• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಗಸ್ಟಾ ಹಗರಣ: ಸೋನಿಯಾ ಬಯಕೆಯಂತೆ ಹೆಲಿಕಾಪ್ಟರ್ ಖರೀದಿ ಒಪ್ಪಂದ?

|

ನವದೆಹಲಿ, ಡಿಸೆಂಬರ್ 15: ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅತಿ ಗಣ್ಯರ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸೂಚನೆಯಂತೆಯೇ ವ್ಯವಹಾರ ನಡೆದಿತ್ತು ಎಂದು ಪ್ರಕರಣದ ಆರೋಪಿ ಕ್ರಿಶ್ಚಿಯನ್ ಮೈಕಲ್ ಉಲ್ಲೇಖಿಸಿರಬಹುದು ಎಂಬುದಾಗಿ ಮೈಕಲ್ ವಕೀಲ ರೇಸ್‌ಮೇರಿ ಪ್ಯಾಟ್ರಿಜಿ ಹೇಳಿದ್ದಾರೆ.

ಅಗಸ್ಟಾವೆಸ್ಟ್ ಲ್ಯಾಂಡ್ : ಮೈಕೆಲ್ ಭೇಟಿಗೆ ವಕೀಲೆಗೆ ಅನುಮತಿ ಇಲ್ಲ

ಆಗ ಯುಪಿಎ ಅವಧಿಯಲ್ಲಿ ಸೋನಿಯಾ ಗಾಂಧಿ ಯಾವ ಸ್ಥಾನದಲ್ಲಿದ್ದರು ಎಂಬುದು ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ.

ತಮ್ಮ ಕಕ್ಷಿದಾರನ ಮಾನವಹಕ್ಕುಗಳ ಪರವಾಗಿ ವಾದಿಸಲು ಭಾರತಕ್ಕೆ ಬಂದಿರುವ ಪ್ಯಾಟ್ರಿಜಿ, ಕ್ರಿಶ್ಚಿಯನ್ ಮೈಕಲ್‌ನ ತಂದೆ ವೋಲ್ಫ್‌ಗ್ಯಾಂಗ್ ಮೈಕಲ್, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಸ್ನೇಹಿತರಾಗಿದ್ದರು ಎಂಬ ವರದಿಯನ್ನು ಅಲ್ಲಗಳೆದಿದ್ದಾರೆ.

'ಕ್ರಿಶ್ಚಿಯನ್‌ಗೂ ಆತನ ತಂದೆಗೂ ಉತ್ತಮ ಸಂಬಂಧವಿರಲಿಲ್ಲ. ವೋಲ್ಫ್‌ಗ್ಯಾಂಗ್ ಅವರ ಸ್ನೇಹಿತರಾಗಿದ್ದರು, ಹೀಗಾಗಿ ಕ್ರಿಶ್ಚಿಯನ್ ಕೂಡ ಅವರ ಸ್ನೇಹಿತ ಎನ್ನುವುದು ಸರಿಯಲ್ಲ. ಇದು ಇಲ್ಲಿ ಮುಖ್ಯವೂ ಅಲ್ಲ. ಕ್ರಿಶ್ಚಿಯನ್ ತಂದೆ ವಿಭಿನ್ನ ದೃಷ್ಟಿಕೋನ ಹೊಂದಿದ್ದವರು. ಕ್ರಿಶ್ಚಿಯನ್ ಅಮಾಯಕ. ಮಿಲನ್ ನ್ಯಾಯಾಲಯದಲ್ಲಿ ಆತನ ವಿರುದ್ಧ ಯಾವುದೇ ಸಾಕ್ಷ್ಯ ಲಭ್ಯವಾಗಿರಲಿಲ್ಲ. ಜಗತ್ತಿನ ಕೊನೆಯವರೆಗೂ ಆತನ ಪರವಾಗಿ ನಾನು ಹೋರಾಟ ನಡೆಸುತ್ತೇನೆ' ಎಂದು ಪ್ಯಾಟ್ರಿಜಿ ಹೇಳಿದ್ದಾರೆ.

2008ರ ಮಾರ್ಚ್ 15ರಂದು ಅಗಸ್ಟಾ ವೆಸ್ಟ್ ಲ್ಯಾಂಡ್‌ನ ಭಾರತದ ಪ್ರಾದೇಶಿಕ ಮಾರಾಟ ಮತ್ತು ವ್ಯವಹಾರದ ಮುಖ್ಯಸ್ಥನಾಗಿದ್ದ ಪೀಟರ್ ಹೆಡ್‌ಗೆ ಕ್ರಿಶ್ಚಿಯನ್ ಮೈಕಲ್ ಪತ್ರ ಬರೆದಿದ್ದ.

ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು?

ಆ ಪತ್ರದಲ್ಲಿ, 'ಆತ್ಮೀಯ ಪೀಟರ್, ವಿಐಪಿಯ ಹಿಂದಿನ ಪ್ರೇರಣಾ ಶಕ್ತಿಯಾಗಿ ಸೋನಿಯಾ ಗಾಂಧಿ ಇರುವಾಗ ಅವರು ಎಂಐ8 ನಲ್ಲಿ ಇನ್ನು ಮುಂದೆ ಓಡಾಡುವುದಿಲ್ಲ, ಅವರ ಅತ್ಯಂತ ಆಪ್ತ ಸಲಹೆಗಾರರಾದ ಹೈ ಕಮಿಷನರ್, ಖಂಡಿತವಾಗಿಯೂ ಮುಖ್ಯ ವ್ಯಕ್ತಿಯಾದ ಮನಮೋಹನ್ ಸಿಂಗ್ ಮತ್ತು ಕಾರ್ಯದರ್ಶಿ ಅಹ್ಮದ್ ಪಟೇಲ್ ಕೂಡ' ಎಂದು ಬರೆಯಲಾಗಿತ್ತು.

ಈ ಪತ್ರದ ಬಗ್ಗೆ ರಿಪಬ್ಲಿಕ್ ವಾಹಿನಿಯೊಂದಿಗೆ ಮಾತನಾಡಿದ ಪ್ಯಾಟ್ರಿಜಿ, 'ಇಲ್ಲಿ ಸಾಮಾನ್ಯ ಮಾಹಿತಿ ಇದೆ. ಆಕೆ ಇನ್ನು ಮುಂದೆ ಈ ಯಾವುದೇ ಹೆಲಿಕಾಪ್ಟರ್‌ಗಳಲ್ಲಿ (ಎಂಐ8) ಓಡಾಡುವುದಿಲ್ಲ. ಈ ಕಾರಣದಿಂದಲೇ ಅವರು ಟೆಂಡರ್ ಕರೆದರು. ಅವರಿಗೆ ಸುರಕ್ಷಿತ ಹೆಲಿಕಾಪ್ಟರ್ ಬೇಕಿತ್ತು. ನನಗೆ ಗೊತ್ತು, ಅವರು ವಿವಿಐಪಿ ಹೆಲಿಕಾಪ್ಟರ್ ಬಯಸಿದ್ದರು. ಆ ಸಮಯಕ್ಕೆ ಯಾರು ಪ್ರಧಾನಿಯಾಗಿದ್ದರು ಎನ್ನುವುದು ನನಗೆ ತಿಳಿದಿಲ್ಲ. ಬಹುಶಃ ಮಿಸೆಸ್ ಗಾಂಧಿ ಇರಬೇಕು' ಎಂದಿದ್ದಾರೆ.

ಕ್ರಿಶ್ಚಿಯನ್ ಮೈಖೆಲ್ ಪರ ವಕೀಲಿಕೆ; ‌ಜೋಸೆಫ್ ಉಚ್ಚಾಟಿಸಿದ ಕಾಂಗ್ರೆಸ್

ವಿಚಾರಣೆಗೆ ಮೈಕಲ್ ಸಹಕರಿಸುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಸತ್ಯವಲ್ಲ. ಅವರು ಸಹಕರಿಸುತ್ತಿದ್ದಾರೆ. ತನಿಖಾ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಿಬಿಐ ಕಚೇರಿಯಲ್ಲಿ ನಡೆಯುತ್ತಿರುವ ವಿಚಾರಣೆ ಬಗ್ಗೆ ಅಸಮಾಧಾನವಿದೆ ಎಂದು ನ್ಯಾಯಾಲಯಕ್ಕೆ ತಿಳಿಸುತ್ತೇವೆ.

ಸತ್ಯವನ್ನು ಹೊರಕ್ಕೆ ಪಡೆಯಲು ಅನೇಕ ಮಾರ್ಗಗಳಿವೆ. ಆದರೆ, ಆ ಮಾರ್ಗಗಳಿಗೆ ಅನುಮತಿ ಇಲ್ಲ. ಅವರು ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಅವರನ್ನು ಇದರೊಳಗೆ ತಳ್ಳುತ್ತಿದ್ದಾರೆ. ಹೀಗಾಗಿ ನಾನು ಮಾನವ ಹಕ್ಕುಗಳ ಬಗ್ಗೆ ಮಾತನಾಡಲು ಇಲ್ಲಿದ್ದೇನೆ ಎಂದು ಹೇಳಿದ್ದಾರೆ.

English summary
AgustaWestland chopper scam accused christian michel in a letter wrote as Mrs Gandhi is the driving force behind the VIP, she will no longer fly with MI8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X