ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಲಿಕಾರ್ಜುನ ಖರ್ಗೆರಿಗೆ ಒಲಿಯುತ್ತಾ ಎಐಸಿಸಿ ಅಧ್ಯಕ್ಷೀಯ ಪಟ್ಟ?

|
Google Oneindia Kannada News

ನವದೆಹಲಿ, ಆಗಸ್ಟ್.23: ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷ ಗಾದಿಯಲ್ಲಿ ಯಾರನ್ನು ಕೂರಿಸುವುದು ಎನ್ನುವ ಬಗ್ಗೆ ತೀವ್ರ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಮಧ್ಯಂತರ ಅಧ್ಯಕ್ಷೆ ಆಗಿರುವ ಸೋನಿಯಾ ಗಾಂಧಿ ಅವರ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ.
ಕಾಂಗ್ರೆಸ್ ಪಕ್ಷವನ್ನು ಹೈಕಮಾಂಡ್ ಮಟ್ಟದಲ್ಲಿ ಯಾರು ಮುನ್ನೆಡೆಸಬೇಕು ಎನ್ನುವುದರ ಬಗ್ಗೆ ಚರ್ಚಿಸಲು ಸೋಮವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ. ನವದೆಹಲಿಯ ಪಕ್ಷದ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ವೆಬೆಕ್ಸ್ ಆ್ಯಪ್ ಮೂಲಕ ಸಿಡಬ್ಲ್ಯುಸಿ ಸಭೆಯನ್ನು ನಡೆಸಲಾಗುತ್ತಿದೆ.

ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತೆ ರಾಹುಲ್ ಗಾಂಧಿ? CWC ಕುತೂಹಲಕಾರಿ
ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಗಾಂಧಿಯೇತರ ಕುಟುಂಬದವರಿಗೆ ನೀಡಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದೆ. ಸೋನಿಯಾ ಗಾಂಧಿ ಹೊರತಾಗಿ ಯಾವ ನಾಯಕರನ್ನು ಪಟ್ಟಕ್ಕೇರಿಸಬೇಕು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಎಐಸಿಸಿ ಅಧ್ಯಕ್ಷರ ಪಟ್ಟದ ರೇಸ್ ನಲ್ಲಿ ಇರುವ ನಾಯಕರು ಯಾರು, ಅವರ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಗಳೇನು ಎನ್ನುವುದರ ಕುರಿತು ಇನ್ ಸೈಡ್ ರಿಪೋರ್ಟ್ ಇಲ್ಲಿದೆ.

ಪಕ್ಷ ಸಂಘಟನೆ ದೃಷ್ಟಿಯಿಂದ ನಾಯಕತ್ವ ಬದಲಾವಣೆ

ಪಕ್ಷ ಸಂಘಟನೆ ದೃಷ್ಟಿಯಿಂದ ನಾಯಕತ್ವ ಬದಲಾವಣೆ

ಎಐಸಿಸಿ ಮಧ್ಯಂತರ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ಅವರಿಗೆ ಪದೇ ಪದೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಅಧ್ಯಕ್ಷ ಸ್ಥಾನದಿಂದ ಸೋನಿಯಾ ಗಾಂಧಿಯವರು ಕೆಳಗಿಳಿಯುತ್ತಾರಾ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷ ಸಂಘಟನೆ ಮೇಲೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ನಾಯಕತ್ವವನ್ನು ಬದಲಾಯಿಸಲು ಚಿಂತನೆ ನಡೆಸಲಾಗುತ್ತಿದೆ. ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಸೋನಿಯಾ ಗಾಂಧಿ ಮುಂದುವರಿಕೆಗೆ ಹಲವು ನಾಯಕರ ಒತ್ತಡ ಹೇರುತ್ತಿದ್ದಾರೆ. ಆದರೆ ಸುತಾರಾಂ ಅಧ್ಯಕ್ಷೆಯಾಗಿ ಮುಂದುವರಿಯಲ್ಲವೆಂದಿರುವ ಸೋನಿಯಾ ಗಾಂಧಿಯವರೇ ಸ್ಪಷ್ಟವಾಗಿ ಹೇಳಿದ್ದಾರೆ.

ಅಧ್ಯಕ್ಷಗಿರಿ ರೇಸ್ ನಲ್ಲಿರುವ ನಾಯಕರು ಯಾರ್ಯಾರು?

ಅಧ್ಯಕ್ಷಗಿರಿ ರೇಸ್ ನಲ್ಲಿರುವ ನಾಯಕರು ಯಾರ್ಯಾರು?

ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್, ಪ್ರಿಯಾಂಕಾ ಗಾಂಧಿ ಹೆಸರು ಮುಂಚೂಣಿಯಲ್ಲಿದೆ. ರಾಹುಲ್ ಗಾಂಧಿಯವರೇ ಅಧ್ಯಕ್ಷರಾಗಬೇಕೆಂದು ಕೆಲವರ ಒತ್ತಡ ಹೇರುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಉತ್ತಮವೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅಶೋಕ್ ಗೆಹ್ಲೋಟ್ ರಿಗೆ ಸ್ಥಾನ ಕೊಡಿಸಲು ಉತ್ತರದವರು ಲಾಬಿ ನಡೆಸುತ್ತಿದ್ದಾರೆ. ಇನ್ನೊಂದೆಡೆ ಪ್ರಿಯಾಂಕಾ ಗಾಂಧಿಯವರ ಬಗ್ಗೆ ಹಿರಿಯರು, ಯೂತ್ ಮುಖಂಡರ ಒಲವು ತೋರಿದ್ದಾರೆ.

ಎಐಸಿಸಿ ಗದ್ದುಗೆ ಏರಲು ರಾಹುಲ್, ಪ್ರಿಯಾಂಕಾ ಹಿಂದೇಟು

ಎಐಸಿಸಿ ಗದ್ದುಗೆ ಏರಲು ರಾಹುಲ್, ಪ್ರಿಯಾಂಕಾ ಹಿಂದೇಟು

ನಾಲ್ಕು ಹೆಸರುಗಳ ಬಗ್ಗೆ ಸೋನಿಯಾ ಗಾಂಧಿಯವರಿಗೆ ಹಿರಿಯ ನಾಯಕರು ಮನವರಿಕೆ ಮಾಡಿ ಕೊಡುತ್ತಿದ್ದಾರೆ. ಆದರೆ ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ಏರಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಗಾಂಧಿ ಫ್ಯಾಮಿಲಿಗೆ ಬೇಡ, ಬೇರೆಯವರಿಗೆ ನೀಡಿ ಎಂದು ತಾಯಿಯ ಬಳಿ ಇಬ್ಬರು ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಲ್ಲಿಕಾರ್ಜುನ ಖರ್ಗೆಯವರಿಗೆ ಒಲಿಯುತ್ತಾ ಕುರ್ಚಿ?

ಮಲ್ಲಿಕಾರ್ಜುನ ಖರ್ಗೆಯವರಿಗೆ ಒಲಿಯುತ್ತಾ ಕುರ್ಚಿ?

ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಹಿರಿಯ ನಾಯಕರು ಎನಿಸಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡುವಂತೆ ಹಲವು ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ದಲಿತರು, ಹಿಂದಿಯಲ್ಲಿನ ಪ್ರಭುತ್ವ, ಉತ್ತಮ ಸಂಸದೀಯ ಪಟು ಎಂದು ಖರ್ಗೆ ಪರ ನಾಯಕರು ಬ್ಯಾಟಿಂಗ್ ಶುರು ಮಾಡಿದ್ದಾರೆ. ಒಂದು ವೇಳೆ ಖರ್ಗೆಯವರಿಗೆ ಪಕ್ಷದ ಚುಕ್ಕಾಣಿ ಕೊಟ್ಟರೆ ದಕ್ಷಿಣ ಭಾರತದಲ್ಲಿ ಪಕ್ಷ ಸಂಘಟನೆಯ ಗುರಿ ಮತ್ತಷ್ಟು ಬಲಿಷ್ಟವಾಗಲಿದೆ ಎಂದು ನಾಯಕರು ಪ್ರತಿಪಾದಿಸಿದ್ದಾರೆ.

ಅಶೋಕ್ ಗೆಹ್ಲೋಟ್ ಪರ ಉತ್ತರ ಭಾರತೀಯರ ಬ್ಯಾಟಿಂಗ್

ಅಶೋಕ್ ಗೆಹ್ಲೋಟ್ ಪರ ಉತ್ತರ ಭಾರತೀಯರ ಬ್ಯಾಟಿಂಗ್

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ನರೇಂದ್ರ ಮೋದಿಯವರಂತೆ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಅಸಮಾಧಾನ ಇರುವುದಿಲ್ಲ. ಖರ್ಗೆಯವರಿಗೆ ಕೊಟ್ಟಲ್ಲಿ ಉತ್ತರ ಭಾರತೀಯರನ್ನು ಕಡೆಗಣಿಸಿದಂತೆ ಆಗುತ್ತದೆ. ಇದು ಪಕ್ಷ ಸಂಘಟನೆಯ‌ ಮೇಲೆ ಹೆಚ್ಚಿನ ಹೊಡೆತ ಬೀಳುತ್ತದೆ. ಗೆಹ್ಲೋಟ್ ರಿಗೆ ನೀಡಿದ್ದಲ್ಲಿ ದಶಕಗಳ ರಾಜಕೀಯ ಅನುಭವವಿದೆ. ಮೇಲಾಗಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಕಸುಬುದಾರಿಕೆಯಿದೆ. ಪಕ್ಷಕ್ಕೆ ಫಂಡ್ ರೈಸ್ ಮಾಡುವ ಕಲೆ ಗರತವಾಗಿದೆ. ಹೀಗಾಗಿ‌ ಅಶೋಕ್ ಗೆಹ್ಲೋಟ್ ರಿಗೆ ಅಧ್ಯಕ್ಷ ಸ್ಥಾನ ನೀಡಿದ್ದಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರಬಹುದು ಎಂದು ಉತ್ತರ ಭಾರತದ ನಾಯಕರು ಸೋನಿಯಾ ಗಾಂಧಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

English summary
Ahead CWC Meeting On Monday: Which Four Leaders Listed In AICC President Race
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X