ ಈ ಸಾಂಕ್ರಾಮಿಕ ಸಂಕಷ್ಟ 2021ರಲ್ಲಿಯೂ ಇರಲಿದೆ. ಮುಂದಿನ ವರ್ಷದ ಹಲವು ತಿಂಗಳವರೆಗೆ ಕೊರೊನಾ ವೈರಸ್ ಸೋಂಕು ಕಾಡಲಿದೆ ಎಂದು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ನಿರ್ದೇಶಲ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.

Recommended Video

ದಾರಿ ತೋರಿದ ಗುರುವಿಗೆ ನಮನ | Happy teachers day | Oneindia Kannada

ಕೋವಿಡ್-19ರ ನಿರ್ವಹಣೆಗಾಗಿ ಕೇಂದ್ರ ಸರ್ಕಾರದ ವಿಶೇಷ ಕಾರ್ಯಪಡೆಯ ಮುಖ್ಯ ಸದಸ್ಯರಾಗಿರುವ ಡಾ. ರಣದೀಪ್, ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಹರಡುವಿಕೆ ಹಂತ ಹಂತವಾಗಿ ಕಡಿಮೆಯಾಗುವ ಮುನ್ನ, ಇನ್ನೂ ಹಲವು ತಿಂಗಳು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಹೋಗಲಿದೆ. ಭಾರತದಲ್ಲಿ ಎರಡನೆಯ ಹಂತದ ಸಾಂಕ್ರಾಮಿಕತೆ ಕಾಣಿಸುತ್ತಿದೆ ಎಂದಿದ್ದಾರೆ.

ರಷ್ಯಾದ ಸ್ಪುಟ್ನಿಕ್ 5 ಲಸಿಕೆ ಪರಿಣಾಮಕಾರಿ: ಭಾರತದ ಅಭಿಪ್ರಾಯರಷ್ಯಾದ ಸ್ಪುಟ್ನಿಕ್ 5 ಲಸಿಕೆ ಪರಿಣಾಮಕಾರಿ: ಭಾರತದ ಅಭಿಪ್ರಾಯ

2021ರಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಇರುವುದಿಲ್ಲ ಎಂದು ನಾವು ಹೇಳಲಾಗದು. ಆದರೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಬದಲು ಅದರ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಬಹುದು. ಮುಂದಿನ ವರ್ಷದ ಆರಂಭದಲ್ಲಿ ಕೊರೊನಾ ವೈರಸ್ ಸೋಂಕು ಅಂತ್ಯಗೊಳ್ಳಲಿದೆ ಎಂದು ನಾವು ಹೇಳುವಂತಾಗಬೇಕು ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಮೂರು ಲಸಿಕೆ ಸೇರಿದಂತೆ ಜಗತ್ತಿನಾದ್ಯಂತ ಅಪಾರ ಪ್ರಮಾಣದ ಲಸಿಕೆಗಳು ಸಿದ್ಧವಾಗುತ್ತಿವೆ. ಇವೆಲ್ಲವೂ ಅಭಿವೃದ್ಧಿಯ ಉನ್ನತ ಹಂತದಲ್ಲಿವೆ. ಆದರೆ ಇದರಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಿರುವುದು ಯಾವುದೇ ಲಸಿಕೆ ಸುರಕ್ಷಿತವಾಗಿರಬೇಕು ಎನ್ನುವುದು ಎಂದು ಹೇಳಿದ್ದಾರೆ. ಮುಂದೆ ಓದಿ.

ದೊಡ್ಡ ಪ್ರಮಾಣದ ಪ್ರಯೋಗ ನಡೆಸಬೇಕು

ದೊಡ್ಡ ಪ್ರಮಾಣದ ಪ್ರಯೋಗ ನಡೆಸಬೇಕು

ರಷ್ಯಾದ ಸ್ಪುಟ್ನಿಕ್ V ಲಸಿಕೆಯ ಕುರಿತಾದ ಅಧ್ಯಯನ ವರದಿ ನೋಡಿ, ಅದರಲ್ಲಿ ಬಳಸಿರುವ ಸ್ಯಾಂಪಲ್ ಬಹಳ ಚಿಕ್ಕದು. ರಷ್ಯಾದ ಸಂಶೋಧಕರು ಅಲ್ಪ ಸಂಖ್ಯೆಯ ಸ್ವಯಂಸೇವಕರ ಮೇಲೆ ಪ್ರಯೋಗ ನಡೆಸಿದ್ದಾರೆ. ಅವರಲ್ಲಿ ಸಣ್ಣ ಪುಟ್ಟ ಅಡ್ಡಪರಿಣಾಮಗಳೊಂದಿಗೆ ಲಸಿಕೆ ಆಂಟಿಬಾಡಿಗಳನ್ನು ಅಭಿವೃದ್ಧಿಪಡಿಸಿರುವುದು ಗೊತ್ತಾಗಿದೆ. ಕೋವಿಡ್-19ರ ವಿರುದ್ಧ ನಮ್ಮ ಬಳಿ ಲಸಿಕೆ ಇದೆ ಎಂದು ಘೋಷಿಸುವ ಮುನ್ನ ನಾವು ಮೂರನೇ ಹಂತದ ಪ್ರಯೋಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಯೋಗಗಳನ್ನು ನಡೆಸಬೇಕು ಎಂದು ಹೇಳಿದ್ದಾರೆ.

ಲಸಿಕೆ ಉತ್ಪಾದನೆಗೆ ಸಮಯ ಬೇಕು

ಲಸಿಕೆ ಉತ್ಪಾದನೆಗೆ ಸಮಯ ಬೇಕು

ಸಾರ್ವತ್ರಿಕ ಲಸಿಕೆಗಳ ನೀಡುವಿಕೆಗೆ ಹೆಚ್ಚು ಸಮಯ ಬೇಕಾಗುತ್ತದೆ. ಸಾರ್ವತ್ರಿಕ ಲಸಿಕೆ ನೀಡುವಿಕೆಯನ್ನು ಸಾಧಿಸಲು ಕೋಟ್ಯಂತರ ಡೋಸ್‌ಗಳು ಬೇಕಾಗುತ್ತವೆ. ಅವುಗಳ ಉತ್ಪಾದನೆಗೆ ಹೆಚ್ಚು ಸಮಯ ತಗುಲುತ್ತದೆ. ಉತ್ಪಾದನೆಯಾದ ಬಳಿಕವೂ ಜಾಗತಿಕವಾಗಿ ಲಸಿಕೆಗಳನ್ನು ಹಂಚಲಾಗುತ್ತಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಮತ್ತು ಯಾವ ದೇಶಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬುದನ್ನು ಪರಿಗಣಿಸಬೇಕು.

4 ಮಿಲಿಯನ್‌ ದಾಟಿದ ಭಾರತದ ಕೋವಿಡ್ ಸೋಂಕಿತರ ಸಂಖ್ಯೆ4 ಮಿಲಿಯನ್‌ ದಾಟಿದ ಭಾರತದ ಕೋವಿಡ್ ಸೋಂಕಿತರ ಸಂಖ್ಯೆ

ಮಾಸ್ಕ್ ಧರಿಸುವ ವ್ಯವಸ್ಥೆ ಬೇಕು

ಮಾಸ್ಕ್ ಧರಿಸುವ ವ್ಯವಸ್ಥೆ ಬೇಕು

ಜನರು ಮಾಸ್ಕ್‌ಗಳನ್ನು ಸರಿಯಾಗಿ ಧರಿಸುವಂತೆ ಮಾಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಅದನ್ನು ನಿರ್ಧರಿಸಬೇಕು. ನೀವು ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡರೆ ಗ್ಲೌಸ್‌ಗಳನ್ನು ಧರಿಸುವ ಅಗತ್ಯವಿರುವುದಿಲ್ಲ. ಗ್ಲೌಸ್ ಧರಿಸಿದರೂ ಅವುಗಳನ್ನು ಕೂಡ ಸ್ಯಾನಿಟೈಸ್ ಮಾಡಬೇಕು.

ಗುಂಪುಗೂಡುವುದರಿಂದ ದೂರವಿರಿ

ಗುಂಪುಗೂಡುವುದರಿಂದ ದೂರವಿರಿ

ಮೆಟ್ರೋಗಳ ಓಡಾಟದಲ್ಲಿಯೂ ಬಹಳ ಎಚ್ಚರಿಕೆ ಅಗತ್ಯ. ಬಾರ್, ಪಬ್ ಮತ್ತು ರೆಸ್ಟೋರೆಂಟ್‌ಗಳು ಸಾಮಾಜಿಕ ಅಂತರದ ಬಗ್ಗೆ ಎಚ್ಚರ ವಹಿಸಬೇಕು. ಸಣ್ಣ ಪ್ರಮಾಣದಲ್ಲಿ ಗುಂಪುಗೂಡುವುದು ಈಗಲೂ ಅಪಾಯಕಾರಿ. ಏಕೆಂದರೆ ಎಷ್ಟೋ ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇದ್ದರೂ ಲಕ್ಷಣಗಳಿರುವುದಿಲ್ಲ. ಸಣ್ಣ ಪಾರ್ಟಿಗಳಲ್ಲಿ ಭಾಗವಹಿಸಿದ ಜನರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದ ಉದಾಹರಣೆಗಳಿವೆ. ಕೋವಿಡ್ 19 ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಜನರು ಗುಂಪುಗೂಡುವುದರಿಂದ ಆದಷ್ಟು ದೂರವೇ ಇರಬೇಕು.

ಅಸ್ಸಾಂನಲ್ಲಿ ಶಾಲಾ-ಕಾಲೇಜುಗಳಲ್ಲಿ ಆನ್ ಲೈನ್ ತರಗತಿಗೆ ಅವಕಾಶಅಸ್ಸಾಂನಲ್ಲಿ ಶಾಲಾ-ಕಾಲೇಜುಗಳಲ್ಲಿ ಆನ್ ಲೈನ್ ತರಗತಿಗೆ ಅವಕಾಶ

ಶಾಲೆ ತೆರೆಯುವುದು ಬೇಡ

ಶಾಲೆ ತೆರೆಯುವುದು ಬೇಡ

ಪ್ರತಿ ಪ್ರದೇಶದಲ್ಲಿಯೂ ಗಣನೀಯ ಪ್ರಮಾಣದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗದೆ ಶಾಲೆಗಳನ್ನು ತೆರೆಯುವುದು ಸರಿಯಾದ ಕ್ರಮವಲಲ್. ನಾವು ಇನ್ನೂ ಅಂತಹ ಸ್ಥಿತಿಗೆ ತಲುಪಿಲ್ಲ. ಸಣ್ಣ ಮಕ್ಕಳಲ್ಲಿ ಮಾಸ್ಕ್ ಧರಿಸುವ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕೆಲಸಗಳನ್ನು ನಿರೀಕ್ಷಿಸಲಾಗದು. ಅವರು ಸೋಂಕಿಗೆ ಒಳಗಾಗಬಹುದು ಮತ್ತು ಅದನ್ನು ಮನೆಗೆ ಕೊಂಡೊಯ್ದು ಹಿರಿಯರಿಗೂ ಹರಡಬಹುದು. ಶಾಲೆಗಳನ್ನು ತೆರೆಯಲು ಇನ್ನೂ ಕಾಯುವುದು ಒಳಿತು ಎಂದು ಅವರು ಸಲಹೆ ನೀಡಿದ್ದಾರೆ.

English summary
AIIMS director Randeep Guleria said that, the Covid-19 pandemic is likely to spillover to 2021 and continue for some months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X