• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಹುಲ್‌ ಗಾಂಧಿ ಎಂ. ಫಿಲ್ ಗುಟ್ಟು ರಟ್ಟು!

By Srinath
|

ನವದೆಹಲಿ, ಜ. 29- ಎಐಸಿಸಿ ಉಪಾಧ್ಯಕ್ಷ, ಕಾಂಗ್ರೆಸ್ ಪಕ್ಷದ ಚುನಾವಣಾ ಸಾರಥಿ ರಾಹುಲ್‌ ಗಾಂಧಿ ಅವರು ಮೊನ್ನೆ 'ಟೈಮ್ಸ್ ನೌ' ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಪ್ರಶ್ನೆಗಳು ತೂರಿಬಂದಿದ್ದವು.

'ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಸುಬ್ರಮಣ್ಯ ಸ್ವಾಮಿ ಅವರು ಬ್ರಿಟನ್ನಿನಲ್ಲಿ ತಾವು ಗಳಿಸಿರುವ ಶೈಕ್ಷಣಿಕ ಪದವಿಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರಲ್ಲಾ?' ಎಂದು ಸಂದರ್ಶಕ ಆರ್ನಬ್ ಗೋಸ್ವಾಮಿ ಅವರು ರಾಹುಲ್‌ ಗಾಂಧಿಗೆ ನೇರ ಪ್ರಶ್ನೆ ಹಾಕಿದ್ದರು. ಅದಕ್ಕೆ ಉತ್ತರಿಸುವ ನೆಪದಲ್ಲಿ ರಾಹುಲ್‌ ಗಾಂಧಿ ಅವರು ಸಂದರ್ಶಕ ಆರ್ನಬ್ ಅವರ ಶೈಕ್ಷಣಿಕ ಅರ್ಹತೆಯನ್ನೇ ಪ್ರಶ್ನಿಸಿದ್ದರು.

ಅದೆಲ್ಲಾ ಒತ್ತಟ್ಟಿಗಿರಲಿ, ರಾಹುಲ್‌ ಗಾಂಧಿ ಎಂ. ಫಿಲ್ ಮಾಡಿರುವುದರ ಕುರಿತಾದ ವಾಸ್ತವವೇನು ಎಂಬುದರ ಮೇಲೆ 'ಇಂಡಿಯನ್ ಎಕ್ಸ್ ಪ್ರೆಸ್' ಆಂಗ್ಲಪತ್ರಿಕೆ ಕ್ಷಕಿರಣ ಬೀರಿದೆ. 2009ರ ಏಪ್ರಿಲ್ ತಿಂಗಳಲ್ಲೇ ಪತ್ರಿಕೆ ಈ ಬಗ್ಗೆ ವರದಿ ಮಾಡಿತ್ತು. ಜತಗೆ ಸೋನಿಯಾರ ಶಿಕ್ಷಣದ ಬಗ್ಗೆ ಎದ್ದಿದ್ದ ವಿವಾದ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ವಿವರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

ರಾಹುಲ್‌ ಗಾಂಧಿ MPhil ಸ್ನಾತಕೋತ್ತರ ಪದವಿ

ರಾಹುಲ್‌ ಗಾಂಧಿ MPhil ಸ್ನಾತಕೋತ್ತರ ಪದವಿ

ರಾಹುಲ್‌ ಗಾಂಧಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ affidavit ಪ್ರಕಾರ United Kingdom University of Cambridge Trinity Collegeನಲ್ಲಿ 1995ರಲ್ಲಿ Developmental Economics ವಿಷಯದಲ್ಲಿ MPhil ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಘೋಷಿಸಿಕೊಂಡಿದ್ದರು. ಈ ಸಂಬಂಧ ರಾಹುಲ್‌ ಗಾಂಧಿ ಅವರಿಗೆ ಕೇಂಬ್ರಿಡ್ಜ್ ಟ್ರಿನಿಟಿ ಕಾಲೇಜ್ ನೀಡಿದ್ದ ಎಂ.ಫಿಲ್ ಪದವಿ ಪ್ರಮಾಣ ಪತ್ರವನ್ನೂ ದಾಖಲಿಸಿದ್ದರು.

ಕೋರ್ಸ್ ವಿಷಯದ ಹೆಸರೂ ಸಹ ಬೇರೆಯದ್ದೇ

ಕೋರ್ಸ್ ವಿಷಯದ ಹೆಸರೂ ಸಹ ಬೇರೆಯದ್ದೇ

ಆದರೆ ಅದನ್ನು ತಾಳೆ ಹಾಕಿ ನೋಡಿದಾಗ ರಾಹುಲ್ ಅಫಿಡವಿಟ್ ನಲ್ಲಿರುವ ದಿನಾಂಕವೇ ಬೇರೆ ಪದವಿ ಪತ್ರದಲ್ಲಿನ ದಿನಾಂಕವೇ ಬೇರೆಯಾಗಿದೆ. ಜತೆಗೆ, ಕೋರ್ಸ್ ವಿಷಯದ ಹೆಸರೂ ಸಹ ಬೇರೆಯದ್ದೇ ಆಗಿದೆ. ಇನ್ನೂ ಬೇಸರದ ಸಂಗತಿಯೆಂದರೆ ಭಾರತದ ಭವಿಷ್ಯದ ಪ್ರಧಾನ ಮಂತ್ರಿ ಎಂದೇ ಬಿಂಬಿಸಲಾಗಿರುವ ವ್ಯಕ್ತಿ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ!

ರಾಹುಲ್‌ ಗಾಂಧಿ ನಾಲ್ಕು ಸಬ್ಜೆಕ್ಟುಗಳಲ್ಲಿ ಫೇಲ್

ರಾಹುಲ್‌ ಗಾಂಧಿ ನಾಲ್ಕು ಸಬ್ಜೆಕ್ಟುಗಳಲ್ಲಿ ಫೇಲ್

* National Economic Planning and Policy ವಿಷಯದಲ್ಲಿ ರಾಹುಲ್ ಗಳಿಸಿರುವ ಅಂಕ ಶೇ. 58. ಆದರೆ ತೇರ್ಗಡೆ ಹೊಂದಲು ಕನಿಷ್ಠ ಶೇ. 60ರಷ್ಟು ಅಂಕ ಗಳಿಸಲೇಬೇಕು.

ರಾಹುಲ್‌ ಗಾಂಧಿ ಹೆಸರು Raul Vinci

ರಾಹುಲ್‌ ಗಾಂಧಿ ಹೆಸರು Raul Vinci

* ಪದವಿ ಪತ್ರದಲ್ಲಿ Raul Vinci ಹೆಸರಿದೆ. ಅಂದರೆ ಕೇಂಬ್ರಿಡ್ಜ್ ಟ್ರಿನಿಟಿ ಕಾಲೇಜಿನಲ್ಲಿ VVIP ಮಕ್ಕಳೇ ವ್ಯಾಸಂಗ ಮಾಡುವುದರಿಂದ ಅವರ ನಜ ನಾಮಧೇಯ ಮರೆಮಾಚಿ ಬೇರೆಯದ್ದೇ ಹೆಸರು ನೀಡಲಾಗುತ್ತದೆ. ಹಾಗಾಗಿ ಇಲ್ಲಿಯೂ Raul Vinci ಹೆಸರಿನಲ್ಲಿ ರಾಹುಲ್‌ ಗಾಂಧಿಗೆ ಪದವಿ ಪ್ರಮಾಣ ಪತ್ರ ನೀಡಲಾಗಿದೆ.

ರಾಹುಲ್‌ ಗಾಂಧಿ ಎಂ. ಫಿಲ್ ಇಸವೀಗಳೇ ಬದಲು

ರಾಹುಲ್‌ ಗಾಂಧಿ ಎಂ. ಫಿಲ್ ಇಸವೀಗಳೇ ಬದಲು

* ಅಷ್ಟಕ್ಕೂ ರಾಹುಲ್ ಇಂಗ್ಲೆಂಡಿನ ಕೇಂಬ್ರಿಡ್ಜ್ ಟ್ರಿನಿಟಿ ಕಾಲೇಜಿನಲ್ಲಿ ಎಂ.ಫಿಲ್ ಓದಿದ್ದು 2004- 05ನೇ ಸಾಲಿನಲ್ಲಿ. ಆದರೆ ಅಫಿಡವಿಟ್ ನಲ್ಲಿ ರಾಹುಲ್ ಗಾಂಧಿ ಹೇಳಿರುವುದು 1994-95 ರಲ್ಲಿ ಎಂದು!

 ರಾಹುಲ್ ಗಾಂಧಿ ಹಾರ್ವರ್ಡ್ returned ಅಲ್ಲ

ರಾಹುಲ್ ಗಾಂಧಿ ಹಾರ್ವರ್ಡ್ returned ಅಲ್ಲ

ಇದರ ಹೊರತಾಗಿ ರಾಹುಲ್ ಶಿಕ್ಷಣದ ಬಗ್ಗೆ ಹೇಳುವುದಾರೆ ಅವರು ಅಮೆರಿಕದ ಫ್ಲೋರಿಡಾದಲ್ಲಿರುವ Rollins Collegeನಲ್ಲಿ ಪದವಿ ಪಡೆದಿದ್ದಾರೆ. ಆದರೆ ಅವರ ಬೆಂಬಲಿಗರು ರಾಹುಲ್ ಗಾಂಧಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರು! ಇನ್ನು ದಿಲ್ಲಿಯಲ್ಲಿರುವ St Stephen's Collegeಗೆ ಕ್ರೀಡಾ ಕೋಟಾದಲ್ಲಿ ಪ್ರವೇಶ ಗಿಟ್ಟಿಸಿದ್ದರು.

ಸೋನಿಯಾ ಗಾಂಧಿ ಟೈಪಿಂಗ್ ಮಿಸ್ಟೇಕು

ಸೋನಿಯಾ ಗಾಂಧಿ ಟೈಪಿಂಗ್ ಮಿಸ್ಟೇಕು

ಇನ್ನು ರಾಹುಲ್ ಅವರ ಹೆತ್ತಮ್ಮ ಸೋನಿಯಾ ಗಾಂಧಿ (ಹಾಲಿ ಕಾಂಗ್ರೆಸ್ ಅಧ್ಯಕ್ಷೆ) ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆಯೂ 2004ರಲ್ಲಿ ವಿವಾದದ ಬಿರುಗಾಳಿ ಎದ್ದಿತ್ತು. ಸೋನಿಯಾ ತಾವು ಸಲ್ಲಿಸಿದ್ದ ಅಫಿಡವಿಟ್ ನಲ್ಲಿ University of Cambridge - Lennox Cook School ನಲ್ಲಿ ಆಂಗ್ಲ ಭಾಷೆಯಲ್ಲಿ 1965ರಲ್ಲಿ ಪದವಿ ಪಡೆದಿದ್ದಾಗಿ ಹೇಳಿಕೊಂಡಿದ್ದರು. ಆದರೆ Lennox Cook Schoolಯು ಸದರಿ ವಿಶ್ವವಿದ್ಯಾಲಯಕ್ಕೆ ಸೇರಿದ್ದಲ್ಲ ಎಂಬ ವಿಷಯ ಬಹಿರಂಗವಾದಾಗ ತಮ್ಮ ಆಪ್ತ ಸಹಾಯಕ ಟೈಪಿಂಗ್ ಮಾಡುವಾಗ ತಪ್ಪಾಗಿ ಕೀ ಮಾಡಿದ್ದಾನೆ ಎಂದು ಸಬೂಬು ಹೇಳಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha Election 2014 - Times Now editor in chief Arnab Goswami had an interview with AICC Vice President Rahul Gandhi for the first time on Jan 27. Congress vice-president and poll campaign chief Rahul Gandhi was asked about his educational credentials. Here is more info.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more