• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ರಿಶ್ಚಿಯನ್ ಮೈಕಲ್ ನ ಮತ್ತಷ್ಟು ವಿಚಾರಣೆಗೆ ಸಿಬಿಐ ಕೋರ್ಟ್ ಅನುಮತಿ

|

ನವದೆಹಲಿ, ಮಾರ್ಚ್ 13 : ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಬಂದಿಯಾಗಿರುವ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ನನ್ನು ಮತ್ತಷ್ಟು ವಿಚಾರಣೆಗೆ ಗುರಿಪಡಿಸಲು ಜಾರಿ ನಿರ್ದೇಶನಾಲಯಕ್ಕೆ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರು ಅನುಮತಿ ನೀಡಿದೆ.

ಈ ಕುರಿತು ಜಾರಿ ನಿರ್ದೇಶನಾಲಯ ಸೋಮವಾರವೇ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಬುಧವಾರ ಮತ್ತು ಗುರುವಾರ ಜಾರಿ ನಿರ್ದೇಶನಾಲಯ ಕ್ರಿಶ್ಚಿಯನ್ ಮೈಕಲ್ ನನ್ನು ಹೆಚ್ಚುವರಿ ವಿಚಾರಣೆಗೆ ಒಳಪಡಿಸಲಿದೆ. ಮುಂದಿನ ವಿಚಾರಣೆ ಮಾರ್ಚ್ 14ರಂದು ನಡೆಯಲಿದೆ.

ಯುಪಿಎ ಸರಕಾರವಿದ್ದಾಗ 2006 ಮತ್ತು 2007ರಲ್ಲಿ, ಇಂಗ್ಲೆಂಡ್ ಮೂಲಕ ಕ್ರಿಶ್ಚಿಯನ್ ಮೈಕಲ್, ಡೀಲ್ ಕುದುರಿಸಲು ಮತ್ತು ಭಾರತದ ರಾಜಕಾರಣಿಗಳಿಗೆ ಲಂಚ ನೀಡಲೆಂದು, ಇಟಲಿ ಮೂಲದ ಹೆಲಿಕಾಪ್ಟರ್ ತಯಾರಿಕಾ ಕಂಪನಿಯಿಂದ ಹಣ ಪಡೆದಿದ್ದ ಆರೋಪ ಎದುರಿಸುತ್ತಿದ್ದಾನೆ.

ಕಾಶ್ಮೀರಿ ಉಗ್ರರೊಂದಿಗೆ ಅಗಸ್ಟಾ ಆರೋಪಿ : ನ್ಯಾಯಾಧೀಶರಿಗೆ ಮೈಕಲ್ ಪತ್ರ

ಬಹುಕೋಟಿ ಮೌಲ್ಯಕ್ಕೆ 12 ವಿವಿಐಪಿ ಹೆಲಿಕಾಪ್ಟರ್ ಖರೀದಿಯ ವಿಷಯದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಅಂದಿನ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು 2013ರಲ್ಲಿಯೇ ಒಪ್ಪಿಕೊಂಡಿದ್ದರು. ನಂತರ 3,600 ಕೋಟಿ ರುಪಾಯಿ ಮೌಲ್ಯದ ಈ ವಹಿವಾಟನ್ನು ಕ್ಯಾನ್ಸಲ್ ಮಾಡಲು ಸರಕಾರ 2014ರ ಜನವರಿಯಲ್ಲಿ ನಿರ್ಧರಿಸಿತು.

ಕ್ರಿಶ್ಚಿಯನ್ ನಿಂದ ಕುಟುಂಬಕ್ಕೆ ಹಣ ಸಂದಾಯ! ಆ 'ಕುಟುಂಬ' ಯಾವುದು?

ಸ್ಥಳಾಂತರಿಸಲು ಮೈಕಲ್ ಪತ್ರ : ತಿಹಾರ್ ಜೈಲಿನಲ್ಲಿ ತಾನಿರುವ ವಾರ್ಡ್ 6ರಲ್ಲಿ ಹಲವಾರು ಕಾಶ್ಮೀರಿ ಉಗ್ರರು ಸೇರಿದಂತೆ 150ಕ್ಕೂ ಹೆಚ್ಚು ಆರೋಪಿಗಳಿದ್ದಾರೆ. ತನ್ನನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಕ್ರಿಶ್ಚಿಯನ್ ಮೈಕಲ್ ಪತ್ರ ಬರೆದಿದ್ದಾನೆ. ತನಗೆ ಜೈಲಿನಲ್ಲಿ ಚಿತ್ರಹಿಂಸೆಯನ್ನೂ ನೀಡಲಾಗಿದೆ ಎಂದು ಮೈಕಲ್ ಆರೋಪಿಸಿದ್ದಾನೆ.

ಸಿಬಿಐ ನ್ಯಾಯಾಲಯ ಈ ಪತ್ರವನ್ನು ಪರಿಗಣಿಸಿದ್ದು, ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಮಾಡಿರುವ ಆರೋಪಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಬೇಕೆಂದು ತಿಹಾರ್ ಜೈಲಿನ ಅಧಿಕಾರಿಗಳಿಗೆ ಆದೇಶಿಸಿದೆ. ಜೊತೆಗೆ, ಕಳೆದ 5 ದಿನಗಳ ಸಿಸಿಟಿವಿ ಕ್ಯಾಮೆರಾ ರೆಕಾರ್ಡಿಂಗ್ ಅನ್ನೂ ಕೋರ್ಟಿಗೆ ಸಲ್ಲಿಸಬೇಕೆಂದು ಆದೇಶಿಸಲಾಗಿದೆ.

English summary
CBI Court has allowed Enforcement Directorate to question alleged middleman Christian Michel further in AgustaWestland case, in Tihar Jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X