ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಇಂತೂ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಗಂಭೀರ್

|
Google Oneindia Kannada News

ನವದೆಹಲಿ, ಮಾರ್ಚ್ 28: ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ಭಾರತೀಯ ಜನತಾ ಪಕ್ಷ ಸೇರಿದರೂ ಚುನಾವಣೆ ಸ್ಪರ್ಧಿಸಲು ಟಿಕೆಟ್ ಖಾತ್ರಿಯಾಗಿರಲಿಲ್ಲ. ಆದರೆ, ದೆಹಲಿ ಬಿಜೆಪಿಯ ಘಟಕವು ಇತ್ತೀಚೆಗೆ ಸಿದ್ಧಪಡಿಸಿರುವ 31 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಗೌತಮ್ ಗಂಭೀರ್ ಹೆಸರನ್ನು ಸೇರಿಸಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದಕ್ಕೂ ಮುನ್ನ 21 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಚುನಾವಣಾ ಸಮಿತಿ ಸಿದ್ಧಪಡಿಸಿತ್ತು. ಆದರೆ, ಬಿಜೆಪಿ ಹೈಕಮಾಂಡ್ ಈ ಪಟ್ಟಿಯನ್ನು ತಿರಸ್ಕರಿಸಿ, ಪಟ್ಟಿ ಬದಲಾಯಿಸುವಂತೆ ಸೂಚಿಸಿತ್ತು. ಹೀಗಗಿ, ಹಳೆ ಪಟ್ಟಿಗೆ ಇನ್ನು 10 ಪಟ್ಟಿ ಹೆಸರನ್ನು ಸೇರಿಸಿ ಹೊಸ ಪಟ್ಟಿಯನ್ನು ನೀಡಲಾಗಿದೆ ಎಂದು ದೆಹಲಿ ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಲೋಕಸಭೆ ಚುನಾವಣೆ ಸ್ಪರ್ಧೆಗೆ ಒಲ್ಲೆ ಎಂದ ವಿರೇಂದ್ರ ಸೆಹ್ವಾಗ್ಲೋಕಸಭೆ ಚುನಾವಣೆ ಸ್ಪರ್ಧೆಗೆ ಒಲ್ಲೆ ಎಂದ ವಿರೇಂದ್ರ ಸೆಹ್ವಾಗ್

ವಕೀಲೆ ಮೀನಾಕ್ಷಿ ಲೇಖಿ ಅವರು ಪ್ರತಿನಿಧಿಸುತ್ತಿರುವ ನವದೆಹಲಿ ಲೋಕಸಭೆ ಸ್ಥಾನದಿಂದ ಸ್ಪರ್ಧಿಸಲು ಗೌತಮ್ ಗಂಭೀರ್ ಅವರು ಬಯಸಿದ್ದಾರೆ. ಹೀಗಾಗಿ, ಹೊಸ ಪಟ್ಟಿಯಲ್ಲಿ ರವೀಂದ್ರ ಗುಪ್ತಾ ಹಾಗೂ ಸತೀಶ್ ಉಪಾಧ್ಯಾಯ್ ಅವರ ಹೆಸರು ಕೂಡಾ ಸೇರಿಸಲಾಗಿದೆ.

 After snub, Gautam Gambhir in Delhi BJPs fresh list of 31 probable candidates

ಅಜರ್, ಸಿಧು ಹಾದಿಯಲ್ಲಿ ಗಂಭೀರ್, ರಾಜಕೀಯಕ್ಕೆ ಎಂಟ್ರಿ? ಅಜರ್, ಸಿಧು ಹಾದಿಯಲ್ಲಿ ಗಂಭೀರ್, ರಾಜಕೀಯಕ್ಕೆ ಎಂಟ್ರಿ?

ಮೋಹನ್ ಲಾಲ್ ಗಿಹಾರಾ, ಯೋಗೇಂದ ಚಂಡೋಲಿಯಾ, ರವೀಂದ್ರ ಇಂದರ್ ರಾಜ್ ಅವರು ಉತ್ತರ ಪಶ್ಚಿಮ ದೆಹಲಿ (ಮೀಸಲು) ಕ್ಷೇತ್ರದ ಟಿಕೆಟ್ ಗಾಗಿ ಕಾದಿದ್ದಾರೆ.

ಲೋಕಸಭೆ ಚುನಾವಣೆ 2019: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅಚ್ಚರಿ ಲೋಕಸಭೆ ಚುನಾವಣೆ 2019: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅಚ್ಚರಿ

ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ನಕುಲ್ ಭಾರದ್ವಾಜ್ ಅವರಿಗೆ ಪೂರ್ವ ದೆಹಲಿಯ ಸ್ಥಾನ ಸಿಗುವ ಸಾಧ್ಯತೆಯಿದೆ.

English summary
The BJP's Delhi unit has prepared a fresh list of 31 probable candidates for the seven Lok Sabha seats in the national capital, and has included the name of former cricketer Gautam Gambhir in it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X