ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿನಲ್ಲೇ ಈಸ್ಟರ್: ಅಗಸ್ಟಾ ಆರೋಪಿ ಮೈಕಲ್‌ಗೆ ಜಾಮೀನು ನಿರಾಕರಣೆ

|
Google Oneindia Kannada News

ನವದೆಹಲಿ, ಏಪ್ರಿಲ್ 18: ಕುಟುಂಬದವರೊಂದಿಗೆ ಈಸ್ಟರ್ ಆಚರಿಸಬೇಕೆಂಬ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್‌ನ ಬಯಕೆ ಭಗ್ನಗೊಂಡಿದೆ.

ಈಸ್ಟರ್‌ಅನ್ನು ಕುಟುಂಬದವರ ಜತೆ ಆಚರಿಸಲು ಅವಕಾಶ ನೀಡುವಂತೆ ಕ್ರಿಶ್ಚಿಯನ್ ಮೈಕಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿಯ ನ್ಯಾಯಾಲಯವೊಂದು ಗುರುವಾರ ತಳ್ಳಿಹಾಕಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈಸ್ಟರ್‌ಗಾಗಿ ಏಳು ದಿನಗಳ ಮಧ್ಯಂತರ ಜಾಮೀನು ನೀಡುವಂತೆ ಮೈಕಲ್ ಕೋರಿದ್ದ. ಭಾರತದಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಅವುಗಳನ್ನು ಆಚರಿಸಲು ಆರೋಪಿ ವ್ಯಕ್ತಿಗಳಿಗೆ ಜೈಲಿನಿಂದ ಹೊರಗೆ ಹೋಗಲು ಅವಕಾಶ ನೀಡಲು ಸಾಧ್ಯವಾಗುವುದಿಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಮೈಕಲ್ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದವು.

agustawestland alleged middleman Christian michel interim bail plea rejected

ತಮ್ಮ ವಶದಲ್ಲಿಯೇ ಮೈಕಲ್ ಈಸ್ಟರ್ ಹಬ್ಬದಲ್ಲಿ ಪಾಲ್ಗೊಳ್ಳಬಹುದು ಎಂದು ಸಂಸ್ಥೆಗಳು ಹೇಳಿದವು.

ಒಂದು ವೇಳೆ ಮೈಕಲ್ ಮಧ್ಯಂತರ ಜಾಮೀನು ಪಡೆದುಕೊಂದು ಹೊರ ಹೋದರೆ ಮತ್ತು ಹೇಳಿಕೆಗಳನ್ನು ನೀಡಿದರೆ ಅದು ತನಿಖೆಯ ಹಳಿ ತಪ್ಪಿಸಬಹುದು ಎಂದು ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದವು.

ಕಾಂಗ್ರೆಸ್ ಹಿರಿಯ ನಾಯಕನ ಹೆಸರು ಉಲ್ಲೇಖಿಸಿದ ಅಗಸ್ಟಾ ಆರೋಪಿ ಮೈಕಲ್ ಕಾಂಗ್ರೆಸ್ ಹಿರಿಯ ನಾಯಕನ ಹೆಸರು ಉಲ್ಲೇಖಿಸಿದ ಅಗಸ್ಟಾ ಆರೋಪಿ ಮೈಕಲ್

ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ ಸಾಕ್ಷ್ಯಗಳನ್ನು ನಾಶಪಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮೈಕಲ್ ಪರ ವಕೀಲರು ವಾದಿಸಿದರು. ಅದನ್ನು ನ್ಯಾಯಾಲಯ ಮಾನ್ಯ ಮಾಡಲಿಲ್ಲ.

ಕ್ರಿಶ್ಚಿಯನ್ ಮೈಕಲ್ ನ ಮತ್ತಷ್ಟು ವಿಚಾರಣೆಗೆ ಸಿಬಿಐ ಕೋರ್ಟ್ ಅನುಮತಿ ಕ್ರಿಶ್ಚಿಯನ್ ಮೈಕಲ್ ನ ಮತ್ತಷ್ಟು ವಿಚಾರಣೆಗೆ ಸಿಬಿಐ ಕೋರ್ಟ್ ಅನುಮತಿ

ಕ್ರೈಸ್ತನಾದ ತಮಗೆ ಕಳೆದ ಕ್ರಿಸ್‌ಮಸ್‌ ಸಂದರ್ಭದಲ್ಲಿಯೂ ಪವಿತ್ರ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರಲಿಲ್ಲ ಎಂದು ಮೈಕಲ್ ಅರ್ಜಿಯಲ್ಲಿ ಬೇಸರ ವ್ಯಕ್ತಪಡಿಸಿದ್ದ.

English summary
A Delhi cour on Thursday rejected the Interim bail plea by AgustaWestland chopper scam alleged middleman Christian Michel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X